ದೇಶ

ಕಂಪ್ಯೂಟರ್‌ಗೆ ಫುಲ್ ಸ್ಪೀಡ್

Published On :

ನನ್ನ ಕಂಪ್ಯೂಟರ್ ತುಂಬಾ ಸ್ಲೋ ಆಗಿಬಿಟ್ಟಿದೆ ಎಂದು ಆರೋಪಿಸುವವರು ಎಷ್ಟೋ ಮಂದಿ. ಇತರೆ ವಸ್ತುಗಳಂತೆ ಕಂಪ್ಯೂಟರ್‌ಗೆ ಕೂಡ ಉತ್ತಮ ನಿರ್ವಹಣೆಯ ಅಗತ್ಯವಿದೆ ಎಂಬುದನ್ನು ಅವರು ಮರೆತಿರುತ್ತಾರೆ. ನಿಮ್ಮ ಸಿಸ್ಟಂ ವೇಗವಾಗಿ ಹಾಗೂ ದಕ್ಷವಾಗಿ ಕೆಲಸ ಮಾಡಲು ಏನು ಮಾಡಬೇಕೆಂಬ ಮಾಹಿತಿ ಇಲ್ಲಿದೆ.

ನಿರಂತರ ಅಪ್‌ಡೇಟ್
ತನ್ನಿಂತಾನೇ ಅಪ್‌ಡೇಟ್ ಆಗುವ ವ್ಯವಸ್ಥೆ ಬಗ್ಗೆ ಜಾಗೃತೆ ವಹಿಸಿ. ಆಟೋಮ್ಯಾಟಿಕ್ ಅಪ್‌ಡೇಟ್ ಉತ್ತಮವಾದರೂ ಅದು ನಿಮ್ಮ ಕಂಪ್ಯೂಟರ್ ಅನ್ನು ನಿಧಾನವಾಗಿಸುತ್ತದೆ. ಕೆಲವೊಮ್ಮೆ ಬಗ್‌ಗಳಿಂದಾಗಿ ನಿಮ್ಮ ಮೌಲ್ಯಯುತ ದತ್ತಾಂಶಗಳು ನಾಶವಾಗುವ ಸಾಧ್ಯತೆಯೂ ಇದೆ. ಕಂಪ್ಯೂಟರ್‌ನಲ್ಲಿನ ಅಪ್‌ಡೇಟ್ ಅನ್ನು ಬದಲಾಯಿಸಬೇಕೆಂದರೆ Start Menu- All programsಗೆ ಹೋಗಿ, ವಿಂಡೋಸ್ ಅಪ್‌ಡೇಟ್ ಐಕಾನ್ ಅನ್ನು ಕ್ಲಿಕ್ ಮಾಡಿ.
ಸೂಕ್ತ ಆ್ಯಂಟಿ ವೈರಸ್
ಸಾಮಾನ್ಯವಾಗಿ ಆ್ಯಂಟಿ ವೈರಸ್ ಇನ್‌ಸ್ಟಾಲ್ ಮಾಡುವುದರಿಂದ ಸಿಸ್ಟಂ ನಿಧಾನವಾಗುತ್ತದೆ. ಹಾಗಾಗಿ ಪರಿಣಾಮಕಾರಿಯಾದ ಹಾಗೂ ಕಂಪ್ಯೂಟರ್‌ಗೆ ಹಗುರವಾಗಿರುವ ಆ್ಯಂಟಿ ವೈರಸ್ ಅನ್ನೇ ಆಯ್ಕೆ ಮಾಡಿ. ಖರೀದಿಗೆ ಮುನ್ನ ಗೆಳೆಯರ ಅನುಭವ ಪಡೆಯಿರಿ ಅಥವಾ ಆನ್‌ಲೈನ್ ರಿಸರ್ಚ್ ಕೈಗೊಳ್ಳಿ.
ವಿಷಯ ಗೊತ್ತಿರಲಿ
ಕಂಪ್ಯೂಟರ್‌ನಲ್ಲಿ ರನ್ ಆಗುತ್ತಿರುವ ಪ್ರೋಗ್ರಾಂ ಬಗ್ಗೆ ತಿಳಿದಿರಲಿ. ಈ ಮೂಲಕ ಸಿಸ್ಟಂಗೆ ಹಾನಿಯಾಗುವುದನ್ನು ತಪ್ಪಿಸಿ. ವಿಂಡೋಸ್ ಟಾಸ್ಕ್ ಮ್ಯಾನೇಜರ್‌ಗೆ (CTRL+ALT+DEL) ಕರೆ ಮಾಡಿ, ಆ ಸಂದರ್ಭದಲ್ಲಿ ರನ್ ಆಗುತ್ತಿರುವ ಪ್ರೋಗ್ರಾಂ ಬಗ್ಗೆ ಮಾಹಿತಿ ಪಡೆಯಿರಿ.
ಟೂಲ್ ಬಾರ್ ಕ್ಲೀನ್
ಟೂಲ್ ಬಾರ್ ಹಾಗೂ ಸ್ಟಾರ್ಟ್ ಮೆನುವನ್ನು ಆಗಾಗ್ಗೆ ಕ್ಲೀನ್ ಮಾಡುತ್ತಿರಿ. ಅನಗತ್ಯವಾಗಿ ರನ್ ಆಗುತ್ತಿರುವ ಸಾಫ್ಟ್‌ವೇರ್‌ಗಳನ್ನು ತೆಗೆದುಹಾಕಿ. ಟಾಸ್ಕ್ ಬಾರ್ (ವಿಶೇಷವಾಗಿ ಗಡಿಯಾರದ ಬಳಿ ಇರುವ ಐಕಾನ್)ನಲ್ಲಿರುವ ಎಲ್ಲವೂ ನಿರಂತರವಾಗಿ ಕಾರ್ಯನಿರ್ವಹಿಸುವುದರಿಂದ ಅವು ನಿಮ್ಮ ಕಂಪ್ಯೂಟರ್‌ನ ವೇಗವನ್ನು ಕಡಿಮೆಮಾಡುತ್ತವೆ.
ಫೈರ್‌ವಾಲ್ ಸಾಫ್ಟ್‌ವೇರ್
ಫೈರ್‌ವಾಲ್ ಸಾಫ್ಟ್‌ವೇರ್ ಅಳವಡಿಸಿಕೊಳ್ಳಿ. ಇದನ್ನು ಆ್ಯಕ್ಟಿವೇಟ್ ಮಾಡಲು, ಕಂಟ್ರೋಲ್ ಪ್ಯಾನೆಲ್‌ಗೆ ಹೋಗಿ ವಿಂಡೋಸ್ ಫೈರ್‌ವಾಲ್ ಕ್ಲಿಕ್ ಮಾಡಿ. ನಂತರ 'ಆನ್‌' ಬಟನ್ ಒತ್ತಿರಿ.
ಉತ್ತಮ ನಿರ್ವಹಣೆ
ತಿಂಗಳಿಗೊಮ್ಮೆಯಾದರೂ ಕಂಪ್ಯೂಟರ್‌ನ ಸಂಪೂರ್ಣ ನಿರ್ವಹಣೆ ಮಾಡಿ. ಇದರಲ್ಲಿ ಡಿಸ್ಕ್ ಡಿಫ್ರಾಗ್ಮೆಂಟೇಷನ್ ಕೂಡ ಸೇರಿದೆ. ಇದಕ್ಕಾಗಿ ಹೀಗೆ ಮಾಡಿ. Start-Accessories-System Tools-Disk Cleanup-Disk Defra. ಸಿಸ್ಟಂ ವೇಗವಾಗಿ ಕೆಲಸ ಮಾಡಲು ಇದು ಸಹಾಯಕ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.