
ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಕೆಫೆಯಲ್ಲಿ 50ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳುಗಳನ್ನಿಟ್ಟುಕೊಂಡಿರುವ ಉಗ್ರರು, ಕೆಫೆಯಲ್ಲಿ ಎರಡು ಬಾಂಬ್ ಇರಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಸೋಮವಾರ ಬೆಳಗ್ಗೆ ಸಿಡ್ನಿಯ ಒಪೆರಾ ಹೌಸ್ ಕಟ್ಟಡದಲ್ಲಿರುವ ಕೆಫೆಯ ಮೇಲೆ ದಾಳಿ ಮಾಡಿರುವ ಶಸ್ತ್ರಸಜಿತ, ಅಲ್ಲಿದ್ದವರನ್ನು ಒತ್ತೆಯಾಳಗಿರಿಸಿಕೊಂಡು, ತಮ್ಮ ಬಾವುಟವನ್ನು ಹಾರಾಟ ಮಾಡಿದ್ದರು. ಇವರ ಕಣ್ಣು ತಪ್ಪಿಸಿ ಐವರು ಕೆಫೆಯ ತುರ್ತು ನಿರ್ಗಮನದಿಂದ ಹೊರ ಬಂದಿದ್ದಾರೆ. ಮಾಹಿತಿಗಳ ಪ್ರಕಾರ ಉಗ್ರರು ಕೆಫೆಯೊಳಗೆ ಎರಡು ಬಾಂಬ್ ಇರಿಸಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು ಕೆಫೆಯನ್ನು ಸುತ್ತುವರೆದಿದ್ದು, ಒತ್ತೆಯಾಳುಗಳ ರಕ್ಷಣೆಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement