ಬಿಜೆಪಿ ಸಂಸ್ಥಾಪನಾ ದಿನಕ್ಕೆ ಆಡ್ವಾಣಿಗೆ ಆಹ್ವಾನವೇ ಇಲ್ಲ

ಬಿಜೆಪಿಯ ದೆಹಲಿ ಕಚೇರಿಯಲ್ಲಿ ಸೋಮವಾರ ನಡೆದ ಪಕ್ಷದ 35ನೇ ಸಂಸ್ಥಾಪನಾ ದಿನಾಚರಣೆಗೆ ಸಂಸ್ಥಾಪಕ ಸದಸ್ಯ, ಹಿರಿಯ ಮುಖಂಡ ಎಲ್.ಕೆ. ಆಡ್ವಾಣಿ...
ಎಲ್.ಕೆ. ಆಡ್ವಾಣಿ
ಎಲ್.ಕೆ. ಆಡ್ವಾಣಿ

ನವದೆಹಲಿ: ಬಿಜೆಪಿಯ ದೆಹಲಿ ಕಚೇರಿಯಲ್ಲಿ ಸೋಮವಾರ ನಡೆದ ಪಕ್ಷದ 35ನೇ ಸಂಸ್ಥಾಪನಾ ದಿನಾಚರಣೆಗೆ ಸಂಸ್ಥಾಪಕ ಸದಸ್ಯ, ಹಿರಿಯ ಮುಖಂಡ ಎಲ್.ಕೆ. ಆಡ್ವಾಣಿ ಅವರಿಗೇ ಆಹ್ವಾನ ಇರಲಿಲ್ಲ!
ಪಕ್ಷದ ದೆಹಲಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ಕುರಿತು ಹಿರಿಯ ಮುಖಂಡನಿಗೆ ಮಾಹಿತಿಯೇ ಇರಲಿಲ್ಲ. ಪಕ್ಷವನ್ನು ಕಟ್ಟಿಬೆಳೆಸಿದ ಪ್ರಮುಖರಲ್ಲೊಬ್ಬರಾದ 87 ವರ್ಷದ ಹಿರಿಯ ನಾಯಕನಿಗೆ ಕಾರ್ಯ ಕ್ರಮದ ಕುರಿತು ಕನಿಷ್ಠ ಮಾಹಿತಿ ನೀಡುವ ಸೌಜನ್ಯವನ್ನೂ ಮುಖಂಡರು ತೋರಿಲ್ಲ ಎಂದು ಆಡ್ವಾಣಿ ಆಪ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ದೆಹಲಿ ಕಚೇರಿಯಲ್ಲಿ ನಡೆದ ಈ ಸಂಸ್ಥಾಪನಾ ದಿನದ ಕಾರ್ಯಕ್ರಮ ಪಕ್ಷದ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆಯಿತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com