ನೈಟಿ ಧರಿಸುವ ಮಹಿಳೆಗೆ 500 ರೂ.ದಂಡ!

ಈ ಗ್ರಾಮದ ಮಹಿಳೆಯರು ನೈಟಿ ಧರಿಸಿ ಮನೆಯಿಂದ ಹೊರ ಬರಬಾರದು...
ನೈಟಿ ಧರಿಸುವ ಮಹಿಳೆಗೆ 500 ರೂ.ದಂಡ!
Updated on

ಮುಂಬೈ: ನೈಟಿ ಧರಿಸಿ ಮನೆಯಿಂದ ಹೊರ ಬಂದರೆ, 500 ರೂಪಾಯಿ ದಂಡ ಕಟ್ಟಬೇಕು ಎಂದು ಮಹರಾಷ್ಟ್ರ ಗ್ರಾಮವೊಂದರಲ್ಲಿ ಆದೇಶ ಹೊರಡಿಸಿರುವುದು ಬಾರಿ ಚರ್ಚೆಗೆ ಕಾರಣವಾಗಿದೆ.

ಮಹಾರಾಷ್ಟ್ರದ ನವಿ ಮುಂಬೈ ಪ್ರದೇಶದ ಸಮೀಪವಿರುವ ಗೋಟಿವಲಿ ಎಂಬ ಗ್ರಾಮದಲ್ಲಿ 'ಇಂದ್ರಯಾಣಿ ಮಹಿಳಾ ಮಂಡಲ್‌' ಎಂಬ ಮಹಿಳಾ ಸಂಘಟನೆ, ತನ್ನ ಕಚೇರಿಯ ಹೊರ ಭಾಗದಲ್ಲಿ ನಾಮಫಲಕವನ್ನು ಹಾಕುವ ಮೂಲಕ ತಲ್ಲಣ ಮೂಡಿಸಿದೆ.

ಈ ಗ್ರಾಮದ ಮಹಿಳೆಯರು ನೈಟಿ ಧರಿಸಿ ಮನೆಯಿಂದ ಹೊರ ಬರಬಾರದು. ಮನೆಯ ಹೊರಗಡೆ ಅಥವಾ ರಸ್ತೆಗಳಲ್ಲಿ ಇಲ್ಲವೇ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ನೈಟಿ ಧರಿಸಿ ಓಡಾಡುವುದು ಕಂಡುಬಂದರೆ, ಆ ಮಹಿಳೆಯರು ರೂ.500 ದಂಡ ತೆರಬೇಕು ಎಂದು ಆ ನಾಮಫಲಕದಲ್ಲಿ ಸೂಚಿಸಲಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಯಾಣಿ ಮಹಿಳಾ ಮಂಡಲ್‌ದ ಸದಸ್ಯೆ ಲಕ್ಷ್ಮೀ ಪಾಟೀಲ್, ಮಹಿಳೆಯರ ವಿರುದ್ಧ ಪುರುಷರಲ್ಲಿ ಲೈಂಗಿಕ ಭಾವನೆಗಳನ್ನು ಕೆರಳಿಸುವಲ್ಲಿ ಮಹಿಳೆಯರು ಧರಿಸುವ ಉಡುಪುಗಳು ಪ್ರಮುಖ ಪಾತ್ರವಹಿಸುತ್ತವೆ.

ನಮ್ಮ ಗ್ರಾಮದಲ್ಲಿ ಈ ಹಿಂದೆ ದೇಹವನ್ನು ಮರೆಮಾಚುವ ಸೀರೆಗಳನ್ನು ಮಹಿಳೆಯರು ಧರಿಸುತ್ತಿದ್ದರು. ಆದರೆ ಇತ್ತೀಚೆಗೆ ನೈಟಿಯಂಥಹ ಉಡುಪುಗಳು ನಮ್ಮ ಭಾರತೀಯ ಸಂಸ್ಕೃತಿಗೆ ಮಾರಕವಾಗಿ ಪರಿಣಮಿಸಿದೆ.

ಮನೆಯೊಳಗೆ ಮಾತ್ರ ಧರಿಸಬೇಕಾಗಿರುವ ನೈಟಿ, ಇತ್ತೀಚೆಗೆ ಮಹಿಳೆಯರು ಅಂಗಡಿ ಹೋದರೂ, ರಸ್ತೆಗೆ ಹೋದರೂ, ಕೆಲವೊಮ್ಮೆ ದ್ವಿಚಕ್ರ ವಾಹನಗಳಲ್ಲಿ ತೆರಳುವಾಗಲೂ ನೈಟಿ ಧರಿಸಿ ಹೋಗುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಆದ್ದರಿಂದ ಮಹಿಳೆಯರ ಮಾನ ಹಾಗೂ ಗೌರವ ರಕ್ಷಣೆಯ ಸಲುವಾಗಿ ನಮ್ಮ ಗ್ರಾಮದಲ್ಲಿ ನೈಟಿ ಉಡುಪಿಗೆ ನಿಷೇಧ ಹೇರಲು ಮುಂದಾಗಿದ್ದೇವೆ ಎಂದು ಅವರು ತಿಳಿಸಿದರು.

ಈ ಮಹಿಳಾ ಸಂಘಟನೆಯ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಗ್ರಾಮದ ಕೆಲ ಮಹಿಳೆಯರು, ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ದೂರು ದಾಖಲಿಸಿದರು. ಪೊಲೀಸರು ಮಧ್ಯಪ್ರವೇಶಿಸಿ ಮಹಿಳಾ ಸಂಘಟನೆಯ ಮನಒಲಿಕೆ ಮೂಲಕ ನಾಮಫಲಕವನ್ನು ತೆರವುಗೊಳಿಸಿದರು.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಅಧಿಕಾರಿ, ಎಸ್.ಗೋಜ್ರೆ, ಮಹಿಳೆಯರು ಉಡುಪು ಧರಿಸುವ ವಿಚಾರದಲ್ಲಿ ಯಾವುದೇ ಸಂಘ ಸಂಸ್ಥೆಗಳಿಗೆ ಅಧಿಕಾರ ಇಲ್ಲ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com