ಬಿಹಾರ ಮಳೆ: 42ಕ್ಕೇರಿದ ಸಾವಿನ ಸಂಖ್ಯೆ

ಬಿಹಾರದಲ್ಲಿ ಮಂಗಳವಾರ ರಾತ್ರಿ ಅನಿರೀಕ್ಷಿತ ಆಲಿಕಲ್ಲು ಸಹಿತ ಮಳೆಯಾಗಿದೆ...
ಬಿಹಾರದಲ್ಲಿ ಭಾರಿ ಮಳೆ
ಬಿಹಾರದಲ್ಲಿ ಭಾರಿ ಮಳೆ

ಪಟನಾ: ಬಿಹಾರದಲ್ಲಿ ಮಂಗಳವಾರ ರಾತ್ರಿ ಅನಿರೀಕ್ಷಿತ ಆಲಿಕಲ್ಲು ಸಹಿತ ಮಳೆಯಾಗಿದೆ.

ಇದರಿಂದಾಗಿ 42 ಮಂದಿ ಅಸುನೀಗಿದ್ದು, 100ಕ್ಕೂ ಮಂದಿ ಗಾಯಗೊಂಡಿದ್ದಾರೆ. ಪೂರ್ನಿಯಾ ಜಿಲ್ಲೆಯೊಂದರಲ್ಲೇ 25 ಮಂದಿ ಸಾವಿಗೀಡಾಗಿದ್ದರೆ, ಮಾಧೇಪುರದಲ್ಲಿ 6, ಮಧುಬನಿ ಜಿಲ್ಲೆಯಲ್ಲಿ
ಒಬ್ಬರು ಸಾವಿಗೀಡಾಗಿದ್ದಾರೆ. ಒಟ್ಟು ಏಳು ಜಿಲ್ಲೆಗಳಲ್ಲಿ ಮನೆಗಳು, ಬೆಳೆದು ನಿಂತ ಗೋದಿ, ಬೇಳೆ-ಕಾಳು, ಮೆಕ್ಕೆಜೋಳ ನೀರು ಪಾಲಾಗಿದೆ. ಇದರ ಜತೆ ರಸ್ತೆ ಸಂಪರ್ಕ ಕಡಿದು ಹೋಗಿದೆ. 65 ಕಿಮಿ.ದಲ್ಲಿ ಬೀಸಿದ ಗಾಳಿಯಿಂದ ಈ ಅನಾಹುತ ಸಂಭವಿಸಿದೆ. ಸ್ಥಳೀಯವಾಗಿ ಅದನ್ನು ಕಾಲ್ ಬೈಸಾಖಿ ಎಂದು ಕರೆಯಲಾಗುತ್ತದೆ.

ಬಿಹಾರದ ಪೂರ್ನಿಯಾ ಜಿಲ್ಲೆಯಲ್ಲಿ ಸುಮಾರು 25 ಮಂದಿ ಸಾವನ್ನಪ್ಪಿದ್ದು, ಮಾಧೇಪುರ್ ದಲ್ಲಿ ಆರು ಹಾಗೂ ಮಧುಬನಿಯಲ್ಲಿ ಒಬ್ಬರು ಸಾವನ್ನಪ್ಪಿರುವುದಾಗಿ ಬಿಹಾರ ಆಪತ್ತು ನಿರ್ವಹಣಾ ಇಲಾಖೆಯ ಅಧಿಕಾರಿ ವ್ಯಾಸ್ ಜಿ ತಿಳಿಸಿದ್ದಾರೆ.

ಚಂಡಮಾರುತ ಪೂರ್ನಿಯಾ, ಮಾಧೇಪುರ್, ಸಹಸ್ರಾ, ಮಧುಬನಿ, ಸಂಸ್ತಿಪುರ್, ದರ್ಬಾಂಗ್ ಹಾಗೂ ಕೆಲವೆಡೆ ಹಾನಿ ಮಾಡಿದ್ದು, ಸಾವಿರಾರು ಮರಗಳು ಧರೆಗುಳಿ ಬಿದ್ದಿದ್ದರಿಂದ ವಿದ್ಯುತ್ ಕಂಬ ತುಂಡಾಗಿ ಬಿದ್ದಿವೆ. ಸಾವಿರಾರು ಗುಡಿಸಲು, ಸಾವಿರಾರು ಎಕರೆ ಬೆಳೆ ನಾಶವಾಗಿ ಹೋಗಿರುವುದಾಗಿ ಅಧಿಕಾರಿ ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com