ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್‍ನಲ್ಲಿ ಗಾಂಧಿ ಪ್ರತಿಮೆಗೆ ಬಣ್ಣ ಎರಚಿ ವಿರೂಪಗೊಳಿಸಿರುವ ಚಿತ್ರ
ದೇಶ
ಗಾಂಧಿ ಪ್ರತಿಮೆ ವಿರೂಪ
ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆಗೆ ದಕ್ಷಿಣ ಆಫ್ರಿಕಾದ ಜೊಹಾನ್ಸ್‍ಬರ್ಗ್‍ನಲ್ಲಿ ಬಣ್ಣ ಎರಚಿ ವಿರೂಪಗೊಳಿಸಲಾಗಿದೆ. ಭಾನುವಾರ ಈ ಘಟನೆ ನಡೆದಿದೆ...
ಜೊಹಾನ್ಸ್ ಬರ್ಗ್: ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆಗೆ ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್‍ನಲ್ಲಿ ಬಣ್ಣ ಎರಚಿ ವಿರೂಪಗೊಳಿಸಿರುವ ಘಟನೆ ಭಾನುವಾರ ನಡೆದಿದೆ.
ಕಾರಿನಲ್ಲಿ ಬಂದ ಕಿಡಿಗೇಡಿಗಳು ಜನಾಂಗೀಯವಾದಿ ಗಾಂಧಿಗೆ ಧಿಕ್ಕಾರ ಎಂದು ಘೋಷಣೆ ಕೂಗುತ್ತಾ ಬಂದು, ಬಣ್ಣ ಎರಚಿದ್ದಾರೆ.
ಗಾಂಧೀಜಿಯವರ ಯುವ ವಕೀಲನ ರೂಪದ ಪ್ರತಿಮೆ ವಿಶ್ವದ ಇತರ ರಾಷ್ಟ್ರಗಳಲ್ಲಿರುವ ಗಾಂಧಿ ಪ್ರತಿಮೆಗಳಿಗೆ ಹೋಲಿಸಿದರೆ ಅತ್ಯಂತ ಅಪರೂಪದ್ದು. ಭಾನುವಾರವಷ್ಟೇ ಗಾಂಧೀ ಜಿಯವರು ದಕ್ಷಿಣ ಆಫ್ರಿಕಾದಿಂದ ಕಾನೂನು ಪದವಿ ಪಡೆದು ದೆಹಲಿಗೆ ಆಗಮಿಸಿ 100 ವರ್ಷ ಪೂರ್ತಿಗೊಂಡಿತ್ತು. ಆ ದಿನಕ್ಕೆ ಪೂರಕವಾಗಿಯೇ ಈ ಕುಕೃತ್ಯ ನಡೆದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ