ಇಟಲಿ ನಾವಿಕರ ಅವಧಿ ವಿಸ್ತರಣೆ ಅರ್ಜಿ ವಜಾ

ಇಟಲಿಯ ನಾವಿಕರಿಬ್ಬರ ಅವಧಿ ವಿಸ್ತರಣೆ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್, ಭಾರತಕ್ಕೆ ಮರಳಲೇ ಬೇಕೆಂದು ತಾಕೀತು ಮಾಡಿತು.
ಕೇರಳ ಮೀನುಗಾರರ ಕೊಲೆ ಆರೋಪ ಎದುರಿಸುತ್ತಿರುವ ಇಟಲಿಯ ನಾವಿಕರು (ಸಂಗ್ರಹ ಚಿತ್ರ)
ಕೇರಳ ಮೀನುಗಾರರ ಕೊಲೆ ಆರೋಪ ಎದುರಿಸುತ್ತಿರುವ ಇಟಲಿಯ ನಾವಿಕರು (ಸಂಗ್ರಹ ಚಿತ್ರ)

ನವದೆಹಲಿ: ಕೇರಳ ಮೀನುಗಾರರ ಕೊಲೆ ಆರೋಪ ಎದುರಿಸುತ್ತಿರುವ ಇಟಲಿಯ ನಾವಿಕರಿಬ್ಬರ ಅವಧಿ ವಿಸ್ತರಣೆ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್, ಭಾರತಕ್ಕೆ ಮರಳಲೇ ಬೇಕೆಂದು ತಾಕೀತು ಮಾಡಿತು.

ಅನಾರೋಗ್ಯ ಹಾಗೂ ಕ್ರಿಸ್‌ಮಸ್ ಕಾರಣ ಇಟಲಿಯಲ್ಲಿರುವ ಅವಧಿಯಲ್ಲಿ ವಿಸ್ತರಣೆ ಮಾಡಬೇಕೆಂದು ಲಟ್ಟೋರೆ ಮತ್ತು ಮರೈನ್ ಸಾಲ್ವಟೋರ್ ಗಿರೋನ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಎಚ್‌ಎಲ್ ದತ್ತು ನೇತೃತ್ವದ ಪೀಠ, ಕೊಲೆ ಆರೋಪ ಎದುರಿಸುತ್ತಿರುವ ಯಾವ ಆರೋಪಿಗೂ ಇಂಥ ರಿಯಾಯಿತಿ ಸಿಕ್ಕಿದ್ದು ತಮಗೆ ತಿಳಿದಿಲ್ಲ. ಲಟ್ಟೋರೆಗೆ ಹೇಳಿ ವಾಪಸ್ ಬರಬೇಕೆಂದು. ಆತ ವಾಪಸ್ ಬರಲೇಬೇಕು. ಆತ ಇಲ್ಲಿಯೇ ಶಸ್ತ್ರಚಿಕಿತ್ಸೆಗೊಳಪಡಲಿ ಎಂದು ನಾವು ಹೇಳಲು ಸಾಧ್ಯವಿಲ್ಲ. ಆದರೆ ಜ.8ರಂದು ಹೃದಯ ಶಸ್ತ್ರಚಿಕಿತ್ಸೆಗೊಳಪಡಬೇಕೆಂಬ ಕಾರಣ ಕೊಡಲಾಗುತ್ತಿದೆ.

ಆರೋಪಿಗೂ ಹಕ್ಕುಗಳಿವೆ, ಹಾಗಂತ ಆತನನ್ನು ಸ್ವತಂತ್ರವಾಗಿ ಬಿಡಲು ಸಾಧ್ಯವಿಲ್ಲ. ಈ ರೀತಿಯಾಗಲು ಬಿಡಲೂಬಾರದು. ಹೀಗಾಗಿ ಈಗಿರುವ ಅವಧಿಯಲ್ಲಿ ಎಲ್ಲ ಚಿಕಿತ್ಸೆಗಳನ್ನು ಮುಗಿಸಿ ವಾಪಸಾಗಲಿ. ಇವರ ವಿರುದ್ಧ ಆರೋಪಗಳ ಬಗ್ಗೆ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ. ವಿಚಾರಣೆಯೂ ಪ್ರಾರಂಭವಾಗಿಲ್ಲ. ಆರೋಪಿಗಳ ಅನುಪಸ್ಥಿತಿಯಲ್ಲಿ ಆರೋಪಪಟ್ಟಿಯನ್ನು ಸಲ್ಲಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ಪೀಠ, ಇದು ವಿಶ್ವದ ಬೇರೆ ಯಾವ ಕಡೆಯೂ ಆಗಲು ಸಾಧ್ಯವಿಲ್ಲ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com