2016ರಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ!

ರಿಯಲ್ ಎಸ್ಟೇಟ್
ರಿಯಲ್ ಎಸ್ಟೇಟ್

ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆ ದರ ಇನ್ನೆರಡು ವರ್ಷಗಳಲ್ಲಿ ಚೀನಾವನ್ನು ಹಿಂದಿಕ್ಕಲಿದೆ!

ಹೀಗೆಂದು ಪ್ರತಿಷ್ಠಿತ ಅಂತಾರಾಷ್ಟ್ರೀಯ ಬ್ಯಾಂಕಿಂಗ್ ಸಂಸ್ಥೆ ಗೋಲ್ಡ್ ಮ್ಯಾನ್ ಸಂಸ್ಥೆ ಭವಿಷ್ಯ ನುಡಿದಿದೆ. 15 ವರ್ಷಗಳಿಂದ ಆರ್ಥಿಕ ಬೆಳವಣಿಗೆ ವಿಚಾರದಲ್ಲಿ ಭಾರತ ನೆರೆಯ ಚೀನಾದ ನಾಗಾಲೋಟಕ್ಕೆ ಸ್ಪರ್ಧೆಯೊಡ್ಡುತ್ತಲೇ ಇತ್ತು. ಆ ಸುದೀರ್ಘ ಹೋರಾಟದ ಫಲ ಇನ್ನೆರಡು ವರ್ಷಗಳಲ್ಲಿ ಸಿಗುವ ಸಾಧ್ಯತೆ ಇದೆ.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತವು ಚೀನಾದ ದೈತ್ಯ ಅರ್ಥ ವ್ಯವಸ್ಥೆಯನ್ನು ಹಿಂದಿಕ್ಕಲಿದೆ ಎಂದು ಸಂಸ್ಥೆ ಹೇಳಿದೆ.

ಈ ವರ್ಷ ಭಾರತದ ನೈಜ ಜಿಡಿಪಿ ಬೆಳವಣಿಗೆ ದರ ಚೀನಾಗಿಂತ ಕಡಿಮೆಯೇ ಇರಲಿದೆ. ಆದರೆ, 2016ರಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ ಶೇ. 6.8 ತಲುಪಲಿದೆ. ಈ ವೇಳೆ ಚೀನಾದ ಬೆಳವಣಿಗೆ ದರ ಶೇ. 6.7 ರಷ್ಟಿರಲಿದೆ ಎಂದು ಗೋಲ್ಡ್ ಮ್ಯಾನ್ ಸ್ಯಾಚ್ಸ್ನ ಇತ್ತೀಚಿನ ವರದಿಯೊಂದು ಹೇಳಿದೆ.

ರಿಯಲ್ ಎಸ್ಟೇಟ್ ಮಾರುಕಟ್ಟೆ ಕುಸಿತ ಹಾಗೂ ಪ್ರಾದೇಶಿಕ ಮಾರುಕಟ್ಟೆಯಲ್ಲಿ ಕೈಗಾರಿಕಾ ಉತ್ಪನ್ನಕ್ಕಿರುವ ಬೇಡಿಕೆ ಕುಸಿತದಿಂದಾಗಿ ಚೀನಾದ ಆರ್ಥಿಕ ಬೆಳವಣಿಗೆ ದರ ಕುಸಿಯಲಿದೆ. ಆದರೆ, ಭಾರತಕ್ಕೆ ಈ ಸಮಸ್ಯೆ ಕಾಡಲಿಕ್ಕಿಲ್ಲ ಎಂದು ಗೋಲ್ಡ್ ಮ್ಯಾನ್ನ ಭಾರತಕ್ಕೆ ಸಂಬಂಧಿಸಿದ ಮುಖ್ಯ ಆರ್ಥಿಕತಜ್ಞ ತುಷಾರ್ ಪೊಡ್ಡಾರ್ ಹೇಳಿದ್ದಾರೆ.

ಈ ನಡುವೆ, 18 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಡಿಮೆ ಭ್ರಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಸ್ಥಾನ ಚೀನಾಗಿಂತ ಮೇಲೇರಿದೆ. ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಬಿಲ್, ರಷ್ಯಾ, ಜಪಾನ್ ಮತ್ತು ಯುರೋಪ್ಗಿಂತ ಭಾರತದ ಆರ್ಥಿಕ ಬೆಳವಣಿಗೆ ದರ ಹೆಚ್ಚಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com