ದೇಶ

ವೆಚ್ಚ ವಿವರ ಸಲ್ಲಿಸಲು ವಿಫಲ: 2171 ಅಭ್ಯರ್ಥಿಗಳು ಅನರ್ಹ

Published On :

ನವದೆಹಲಿ: ಸಂಸತ್ ಹಾಗೂ ಅಸೆಂಬ್ಲಿ ಚುನಾವಣೆ ವೇಳೆ ವೆಚ್ಚದ ವಿವರ ನೀಡದ ಸುಮಾರು 2,171 ಅಭ್ಯರ್ಥಿಗಳನ್ನು 3 ವರ್ಷಗಳ ಕಾಲ ಅನರ್ಹಗೊಳಿಸಿ ಕೇಂದ್ರ ಚುನಾವಣಾ ಆಯೋಗ ಆದೇಶ ನೀಡಿದೆ. ಚುನಾವಣೆಯಲ್ಲಿ ಹಣ ಬಲ ಬಳಸುವುದನ್ನು ತಡೆಯುವುದೇ ಇದರ ಪ್ರಮುಖ ಉದ್ದೇಶ ಎನ್ನಲಾಗಿದೆ. ಅನರ್ಹಗೊಂಡ ಅಭ್ಯರ್ಥಿಗಳಲ್ಲಿ ಅತಿ ಹೆಚ್ಚು ಅಂದರೆ 260 ಮಂದಿ ಮಹಾರಾಷ್ಟ್ರದವರು. ನಂತರದ ಸ್ಥಾನಗಳನ್ನು ಛತ್ತೀಸ್‌ಗಡ (259), ಹರ್ಯಾಣ (197), ಒಡಿಶಾ (188), ಮಧ್ಯಪ್ರದೇಶ (179), ಉತ್ತರ ಪ್ರದೇಶ (159), ಜಾರ್ಖಂಡ್ (118) ಮತ್ತು ತಮಿಳುನಾಡು (97) ಪಡೆದುಕೊಂಡಿವೆ.
 ಅನರ್ಹಗೊಂಡವರಲ್ಲಿ ಹೆಚ್ಚಿನ ಅಭ್ಯರ್ಥಿಗಳು     ವೆಚ್ಚದ ವಿವರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕೆಲವರು ನಿಗದಿತ 30 ದಿನಗಳೊಳಗೆ ವೆಚ್ಚದ ವಿವರ ಸಲ್ಲಿಸಿದ್ದರೂ, ಅವುಗಳು ಸೂಕ್ತ ಕ್ರಮದಲ್ಲಿರಲಿಲ್ಲ. ಹಾಗಾಗಿ ಅಂಥವರನ್ನೂ ಅನರ್ಹಗೊಳಿಸಲಾಗಿದೆ ಎಂದು ಆಯೋಗ ತಿಳಿಸಿದೆ.
 ಈ ಹಿಂದೆ ಅಂದರೆ 2009ರಲ್ಲಿ ಕೇಂದ್ರ ಚುನಾವಣಾ ಆಯೋಗವು ಬರೋಬ್ಬರಿ 3,275 ಮಂದಿ ಅಭ್ಯರ್ಥಿಗಳನ್ನು ಅನರ್ಹಗೊಳಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.