

ಲಂಡನ್: ಪ್ರಾಚೀನ ಇಸ್ಲಾಮಿಕ್ ಯುಗದಲ್ಲಿ ಪ್ರಚಲಿತದಲ್ಲಿದ್ದ ಚಿನ್ನ, ಬೆಳ್ಳಿ ನಾಣ್ಯ ಪದ್ಧತಿಯನ್ನು ಅನುಸರಿಸಲು ಇಸ್ಲಾಮಿಕ್ ಸ್ಟೇಟ್(ಇಸಿಸ್) ಭಯೋತ್ಪಾದನೆ ಸಂಘಟನೆ ಮುಂದಾಗಿದೆ ಎಂದು ತಿಳಿದು ಬಂದಿದೆ.
ಇಸಿಸ್ ಉಗ್ರ ಸಂಘಟನೆ ಹಣದ ಬದಲಾಗಿ ಚಿನ್ನ, ಬೆಳ್ಳಿ ನಾಣ್ಯ ಬಳಕೆ ಮಾಡುವ ಕುರಿತು ಯೋಜನೆ ರೂಪಿಸುತ್ತಿದೆ ಎಂದು ಮಾಧ್ಯಮಗಳ ವರದಿ ಮಾಡಿದೆ.
ಹಣದ ಚಲಾವಣೆ ಬದಲು ಚಿನ್ನ ಮತ್ತು ಬೆಳ್ಳಿ ನಾಣ್ಯಗಳು ಚಲಾವಣೆ ಮಾಡುವುದರಿಂದ ಸಂಘಟನೆಯನ್ನು ಮತ್ತಷ್ಟು ವಿಸ್ತರಿಸಬಹುದು ಹಾಗೂ ಸಂಘಟನೆ ಖ್ಯಾತಿ ಪಡೆಯುವ ಸಾಧ್ಯತೆ ಇದೆ ಎಂಬ ಹಿನ್ನಲೆಯಲ್ಲಿ ಈ ಯೋಜನೆಗೆ ಇಸಿಸ್ ಮುಂದಾಗಿದೆ ಎನ್ನಲಾಗುತ್ತಿದೆ.