ಇನ್ಫೋಸಿಸ್ ಸಂಸ್ಥಾಪಕರಿಂದ ರು. 6,484 ಕೋಟಿ ಮೌಲ್ಯ ಷೇರು ಮಾರಾಟ

ಎನ್.ಆರ್ ನಾರಾಯಣ ಮೂರ್ತಿ
ಎನ್.ಆರ್ ನಾರಾಯಣ ಮೂರ್ತಿ

ಮುಂಬೈ: ಐಟಿ ಕ್ಷೇತ್ರದ ದಿಗ್ಗಜ ಎನ್ನಿಸಿಕೊಂಡಿರುವ ಇನ್ಫೋಸಿಸ್‌ ಸಂಸ್ಥೆಯ ಸಹ ಸ್ಥಾಪಕರಾದ ಎನ್.ಆರ್ ನಾರಾಯಣ ಮೂರ್ತಿ, ನಂದನ್ ನೀಲೆಕಣಿ, ಕೆ. ದಿನೇಶ್ ಮತ್ತು ಅವರ ಕುಟುಂಬ ಸದಸ್ಯರು ತಮ್ಮ ಒಡೆತನದಲ್ಲಿದ್ದ ಕಂಪೆನಿಯ ಡಾಲರ್ 1.1 ಬಿಲಿಯನ್(ರು. 6,484 ಕೋಟಿ) ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಈ ನಾಲ್ವರು ತಮ್ಮ ಒಡೆತನದಲ್ಲಿದ್ದ ಒಟ್ಟು 326 ಲಕ್ಷ ಷೇರುಗಳನ್ನು ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ(ಎಫ್‌ಐಐ) ಪ್ರತಿ ಷೇರಿಗೆ ರು. 1,988 ರಂತೆ ಮಾರಾಟ ಮಾಡಿದ್ದಾರೆ. ಇದರಿಂದ ಸಂಗ್ರಹವಾಗುವ ಮೊತ್ತವನ್ನು ದಾನ ಧರ್ಮದ ಉದ್ದೇಶಕ್ಕೆ ಬಳಸಲಾಗುತ್ತದೆ ಎಂದು ಇನ್ಫೋಸಿಸ್ ಪರವಾಗಿ ಈ ಮಾರಾಟ ಪ್ರಕ್ರಿಯೆ ನಡೆಸಿದ ಡಾಯಿಷ್ ಈ ಕ್ವಿಟ್ ಇಂಡಿಯಾ ಸಂಸ್ಥೆ ತಿಳಿಸಿದೆ.

ನಾರಾಯಣ ಮೂರ್ತಿ ಕುಟುಂಬ ತಮ್ಮ ಒಡೆತನದ ಒಟ್ಟು ಷೇರುಗಳಲ್ಲಿ ಶೇ. 23ರಷ್ಟು ಅಂದರೆ, 120 ಲಕ್ಷ ಷೇರುಗಳನ್ನು ಮಾರಾಟ ಮಾಡಿದೆ. ನೀಲೆಕಣಿ ಕುಟುಂಬ ತಮ್ಮ ಒಡೆತನದ ಷೇರುಗಳಲ್ಲಿ ಶೇ 31.3ರಷ್ಟು ಅಂದರೆ, 120 ಲಕ್ಷ ಷೇರುಗಳನ್ನು, ದಿನೇಶ್‌ ಕುಟುಂಬ ತಮ್ಮ ಒಡೆತನದ ಷೇರುಗಳಲ್ಲಿ ಶೇ 21.5ರಷ್ಟು ಅಂದರೆ, 62 ಲಕ್ಷ ಷೇರುಗಳನ್ನು ಮತ್ತು ಕುಮಾರಿ ಶಿಬುಲಾಲ್‌ ಅವರು ತಮ್ಮ ಒಡೆತನದ ಷೇರುಗಳಲ್ಲಿ ಶೇ9.6ರಷ್ಟು ಅಂದರೆ, 24 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಡಾಯಿಷ್‌ ಈಕ್ವಿಟಿ  ಹೇಳಿದೆ.

ಡಿ.5ರಂದು ಇನ್ಫೊಸಿಸ್ ಮಾರುಕಟ್ಟೆ ಮೌಲ್ಯ 2,37,768 ಕೋಟಿಯಷ್ಟಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ಇನ್ಫೊಸಿಸ್‌ ಷೇರು ಮೌಲ್ಯ ಶೇ 21.4ರಷ್ಟು ಹೆಚ್ಚಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com