ಫೇಸ್‌ಬುಕ್‌ಗೆ ಕಾಲಿಟ್ಟ ಪೊಲೀಸ್ ಠಾಣೆ

ಹೈದರಾಬಾದ್‌ನ ಎಲ್ಲ ಪೊಲೀಸ್ ಠಾಣೆಗಳು ಇದೀಗ ಸಮಾಜಿಕ ಜಾಲತಾಣ ಫೇಸ್‌ಬುಕ್ ಪ್ರವೇಶ ಮಾಡಿ..
ಪೊಲೀಸ್ ಮಹಾ ನಿರ್ದೇಶಕ ಅನುರಾಗ್ ಶರ್ಮಾ ಅವರು ಫೇಸ್‌ಬುಕ್ ಪೇಜ್‌ಗೆ ಚಾಲನೆ ನೀಡಿದರು.
ಪೊಲೀಸ್ ಮಹಾ ನಿರ್ದೇಶಕ ಅನುರಾಗ್ ಶರ್ಮಾ ಅವರು ಫೇಸ್‌ಬುಕ್ ಪೇಜ್‌ಗೆ ಚಾಲನೆ ನೀಡಿದರು.

ಹೈದರಾಬಾದ್: ಹೈದರಾಬಾದ್‌ನ ಎಲ್ಲ ಪೊಲೀಸ್ ಠಾಣೆಗಳು ಇದೀಗ ಸಮಾಜಿಕ ಜಾಲ ತಾಣ ಫೇಸ್‌ಬುಕ್ ಪ್ರವೇಶ ಮಾಡಿದ್ದು, ಅಲ್ಲಿಯೇ ಇನ್ನು ಮುಂದೆ ದೂರು ನೀಡುವ ಸವಲತ್ತು ನೀಡಿದೆ.

ಮುತ್ತಿನನಗರಿ ಹೈದರಾಬಾದ್ ಹೈಟೆಕ್ ಆಗುತ್ತಿದ್ದು, ಬದಲಾದ ಕಾಲಮಾನಕ್ಕೆ ತಕ್ಕಂತೆ ಹೈದರಾಬಾದಿನ ಎಲ್ಲ 60 ಪೊಲೀಸ್ ಠಾಣೆಗಳು ಇದೀಗ ಫೇಸ್‌ಬುಕ್‌ನಲ್ಲಿ ಲಭ್ಯವಿದೆ. ಪೊಲೀಸ್ ಮತ್ತು ಸಾರ್ವಜನಿಕರ ನಡುವಿನ ಸವಂಹನ ಸಂಪರ್ಕವನ್ನು ಬಲಪಡಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ಈ ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದು, ಪೊಲೀಸರ ಪ್ರಯತ್ನಕ್ಕೆ ಸಾಕಷ್ಟು ಸಾರ್ವಜನಿಕ ವಲಯದಿಂದ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ.

ನಿನ್ನೆ ಹೈದರಾಬಾದ್ ಪೊಲೀಸ್‌ಠಾಣೆಗಳ ಫೇಸ್‌ಬುಕ್ ಪೇಜ್‌ಗೆ ಚಾಲನೆ ನೀಡಿ ಮಾತನಾಡಿದ ಪೊಲೀಸ್ ಮಹಾ ನಿರ್ದೇಶಕ ಅನುರಾಗ್ ಶರ್ಮಾ ಅವರು, 'ಸಾರ್ವಜನಿಕವಾಗಿ ಕಳ್ಳತನ, ಅಸಭ್ಯವರ್ತನೆ, ಅತ್ಯಾಚಾರ, ದರೊಡೆ ಮುಂತಾದ ಸಮಾಜ ಬಾಹಿರ ಚಟುವಟಿಕೆಗಳು ನಡೆದರೂ ಭಾದಿತರು ಪೊಲೀಸ್ ಠಾಣೆಗೆ ಹೋಗಬೇಕು ಎನ್ನುವ ಒಂದೇ ಕಾರಣಕ್ಕೆ ಘಟನೆಯನ್ನು ಮುಚ್ಚಿಡುತ್ತಾರೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಯುವಕರು ಸೇರಿದಂತೆ ಸಾರ್ವಜನಿಕರಲ್ಲಿ ಸಾಮಾಜಿಕ ಜಾಲತಾಣ ಬಳಕೆ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಇಲಾಖೆಯ ನೂತನ ಪ್ರಯತ್ನ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಸ್ನೇಹಮಯ ಕೊಂಡಿಯಾಗಿರಲಿದೆ' ಎಂದು ಹೇಳಿದರು.

ಫೇಸ್‌ಬುಕ್‌ನಲ್ಲಿ ದೂರು ನೀಡಬಹುದು ಮತ್ತು ವಿವರ ಪಡೆಯಬಹುದು
ಹೈದರಾಬಾದ್ ಪೊಲೀಸ್ ಠಾಣೆಗಳ ಫೇಸ್‌ಬುಕ್ ಪೇಜ್‌ನಲ್ಲಿ ಹೈದರಾಬಾದ್ ನಿವಾಸಿಗಳು ಆಯಾ ಆನ್‌ಲೈನ್ನಲ್ಲೇ ದೂರು ನೀಡಬಹುದು. ಘಟನೆಗೆ ಸಂಬಂಧಿಸಿದ ಫೋಟೋ, ವಿಡಿಯೋ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ದೂರು ನೀಡಬಹುದಾಗಿದೆ. ಅಲ್ಲದೆ ದೂರಿನ ವಿವರಗಳನ್ನು ಮತ್ತು ನೀಡಿದ್ದ ದೂರಿನ ಪ್ರಗತಿ ಪರಿಶೀಲನೆ ಕೂಡ ಮಾಡಬಹುದಾಗಿದೆಯಂತೆ.

ಸಿಬ್ಬಂದಿಗಳಿಗೆ ತರಬೇತಿ
ಇನ್ನು ಹೈದರಾಬಾದ್ ಪೊಲೀಸರು ಚಾಲನೆ ನೀಡಿರುವ ಫೇಸ್‌ಬುಕ್ ಪೇಜ್ ಅನ್ನು ನಿರ್ವಹಿಸುವ ಕುರಿತು ಆಯಾ ಠಾಣೆಯ ಪೊಲೀಸ್ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಲಾಗಿದ್ದು, ಆ ಸಿಬ್ಬಂದಿಗಳು ಆಗಿದ್ದಾಗ್ಗೆ ಪೇಜ್ ಅನ್ನು ಅಪ್‌ಡೇಟ್ ಮಾಡುತ್ತಿರುತ್ತಾರೆ.

ಪ್ರಧಾನಿ ಮೋದಿ ಎಫೆಕ್ಟ್
ಇನ್ನು ಹೈದರಾಬಾದ್ ಪೊಲೀಸ್ ಇಲಾಖೆಯ ಈ ವಿನೂತನ ಪ್ರಯತ್ನದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವವಿದ್ದು, ಈ ಹಿಂದೆ ಗುವಾಹಟಿಯಲ್ಲಿ ನಡೆದ ಎಲ್ಲ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರ ಸಭೆಯಲ್ಲಿ ಪೊಲೀಸ್ ಇಲಾಖೆಯನ್ನು ಹೈಟೆಕ್ ಮಾಡುವ ಕುರಿತು ಮತ್ತ ಸಾಮಾಜಿಕ ಜಾಲತಾಣದಲ್ಲಿ ತೊಡಗಿಸಿಕೊಳ್ಳುವ ಕುರಿತು ನಿರ್ಧಾರ ಕೈಗೊಳ್ಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com