ಗುಜರಾತ್: ಟ್ರಕ್ ಗೆ ಜೀಪ್ ಡಿಕ್ಕಿ, ನಾಲ್ವರ ದುರ್ಮರಣ

ಜೀಪ್-ಟ್ರಕ್ ಮಧ್ಯೆ ಡಿಕ್ಕಿ(ಸಾಂದರ್ಭಿಕ ಚಿತ್ರ)
ಜೀಪ್-ಟ್ರಕ್ ಮಧ್ಯೆ ಡಿಕ್ಕಿ(ಸಾಂದರ್ಭಿಕ ಚಿತ್ರ)
Updated on

ವಡೋದರಾ: ಗುಜರಾತ್‌ನ ಚೋಟ ಉದಯ್‌ಪುರ್ ಜಿಲ್ಲೆಯಲ್ಲಿ ಟ್ರಕ್ ಗೆ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಶುಕ್ರವಾರ ಬೆಳಗ್ಗೆ ಟ್ರಕ್‌ಗೆ ಜೀಪ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿಗೆ ತೀವ್ರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯಪ್ರದೇಶದ ಅಲಿರಾಜ್‌ಪುರ್ ಜಿಲ್ಲೆಯಿಂದ ಜೀಪು ಗುಜರಾತ್‌ನ ಚೋಟ ಉದಯ್‌ಪುರ ನಗರಕ್ಕೆ ಬರುತ್ತಿತ್ತು. ಈ ವೇಳೆ, ಟ್ರಕ್‌ವೊಂದನ್ನು ಓವರ್‌ಟೆಕ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಟ್ರಕ್‌ಗೆ ಡಿಕ್ಕಿ ಹೊಡೆದ ಕಾರಣ ಅಪಘಾತ ಸಂಭವಿಸಿದೆ ಎಂದು ರಂಗಪುರ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಎಸ್.ಎಲ್ ಗಮಿತಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com