
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರ `ಜನಧನ' ಯೋಜನೆಗೆ ವಿಶ್ವಬ್ಯಾಂಕ್‍ನಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ಮೋದಿ ಅವರ `ಬಲಿಷ್ಠ ದೂರದರ್ಶಿ ನಾಯಕತ್ವ'ವು ಭಾರತದ ಎಲ್ಲ ಜನರ ಆರ್ಥಿಕ ಒಳಗೊಳ್ಳುವಿಕೆಗೆ ನಾಂದಿ ಹಾಡಿದೆ ಎಂದು ವಿಶ್ವಬ್ಯಾಂಕ್ ಮುಖ್ಯಸ್ಥ ಜಿಮ್ ಯಾಂಗ್ ಕಿಮ್ ಅಭಿಪ್ರಾಯಪಟ್ಟಿದ್ದಾರೆ. 2013ರ ಸಮೀಕ್ಷೆ ಪ್ರಕಾರ ಭಾರತದಲ್ಲಿ 40 ಕೋಟಿಗಿಂತಲೂ ಕಡಿಮೆ ಮಂದಿ ಬ್ಯಾಂಕ್ ಖಾತೆ ಹೊಂದಿದ್ದರು.
ಈಗ ಜನವರಿ 2015ರ ವೇಳೆಗೆ ಜನಧನ ಯೋಜನೆ ಮೂಲಕ 12.50 ಕೋಟಿ ಖಾತೆ ತೆರೆಯಲಾಗಿದೆ. ದೇಶದ ಪ್ರತಿಯೊಂದು ಮನೆಯೂ ಖಾತೆ ಹೊಂದುವಂತೆ ಮಾಡುವುದು ಸರ್ಕಾರದ ಗುರಿಯಾಗಿದೆ. ಇದು ನಿಜಕ್ಕೂ ಶ್ಲಾಘನೀಯ ಹಾಗೂ ಅದ್ಭುತ ಪರಿಶ್ರಮ ಎಂದು ಕಿಮ್ ಬಣ್ಣಿಸಿದ್ದಾರೆ.
ಕೆನಡಾ ಪಿಎಂಗೆ ಥ್ಯಾಂಕ್ಯೂ ಟ್ವೀಟ್
ನವದೆಹಲಿ: 3 ದೇಶಗಳ ಯಶಸ್ವಿ ಪ್ರವಾಸ ಮುಗಿಸಿ ಮೋದಿ ಭಾರತಕ್ಕೆ ವಾಪಸಾಗಿದ್ದಾರೆ. ಪಾಲಮ್ನ ಟೆಕ್ನಿಕಲ್ ಏರ್ ಫೋರ್ಸ್ ಬೇಸ್‍ನಲ್ಲಿ ಬಂದಿಳಿದ ಅವರನ್ನು ದೆಹಲಿ ಬಿಜೆಪಿ ಅಧ್ಯಕ್ಷ ಸತೀಶ್ ಉಪಾಧ್ಯಾಯ್ ಮತ್ತಿತರ ಶಾಸಕರು ಬರಮಾಡಿಕೊಂಡರು.
ಇದೇ ವೇಳೆ, ಪ್ರವಾಸ ಅತ್ಯಂತ ತೃಪ್ತಿಕರವಾಗಿ ಕೊನೆಗೊಂಡಿದೆ ಯೆಂದು ಟ್ವೀಟ್ ಮಾಡಿದ್ದಾರೆ. ಕೆನಡಾ ಪ್ರಧಾನಿ ಹಾರ್ಪಫ್ರ್ ರಿಗೆ ಧನ್ಯವಾದ ಸಲ್ಲಿಸಿ ಒಂದು ಟ್ವೀಟ್ ಮಾಡಿದ್ದಾರೆ.
Advertisement