ಮೋದಿಗೆ ಸಚಿವ ಸಂಪುಟ ಅಗತ್ಯವಿಲ್ಲ: ದಿಗ್ವಿಜಯ್ ಸಿಂಗ್

ಮೋದಿಯವರೇ ಒಬ್ಬ ಸಚಿವ ಸಂಪುಟವಾಗಿದ್ದು, ಅವರಿಗೆ ಸಂಪುಟದ ಅಗತ್ಯವಿಲ್ಲ ಎಂದು ಪ್ರತಿಪಕ್ಷ...
ದಿಗ್ವಿಜಯ್ ಸಿಂಗ್ ಸಾಂದರ್ಭಿಕ ಚಿತ್ರ
ದಿಗ್ವಿಜಯ್ ಸಿಂಗ್ ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ಮೋದಿಯವರೇ ಒಬ್ಬ ಸಚಿವ ಸಂಪುಟವಾಗಿದ್ದು, ಅವರಿಗೆ ಸಂಪುಟದ ಅಗತ್ಯವಿಲ್ಲ ಎಂದು ಪ್ರತಿಪಕ್ಷ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರಿ ಮೋದಿ ಅವರ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಭಾನುವಾರ ಪ್ರತಿಕ್ರಿಯಿಸಿರುವ ದಿಗ್ವಿಜಯ್ ಸಿಂಗ್ ಸಚಿವ ಸಂಪುಟ ವಿಸ್ತರಣೆ ಕುರಿತು ಎಲ್ಲರಲ್ಲೂ ಇಷ್ಟೊಂದು ಉತ್ಸಾಹವೇಕೆ? ಎಂಬುದು ಅರ್ಥವಾಗುತ್ತಿಲ್ಲ,  ಮೋದಿಯವರೇ ಒಬ್ಬ ಸಚಿವ ಸಂಪುಟವಾಗಿದ್ದು, ಅವರಿಗೆ ಸಂಪುಟದ ಅಗತ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಸಂಪುಟ ವಿಸ್ತರಣೆ ಕುರಿತು ಮತ್ತೊಬ್ಬ ಕಾಂಗ್ರೆಸ್ ಮುಖಂಡ ಪಿ.ಸಿ. ಚಾಕೋ ಪ್ರತಿಕ್ರಿಯೆ ನೀಡಿದ್ದು, ಸರ್ಕಾರ ಈಗಷ್ಟೇ ತಮ್ಮ ಕಾರ್ಯ ಪ್ರಾರಂಭಿಸುತ್ತಿದ್ದು, ಇದಕ್ಕೆ ಹೆಚ್ಚಿನ ಬಂಡವಾಳ ಹೂಡಬೇಕಾಗಿರುತ್ತದೆ ಎಂಬ ಸಂದೇಶವನ್ನು ಇದು ನೀಡುತ್ತದೆ. ಇಂದು ಸಂಪುಟ ಸೇರುವ ಸಚಿವರು ನಿಧಾನಗತಿಯಲ್ಲಿ ನೂರಾರು ಕೆಲಸ ಮಾಡುವ ಬದಲು ಮಾಡುವಂತಹ ಒಂದು ಕೆಲಸವನ್ನೇ ಉತ್ತಮವಾಗಿ ಮಾಡಲಿ ಎಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಪ್ರಾರಂಭವಾಗಿದ್ದು, ಈಗಾಗಲೇ ಸಚಿವ ಸ್ಥಾನದಲ್ಲಿರುವವರ ಹುದ್ದೆಗಳ ಬದಲಾವಣೆ ಹಾಗೂ ಬಡ್ತಿಯಾಗುವ ಸಂಭವವಿದೆ ಎನ್ನಲಾಗುತ್ತಿದೆ. ಸಂಪುಟ ವಿಸ್ತರಣೆಯಲ್ಲಿ 20 ಮಂದಿ ಸಚಿವ ಸ್ಥಾನದ ಮೂಲಕ ಸಂಪುಟ ಸೇರಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com