ಹಿನ್ನೋಟ 2022: ಕ್ರೀಡಾ ಜಗತ್ತಿನಲ್ಲಿ 'ಝಗಮಗಿಸಿ' ಭಾರತವೇ ಹೆಮ್ಮೆ ಪಡುವಂತೆ ಮಾಡಿದ ಬೆಂಗಳೂರಿನ ಕುವರರು!

ಬೆಂಗಳೂರು ಬಹುಮುಖಿ ನಗರವಾಗಿದ್ದು, ಇತಿಹಾಸವನ್ನು ನಿರ್ಮಿಸಲು ಮತ್ತು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ ಕೆಲವು ಪ್ರತಿಭಾವಂತ ಕ್ರೀಡಾಪಟುಗಳಿಗೆ ನೆಲೆಯಾಗಿದೆ.
ರೋಜರ್ ಬಿನ್ನಿ, ರೋಹನ್ ಬೋಪಣ್ಣ, ಲಕ್ಷ್ಯ ಸೇನ್ ಮತ್ತು ನಿರಂಜನ್
ರೋಜರ್ ಬಿನ್ನಿ, ರೋಹನ್ ಬೋಪಣ್ಣ, ಲಕ್ಷ್ಯ ಸೇನ್ ಮತ್ತು ನಿರಂಜನ್

ಬೆಂಗಳೂರು: ಬೆಂಗಳೂರು ಬಹುಮುಖಿ ನಗರವಾಗಿದ್ದು, ಇತಿಹಾಸವನ್ನು ನಿರ್ಮಿಸಲು ಮತ್ತು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ ಕೆಲವು ಪ್ರತಿಭಾವಂತ ಕ್ರೀಡಾಪಟುಗಳಿಗೆ ನೆಲೆಯಾಗಿದೆ. ಬೆಂಗಳೂರು ಮೂಲದ ಹಲವು  ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ತಮ್ಮ  ಪ್ರತಿಭೆ ಪ್ರದರ್ಶಿಸಿ ದೇಶದ ಗಮನ ಸೆಳೆದಿದಿದ್ದಾರೆ.

ಬ್ಯಾಡ್ಮಿಂಟನ್

ಭಾರತ ಥಾಮಸ್ ಕಪ್ ಎತ್ತಿ ಹಿಡಿದಾಗ ವಿಮಲ್ ಕುಮಾರ್ ಅವರ ಕನಸು ನನಸಾಗಿತ್ತು. ಬ್ಯಾಂಕಾಕ್‌ನಲ್ಲಿ ನಡೆದ ಫೈನಲ್‌ನಲ್ಲಿ ಭಾರತ 3-0 ಗೋಲುಗಳಿಂದ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು ಸೋಲಿಸಿತು.

ಲಕ್ಷ್ಯ ಸೇನ್, ಶ್ರೀಕಾಂತ್ ಕಿಡಂಬಿ, ಚಿರಾಗ್ ಶೆಟ್ಟಿ, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಪ್ರಣಯ್ ಎಚ್ ಎಸ್, ಧ್ರುವ ಕಪಿಲಾ, ಅನುರಾಗ್ ಠಾಕೂರ್, ಅರ್ಜುನ್ ಎಂಆರ್ ಮತ್ತು ಪ್ರಿಯಾಂಶು ರಾಜಾವತ್ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಟೀಮ್ ಇಂಡಿಯಾದ ಮ್ಯಾನೇಜರ್ ಕುಮಾರ್ ಅವರು ಸಿಟಿ ಎಕ್ಸ್ ಪ್ರೆಸ್ ನೀಡಿದ್ದ  ಹಿಂದಿನ ಸಂದರ್ಶನದಲ್ಲಿ "ಇದು ಭಾರತಕ್ಕೆ ಉತ್ತಮ ವರ್ಷವಾಗಿದೆ, ದೇಶವು ತನ್ನ ಮೊದಲ ಥಾಮಸ್ ಕಪ್ ಗೆಲುವಿಗೆ ಸಾಕ್ಷಿಯಾಗಿದೆ" ಎಂದು ಹೇಳಿದ್ದರು.

ಬೆಂಗಳೂರಿನ ಪ್ರಕಾಶ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಲಕ್ಷ್ಯ ಸೇನ್ ಭಾರತ ಬ್ಯಾಡ್ಮಿಂಟನ್‌ ಕ್ಷೇತ್ರದ ನವಪ್ರತಿಭೆ.

21 ವರ್ಷದ ಲಕ್ಷ್ಯ ಥಾಮಸ್ ಕಪ್ ವಿಜೇತ ತಂಡದಲ್ಲಿದ್ದರು. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ  ಸಾಧನೆ ಮಾಡಿದರು. ಅದೇ ಕೂಟದಲ್ಲಿ ಮಿಶ್ರ ತಂಡ ವಿಭಾಗದಲ್ಲಿ ಕಂಚು ಜಯಿಸಿದರು. ಪ್ರತಿಷ್ಠಿತ ಆಲ್‌ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ ಅಪ್ ಸಾಧನೆ ಮಾಡಿದರು. ಭಾರತದ ಎರಡನೇ ಅತ್ಯುನ್ನತ ಕ್ರೀಡಾ ಗೌರವ ಅರ್ಜುನ ಪ್ರಶಸ್ತಿ ಪಡೆದಿದ್ದಾರೆ.
ಈಜು
ಬೆಂಗಳೂರು ಮೂಲದ ಈಜುಗಾರ ಮತ್ತು ಪ್ಯಾರಾಲಿಂಪಿಯನ್ ನಿರಂಜನ್ ಮುಕುಂದನ್ ಅವರು ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಏಳನೇ ಸ್ಥಾನ ಪಡೆದ ಮುಕುಂದನ್, ಪಂದ್ಯಾವಳಿಯಲ್ಲಿ ಭಾರತದ 200 ಪ್ಲಸ್ ಅಥ್ಲೀಟ್‌ಗಳಲ್ಲಿ ಒಬ್ಬರಾಗಿದ್ದರು. ಬರ್ಮಿಂಗ್‌ಹ್ಯಾಮ್‌ನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ನಡೆದ ಮಹಾ ಉದ್ಘಾಟನೆಯ ಭಾಗವೂ ಆಗಿದ್ದರು. 2023ರ ವಿಶ್ವ ಚಾಂಪಿಯನ್‌ಶಿಪ್‌ಗೂ ಅರ್ಹತೆ ಪಡೆದಿದ್ದಾರೆ.

ಕ್ರಿಕೆಟ್

ರೋಜರ್ ಬಿನ್ನಿ ಅವರನ್ನು ಬಿಸಿಸಿಐನ 36 ನೇ ಮತ್ತು ಹಾಲಿ ಅಧ್ಯಕ್ಷರಾಗಿ ನೇಮಿಸಲಾಯಿತು.

1983 ರ ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಿದ್ದ ಬೆಂಗಳೂರು ಮೂಲದ ರೋಜರ್ ಬಿನ್ನಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷರಾಗಿದ್ದರು. ಭಾರತದ ತವರು ಸರಣಿಯನ್ನು ಪ್ರಸಾರ ಮಾಡುವ ಮಾಧ್ಯಮ ಹಕ್ಕುಗಳನ್ನು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಬಿನ್ನಿ ಸೊಸೆ ಕೆಲಸ ಮಾಡುತ್ತಿರುವುದರಿಂದ ಬಿನ್ನಿ ಹಿತಾಸಕ್ತಿ ಸಂಘರ್ಷವನ್ನು ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಟೆನ್ನಿಸ್

ರೋಹನ್ ಬೋಪಣ್ಣ ತನ್ನ ಮೊದಲ ಫ್ರೆಂಚ್ ಓಪನ್ ಪುರುಷರ ಡಬಲ್ಸ್ ಸೆಮಿಫೈನಲ್‌ಗೆ ಅರ್ಹತೆ ಪಡೆದ ನಂತರ ತನ್ನ ಡಬಲ್ಸ್ ಪಾಲುದಾರ ಮ್ಯಾಟ್ವೆ ಮಿಡೆಲ್‌ಕೂಪ್‌ನೊಂದಿಗೆ ಇತಿಹಾಸ ನಿರ್ಮಿಸಿದರು. ಅವರ ಅರ್ಹತೆ ಡಬಲ್ಸ್‌ನಲ್ಲಿ ಅಗ್ರ 25ಕ್ಕೆ ಮರಳಲು ಸಹಾಯ ಮಾಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com