ಬೋಡೊ ಉಗ್ರರ ಧಮನಕ್ಕೆ ಸೇನೆ ಸಜ್ಜು

ಅಸ್ಸಾಂನಲ್ಲಿ ಸರಣಿ ದಾಳಿ ನಡೆಸಿ 70 ಮಂದಿ ಅಮಾಯಕರ ಸಾವಿನೊಂದಿಗೆ ಅಟ್ಟಹಾಸ...
ಬೋಡೊ ಉಗ್ರರ ಧಮನಕ್ಕೆ ಸೇನೆ ಸಜ್ಜು
Updated on: 

ನವದೆಹಲಿ: ಅಸ್ಸಾಂನಲ್ಲಿ ಸರಣಿ ದಾಳಿ ನಡೆಸಿ 70 ಮಂದಿ ಅಮಾಯಕರ ಸಾವಿನೊಂದಿಗೆ ಅಟ್ಟಹಾಸ ಮೆರೆದ ಬೋಡೊ ಉಗ್ರರ ಧಮನಕ್ಕೆ ಭಾರತೀಯ ಸೇನಾ ಪಡೆ ಸಜ್ಜಾಗಿದೆ.

ಇತ್ತೀಚೆಗಷ್ಟೇ ಅಸ್ಸಾಂನಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಿದ ಬೋಡೋ ಉಗ್ರರ ವಿರುದ್ಧ ಭಾರತೀಯ ಸೇನಾ ಪಡೆ ಕಾರ್ಯಾಚರಣೆ ಕೈಗೊಳ್ಳಲಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ದಲ್ ಬೀರ್ ಸಿಂಗ್ ಶುಕ್ರವಾರ ತಿಳಿಸಿದ್ದಾರೆ.

ಅಸ್ಸಾಂನಲ್ಲಿ ಭಾರತೀಯ ಸೇನಾ ಪಡೆ ಬೋಡೊ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡು, ಉಗ್ರರನ್ನು ಮಟ್ಟಹಾಕಲಿದೆ ಎಂದ ಅವರು, ಈ ಸಂಬಂಧ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ಅಸ್ಸಾಂನಲ್ಲಿ ನಡೆದ ದಾಳಿ, ರಾಜ್ಯ ಪರಿಸ್ಥಿತಿ ಮತ್ತು ಭದ್ರತೆ ಕುರಿತು ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ.

ಅಸ್ಸಾಂನಲ್ಲಿ ಸೇನೆಯನ್ನು ನಿಯೋಜಿಸಲಾಗಿದ್ದು, ಪೂರ್ಣ ಭದ್ರತೆ ಕಲ್ಪಿಸಲಾಗಿದೆ. ಆದರೆ, ಈಗಾಗಲೇ ದಾಳಿ ನಡೆಸಿದ ಉಗ್ರರ ವಿರುದ್ಧ ಸೇನೆ ಕಾರ್ಯಾಚರಣೆ ಕೈಗೊಳ್ಳಲಿದೆ.

ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಮೇಘಾಲಯದಲ್ಲಿ ಬೋಡೋ ಉಗ್ರರು ಬೀಡುಬಿಟ್ಟಿದ್ದಾರೆ. ಅವರನ್ನು ಮಟ್ಟಹಾಕುವುದೇ ಮುಂದಿನ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com