
ಮುಂಬೈ: ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶಿತ 'ಸ್ವಚ್ಛ ಭಾರತ ಅಭಿಯಾನ'ದಲ್ಲಿ ಪಾಲ್ಗೊಂಡಿದ್ದರು.
ದಕ್ಷಿಣ ಭಾರತದಲ್ಲಿ ಮೊದಲುಗೊಂಡು ಪ್ರಸ್ತುತ ಬಾಲಿವುಡ್‌ನಲ್ಲಿ ನೆಲೆ ಕಂಡುಕೊಂಡಿರುವ ನಟಿ ತಮನ್ನಾ ಭಾಟಿಯಾ ಅವರು ಸೋಮವಾರ ಸ್ವಚ್ಛಭಾರತ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಮುಂಬೈನಲ್ಲಿ ನಡೆದ ಅಭಿಯಾನದಲ್ಲಿ ಪಾಲ್ಗೊಂಡಿದ್ದ ತಮನ್ನಾ, ತಮ್ಮ ಸ್ನೇಹಿತರೊಂದಿಗೆ ಜೊತೆಗೂಡಿ ಸುಬರ್‌ಬನ್ ಅಂಧೇರಿ ಪ್ರದೇಶದಲ್ಲಿ ಕಸ ಗುಡಿಸಿದರು. ಚಿತ್ರರಂಗದಲ್ಲಿ 'ಮಿಲ್ಕ್ ಬ್ಯೂಟಿ' ಎಂದೇ ಖ್ಯಾತಿ ಗಳಿಸಿರುವ ತಮನ್ನಾ ಯಾವುದೇ ಅಳುಕಿಲ್ಲದೇ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಸಾರ್ವಜನಿಕರ ಆಶ್ಚರ್ಯಕ್ಕೆ ಕಾರಣರಾಗಿದ್ದರು.
ಅಭಿಯಾನಕ್ಕಾಗಿ ಮೊದಲೇ ಸಿದ್ಧತೆ ಮಾಡಿಕೊಂಡಿದ್ದ ತಮನ್ನಾ ಅವರು ಕೆಂಪು ಮತ್ತು ಕಪ್ಪು ಬಣ್ಣದ ಪಟ್ಟಿಗಳಿರುವ ಶರ್ಟ್ ಮತ್ತು ಕಪ್ಪು ಬಣ್ಣದ ಟೈಟ್ಸ್ ತೊಟ್ಟು ಅಭಿಯಾನಕ್ಕೆ ಇಳಿದಿದ್ದರು. ಕೈಗೌವುಸು ಮತ್ತು ಮುಖಕ್ಕೆ ಪಟ್ಟಿ ಕಟ್ಟಿಕೊಂಡು ಮುಂಬೈನ ಬೀದಿಯನ್ನು ಶುಚಿಗೊಳಿಸುವ ಮೂಲಕ ಜನತೆಯಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸಲು ಪ್ರಯತ್ನಿಸಿದರು.
ತಮನ್ನಾ ಅವರ ಕರಸೇವೆಯ ವಿಡಿಯೋ ಇಲ್ಲಿದೆ...
Advertisement