
ನವದೆಹಲಿ/ಮುಂಬೈ: ಇನ್ನು ಮುಂದೆ ವಾಟ್ಸ್ ಆ್ಯಪ್‍ನಲ್ಲಿ ವಿಡಿಯೋ ಡೌನ್‍ಲೋಡ್ ಮಾಡಲು ಯೋಚಿಸವಂತಾಗಬಹುದು. ಮೊಬೈಲ್ ನಲ್ಲಿ ಯೂಟ್ಯೂಬ್ ವೀಕ್ಷಿಸುವುದಕ್ಕೆ ಮಾಮೂಲಿಗಿಂತ ಹತ್ತು ಪಟ್ಟು ಖರ್ಚಾದರೂ ಆದೀತು. ಫೇಸ್ ಬುಕ್, ಪ್ಲೇಸ್ಟೋರ್ ಎಲ್ಲವೂ ಹೊರೆಯಾದೀತು.
ಟೆಲಿಕಾಂ ಆಪರೇಟರ್‍ಗಳು ಈಗಾಗಲೇ ಆಯ್ದ ಆ್ಯಪ್ಸ್ ಮತ್ತು ವೆಬ್ ಸೈಟ್‍ಗಳಿಗೆ ಶುಲ್ಕ ವಿಧಿಸುವ ಬಗ್ಗೆ ಕೆಲ ದೂರಸಂಪರ್ಕ ಕಂಪನಿಗಳು ಮುಂದಾಗಿವೆ. ಆದರೆ ಈ ಪ್ರಸ್ತಾಪದ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿದೆ. ಅದರ ವಿರುದ್ಧ ಸಾಮಾಜಿಕ ಜಾಲ ತಾಣಗಳಾದ ಟ್ವಿಟರ್, ಫೇಸ್‍ಬುಕ್‍ಗಳಲ್ಲಿ ಪ್ರತಿರೋಧ ವ್ಯಕ್ತವಾಗಿದೆ. ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಈ ಬಗ್ಗೆ ಸಹಿ ಮಾಡಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ಕ್ಕೆ ಮನವಿ ಸಲ್ಲಿಸಿದ್ದಾರೆ.
ಸೇವ್ ದಇಂಟರ್‍ನೆಟ್. ಇನ್ (Savetheinternet.in) ಎಂಬ ವೆಬ್‍ಸೈಟ್ ಮೂಲಕ ಈಗಾಗಲೇ ಒಂದು ಲಕ್ಷಕ್ಕಿಂತ ಹೆಚ್ಚು ಮಂದಿ ಮನವಿ ಕಳುಹಿಸಿದ್ದಾರೆ.
ಅವಕಾಶವಿದೆ:
ಹೊಸ ಹೊರೆಯ ವಿರುದ್ಧ ಮನವಿ ಸಲ್ಲಿಸಲು ಇನ್ನೂ ಒಂದು ವಾರ ಕಾಲ ಅವಕಾಶವಿದೆ. ಹೀಗಾಗಿ, ಈ ಅವಧಿಯಲ್ಲಿ ಅದರ ವಿರೋಧಿಗಳ ಸಂಖ್ಯೆ 20 ಲಕ್ಷ ತಲುಪುವ ಸಾಧ್ಯತೆ ಹೆಚ್ಚಾಗಿದೆ.
ಸಮಿತಿ ರಚನೆ
ಅಂತರ್ಜಾಲ ತಟಸ್ಥ ನೀತಿ (ನೆಟ್ ನ್ಯೂಟ್ರಾಲಿಟಿ) ಬಗ್ಗೆ ಚರ್ಚೆಗಳು ಆರಂಭವಾಗಿರುವಂತೆಂಯೇ ಈ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಜನವರಿಯಲ್ಲಿ ಸಮಿತಿ ರಚಿಸಿದ್ದ ವಿಚಾರ ಬಹಿರಂಗವಾಗಿದೆ. ಮುಂದಿನ ತಿಂಗಳ ಎರಡನೇ ವಾರದಲ್ಲಿ ಈ ಬಗ್ಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ. ಅದರಲ್ಲಿ ಆರು ಮಂದಿ ಸದಸ್ಯರಿದ್ದು, ಈ ಪೈಕಿ ಎ.ಕೆ.ಭಾರ್ಗವ, ಎ.ಕೆ.ಮಿತ್ತಲ್ ಪ್ರಮುಖರು.
ಸ್ಟಾರ್ಟ್‍ಅಪ್‍ಗಳ ವಿರೋಧ
ಐಟಿ ಸ್ಟಾರ್ಟ್‍ಅಪ್ ಕಂಪನಿಗಳು ಇಂಥ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸುತ್ತಿರುವ ಸೇವಾ ಪೂರೈಕೆದಾರರ ಕಂಪನಿಗಳ ಇರಾದೆಗೆ ವಿರೋಧ ವ್ಯಕ್ತಪಡಿಸಿವೆ.
Advertisement