2023ರ ಮುನ್ನೋಟ: ಈ ವರ್ಷ ಸದ್ದು ಮಾಡಲು ಸಿದ್ಧತೆ ನಡೆಸುತ್ತಿರುವ ರಾಜ್ಯದ ಪ್ರಮುಖ ನಾಯಕರಿವರು...

ವರ್ಷದ ಕೊನೆ ಬಂತೆಂದರೆ ಕಳೆದು ಹೋದ ದಿನಗಳ ಮೆಲುಕು ಹಾಕುವುದು ಸಹಜ. ಇದು ಮಾತ್ರವಲ್ಲ, ಮುಂಬರುವ ವರ್ಷದಲ್ಲಿ ಏನೇನಾಗಬಹುದು ಎಂಬ ನಿರೀಕ್ಷೆಗಳ ಪಟ್ಟಿಯೂ ಇದ್ದೇ ಇರುತ್ತದೆ. ಸಿಲಿಕಾನ್ ಸಿಟಿ ಶರವೇಗದಲ್ಲಿ ಬೆಳೆಯುತ್ತಿದ್ದು ರಾಜಧಾನಿ ಬೆಂಗಳೂರಿನತ್ತ ಇಡೀ ವಿಶ್ವವೇ ತಿರುಗಿ ನೋಡುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವರ್ಷದ ಕೊನೆ ಬಂತೆಂದರೆ ಕಳೆದು ಹೋದ ದಿನಗಳ ಮೆಲುಕು ಹಾಕುವುದು ಸಹಜ. ಇದು ಮಾತ್ರವಲ್ಲ, ಮುಂಬರುವ ವರ್ಷದಲ್ಲಿ ಏನೇನಾಗಬಹುದು ಎಂಬ ನಿರೀಕ್ಷೆಗಳ ಪಟ್ಟಿಯೂ ಇದ್ದೇ ಇರುತ್ತದೆ. ಸಿಲಿಕಾನ್ ಸಿಟಿ ಶರವೇಗದಲ್ಲಿ ಬೆಳೆಯುತ್ತಿದ್ದು ರಾಜಧಾನಿ ಬೆಂಗಳೂರಿನತ್ತ ಇಡೀ ವಿಶ್ವವೇ ತಿರುಗಿ ನೋಡುತ್ತಿದೆ.

ಮಾಹಿತಿ ತಂತ್ರಜ್ಞಾನ ನಗರಿ ಎಂದೇ ಪ್ರಸಿದ್ಧಿ ಪಡೆದಿರುವ ಸಿಲಿಕಾನ್‌ ಸಿಟಿಗೆ ಎಷ್ಟೇ ಮೂಲಸೌಕರ್ಯ ಕಲ್ಪಿಸಿದರೂ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ನಗರವು 2023ರ ವರ್ಷಕ್ಕೆ ಹೊರಳಿದ್ದು, ಈ ಹಿನ್ನೆಲೆಯಲ್ಲಿ ಹೊಸ ವರ್ಷದಲ್ಲಿ ನಡೆಯುವ ವಿದ್ಯಾಮಾನಗಳು ಕುರಿತು ಹಾಗೂ ರಾಜಕೀಯದಿಂದ ಕ್ರೀಡೆಯವರೆಗೂ ನಾಯಕರು ಯಾವ ರೀತಿಯ ಸಿದ್ಥತೆಗಳ ನಡೆಸಿದ್ದಾರೆಂಬುದರ ಕುರಿತ ಇಣುಕುನೋಟ ಇಲ್ಲಿದೆ...

ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
2023ರ ವಿಧಾನಸಭೆ ಚುನಾವಣೆ ಬೊಮ್ಮಾಯಿ ನಾಯಕತ್ವಕ್ಕೆ ದೊಡ್ಡ ಪರೀಕ್ಷೆಯಾಗಲಿದೆ. ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಪ್ರಮುಖ ಚುನಾವಣಾ ತಂತ್ರವಾಗಿ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಚುನಾವಣೆಗೆ ಎರಡು ತಿಂಗಳಿರುವಾಗಲೇ ಸಿಎಂ ಬೊಮ್ಮಾಯಿ ಅವರು, ಫೆಬ್ರವರಿ ತಿಂಗಳಿನಲ್ಲಿ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಇದು ಸರ್ಕಾರದ ರಿಪೋರ್ಟ್ ಕಾರ್ಡ್ ಆಗಿರಲಿದ್ದು, ದೊಡ್ಡ ಮಟ್ಟದ ಘೋಷಣೆಗಳನ್ನು ಮಾಡುವ ಸಾಧ್ಯತೆಗಳಿವೆ.

ಬಿಎಸ್ ಯಡಿಯೂರಪ್ಪ, ಮಾಜಿ ಸಿಎಂ ಮತ್ತು ಬಿಜೆಪಿಯ ಹಿರಿಯ ನಾಯಕ
ಲಿಂಗಾಯತ ಪ್ರಬಲ ವ್ಯಕ್ತಿಯನ್ನು ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರನ್ನಾಗಿ ನೇಮಿಸಿದೆ. ಕಿರಿಯ ನಾಯಕರಿಗೆ ದಾರಿ ಮಾಡಿಕೊಡಲು ಬಿಜೆಪಿ ಅವರನ್ನು ಬದಿಗೊತ್ತುವ ಬಗ್ಗೆ ಮಾತುಕತೆಗಳು ನಡೆದಿದ್ದರೂ, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವ ಬಿಜೆಪಿಗೆ ಪ್ರಬಲ ಲಿಂಗಾಯತ ಸಮುದಾಯದ ಬೆಂಬಲವನ್ನು ಉಳಿಸಿಕೊಳ್ಳುವುದು ನಿರ್ಣಾಯಕವಾಗಿದೆ. ಈ ಹಿನ್ನೆಲೆಯಲ್ಲಿ 2023 ರ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಪಾತ್ರ ಮುಖ್ಯವಾಗಿದೆ.

ಡಿಕೆ ಶಿವಕುಮಾರ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು
ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಡಿಕೆ ಶಿವಕುಮಾರ್ ಅವರಿಗೆ, 2023 ರ ಚುನಾವಣೆಯಲ್ಲಿ ಪಕ್ಷದ ಗೆಲುವನ್ನು ಖಚಿತಪಡಿಸಿಕೊಳ್ಳುವುದು ಅವರ ನಾಯಕತ್ವಕ್ಕೆ ಎದುರಾಗಿರುವ ದೊಡ್ಡ ಸವಾಲಾಗಿದೆ. ಕೆಪಿಸಿಸಿ ಮುಖ್ಯಸ್ಥರಾಗಿರುವ ಅವರು, ಪಕ್ಷವು ಒಗ್ಗಟ್ಟಿನ ಘಟಕವಾಗಿ ಚುನಾವಣೆ ಎದುರಿಸುವುದನ್ನು ಖಚಿತಪಡಿಸಿಕೊಳ್ಳಬೇಕಿದೆ.

ಎಚ್‌ಡಿ ಕುಮಾರಸ್ವಾಮಿ, ಮಾಜಿ ಸಿಎಂ ಮತ್ತು ಹಿರಿಯ ಜೆಡಿಎಸ್ ನಾಯಕ
ಹಳೇ ಮೈಸೂರು ಭಾಗದಲ್ಲಿ ಗಟ್ಟಿಯಾದ ಹಿಡಿತ ಹೊಂದಿರುವ ಜನತಾ ದಳ (ಜಾತ್ಯತೀತ) ಪಕ್ಷವು ರಾಜ್ಯದ ಇತರ ಭಾಗಗಳಲ್ಲಿಯೂ ತನ್ನ ಬಲ ಸಾಧಿಸಲು ಪ್ರಯತ್ನಿಸುತ್ತಿದೆ. 2023ರ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಸಿಗದೇ ಹೋದಲ್ಲಿ ಕುಮಾರಸ್ವಾಮಿಯವರು ಕಾದು ನೋಡಿ ಪ್ರಮುಖ ನಿರ್ಧಾರ ಕೈಗೊಳ್ಳುವಲ್ಲಿ ಮುಖ್ಯ ಪಾತ್ರವಹಿಸಲಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ನೊಂದಿಗೆ ರಚನೆಯಾದ ಸಮ್ಮಿಶ್ರ ಸರ್ಕಾರಗಳಲ್ಲಿ ಕುಮಾರಸ್ವಾಮಿಯವರು ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದರು.

ಗಾಲಿ ಜನಾರ್ದನ ರೆಡ್ಡಿ, ಮಾಜಿ ಸಚಿವ ಮತ್ತು ಗಣಿ ಉದ್ಯಮಿ
ಬಿಜೆಪಿಯಲ್ಲಿ ಪಕ್ಕಕ್ಕೆ ಸರಿದಿರುವ ಬಗ್ಗೆ ಅಸಮಾಧಾನಗೊಂಡ ಗಣಿ ಉದ್ಯಮಿ-ಬಳ್ಳಾರಿಯಿಂದ ರಾಜಕಾರಣಿಯಾಗಿ ಪರಿವರ್ತನೆಗೊಂಡ ಗಾಲಿ ಜನಾರ್ಧನ ರೆಡ್ಡಿಯವರು, 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ' ಎಂಬ ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸಿದ್ದಾರೆ. 2008 ರಲ್ಲಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರೆಡ್ಡಿಯವರು, 2023 ರಲ್ಲಿ ಛಾಪು ಮೂಡಿಸುವ ಭರವಸೆ ಹೊಂದಿದ್ದಾರೆ.

ಎಂಎ ಸಲೀಂ, ವಿಶೇಷ ಪೊಲೀಸ್ ಆಯುಕ್ತರು (ಸಂಚಾರ), ಬೆಂಗಳೂರು ನಗರ
ಎಡಿಜಿಪಿ ಎಂಎ ಸಲೀಂ ಅವರು ಅಧಿಕಾರ ವಹಿಸಿಕೊಂಡ ಕೂಡಲೇ ಬೆಂಗಳೂರಿನ ಸಂಚಾರದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ತರುತ್ತಿದ್ದಾರೆ. ಟ್ರಾಫಿಕ್ ನಿರ್ವಹಣೆಯಲ್ಲಿ ಅವರ ಅನುಭವವು ನಗರದ ದಟ್ಟಣೆಯನ್ನು ಸುಧಾರಿಸಿದೆಯಾದರೂ, ಅವರು ತಮ್ಮ ಪಟ್ಟಿಯಲ್ಲಿ ಇನ್ನು ಹಲವಾರು ಯೋಜನೆಗಳನ್ನು ಹೊಂದಿದ್ದಾರೆ. ಈ ಬದಲಾವಣೆಗಳು ದೀರ್ಘಾವಧಿಯಲ್ಲಿ ನಗರದ ಸಂಚಾರ ವ್ಯವಸ್ಥೆಯಲ್ಲಿ ಸಹಾಯ ಮಾಡುತ್ತವೆಯೇ ಎಂದು ಬೆಂಗಳೂರಿಗರು ಕಾದು ನೋಡಬೇಕಾಗಿದೆ.

ರೋಜರ್ ಬಿನ್ನಿ, ಬಿಸಿಸಿಐ ಅಧ್ಯಕ್ಷ
ರೋಜರ್ ಬಿನ್ನಿ 1983 ರಲ್ಲಿ ವಿಶ್ವಕಪ್ ವಿಜೇತ ಕ್ರಿಕೆಟ್ ತಂಡದ ಸದಸ್ಯ, ಕರ್ನಾಟಕದ 67 ವರ್ಷದ ಮಾಜಿ ಭಾರತೀಯ ವೇಗಿ ಆಟಗಾರರಿಗೆ ಗಾಯಗಳನ್ನು ತಡೆಯುವುದರಿಂದ ಹಿಡಿದು ದೇಶದ ಪಿಚ್‌ಗಳನ್ನು ಸುಧಾರಿಸುವವರೆಗೆ ಹಲವಾರು ಆದ್ಯತೆಗಳನ್ನು ಹೊಂದಿದ್ದಾರೆ. ಉತ್ತಮ ನಿರ್ವಹಣೆಗಾಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ಅವರು ತರುವ ಬದಲಾವಣೆಗಳನ್ನು ರಾಷ್ಟ್ರವು ಈಗ ಎದುರು ನೋಡುತ್ತಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (2019-22) ಅಧ್ಯಕ್ಷರಾಗಿಯೂ ರೋಜರ್ ಬಿನ್ನಿ ಅನುಭವ ಹೊಂದಿದ್ದಾರೆ.

ಅಪ್ರಮೇಯ ರಾಧಾಕೃಷ್ಣ, ಕೂ ಆ್ಯಪ್'ನ ಸಹ ಸ್ಥಾಪಕ ಹಾಗೂ ಸಿಇಒ
ಬೆಂಗಳೂರು ಮೂಲದ ಕೂ ಜಾಗತಿಕವಾಗಿ ಎರಡನೇ ಅತಿ ದೊಡ್ಡ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಆಗಿ ಹೊರಹೊಮ್ಮಿದೆ. ಪ್ರಪಂಚದಾದ್ಯಂತದ ಎಲ್ಲಾ ಬಳಕೆದಾರರಿಗೆ ವೇದಿಕೆಯು ಉಚಿತವಾಗಿದೆ. ಪ್ರಪಂಚದಾದ್ಯಂತ ಬಳಕೆದಾರರು ತಮ್ಮ ಮಾತೃಭಾಷೆಯಲ್ಲಿ ಆನ್‌ಲೈನ್‌ನಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸಲು ಸಕ್ರಿಯಗೊಳಿಸುವುದು ಇದರ ಉದ್ದೇಶವಾಗಿದೆ. ಟ್ವಿಟರ್ ಪ್ರತಿಸ್ಪರ್ಧಿಯಾಗಿರುವ ಕೂ ಇತ್ತೀಚೆಗೆ ಬ್ರೆಜಿಲ್‌ನಲ್ಲಿ ಪೋರ್ಚುಗೀಸ್ ಭಾಷೆಯನ್ನು ತನ್ನ ಆ್ಯಪ್ ನಲ್ಲಿ ಸೇರ್ಪಡೆಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com