ಶ್ರೀಲಂಕಾಗೆ ಭಾರತದಿಂದ 2 ಯುದ್ಧ ನೌಕೆಗಳು ರಫ್ತು

ಯುದ್ಧ ನೌಕೆಗಳ ರಫ್ತು ಸಂಬಂಧ ಉಭಯ ರಾಷ್ಚ್ರಗಳ ಮಧ್ಯೆ ಒಪ್ಪಂದ ಮಾಡಿಕೊಳ್ಳಲಾಗಿದೆ...
ಭಾರತ ಯುದ್ದ ನೌಕೆ
ಭಾರತ ಯುದ್ದ ನೌಕೆ
Updated on

ಕೊಲ್ಕೋತ್ತಾ: ಶ್ರೀಲಂಕಾಗೆ 2 ಯುದ್ಧ ನೌಕೆಗಳನ್ನು ರಫ್ತು ಮಾಡುವುದಾಗಿ ಕೇಂದ್ರ ರಕ್ಷಣಾ ರಾಜ್ಯ ಸಚಿವ ರಾವ್ ಇಂದ್ರಜಿತ್ ಸಿಂಗ್ ತಿಳಿಸಿದ್ದಾರೆ.

ಭಾರತದಲ್ಲಿ ತಯಾರಿಸಲ್ಪಟ್ಟ ಯುದ್ದ ನೌಕೆಗಳನ್ನು ಮೊರಿಶಿಯಸ್‌ಗೆ ಕಳೆದ ಶುಕ್ರವಾರದಂದು ರಫ್ತು ಮಾಡಲಾಗಿತ್ತು. ಈ ಸಂಬಂಧ ಸಂಭ್ರಾಮಚರಣೆಯನ್ನು ಕೈಗೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಇಂದ್ರಜಿತ್ ಸಿಂಗ್,  ಸಮುದ್ರದಡಿ ಗಸ್ತು ತಿರುಗುವ 2 ಯುದ್ಧ ನೌಕೆಗಳ ರಫ್ತು ಸಂಬಂಧ ಉಭಯ ರಾಷ್ಚ್ರಗಳ ಮಧ್ಯೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ನೌಕೆಗಳನ್ನು ಗೋವಾದಲ್ಲಿನ ಯುದ್ಧನೌಕೆ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಿಸಲಾಗಿದೆ.

ಈ ಯುದ್ದ ನೌಕೆಗಳನ್ನು ಸಂಪೂರ್ಣ ಭಾರತೀಯ ತಂತ್ರಜ್ಞಾನಗಳಿಂದಲೇ ನಿರ್ಮಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com