2026ರ ಹೊತ್ತಿಗೆ ಭಾರತದಲ್ಲಿ 17 ಕೋಟಿ "ಹಿರಿಯರು"

2026ರ ಹೊತ್ತಿಗೆ ಭಾರತದಲ್ಲಿರುವ ಹಿರಿಯ ನಾಗರಿಕರ ಸಂಖ್ಯೆ ಸುಮಾರು 17 ಕೋಟಿ ಮೀರಲಿದೆ ಎಂದು ಭಾರತದ ರಿಜಿಸ್ಟ್ರಾರ್ ಜನರಲ್ ಮಾಹಿತಿ ನೀಡಿದೆ.
ಹಿರಿಯ ನಾಗರಿಕರು (ಸಂಗ್ರಹ ಚಿತ್ರ)
ಹಿರಿಯ ನಾಗರಿಕರು (ಸಂಗ್ರಹ ಚಿತ್ರ)

ನವದೆಹಲಿ: 2026ರ ಹೊತ್ತಿಗೆ ಭಾರತದಲ್ಲಿರುವ ಹಿರಿಯ ನಾಗರಿಕರ ಸಂಖ್ಯೆ ಸುಮಾರು 17 ಕೋಟಿ ಮೀರಲಿದೆ ಎಂದು ಭಾರತದ ರಿಜಿಸ್ಟ್ರಾರ್ ಜನರಲ್ ಮಾಹಿತಿ ನೀಡಿದೆ.

ಲೋಕಸಭಾ ಕಲಾಪದಲ್ಲಿ ಇಂದು ಪ್ರಶ್ನೆಯೊಂದಕ್ಕೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವರಾದ ವಿಜಯ್ ಸಂಪ್ಲಾ ಅವರು ಉತ್ತರಿಸಿದರು. "RGI (Registrar General, India) ಕಚೇರಿ ನೀಡಿದ ಮೇ 2006ರ ವರದಿಯನ್ವಯ 2026ರ ವೇಳೆಗೆ ಭಾರತದಲ್ಲಿ ಶೇ.12 ರಷ್ಟು ಅಂದರೆ ಸುಮಾರು 17 ಕೋಟಿಗೂ ಹೆಚ್ಚು ಮಂದಿ ಹಿರಿಯ
ನಾಗರಿಕರು ಇರುತ್ತಾರೆ. ಜನಸಂಖ್ಯಾ ಪ್ರಕ್ಷೇಪಗಳ ಮೇಲಿನ ತಾಂತ್ರಿಕ ಸಮೂಹ ಒದಗಿಸಿದ ವರದಿಯನ್ವಯ 2016ರ ಹೊತ್ತಿಗೆ ಭಾರತದಲ್ಲಿ ಶೇ. 11.81ರಷ್ಟು ಮತ್ತು 2021ರ ವೇಳೆಗೆ 14.31ರಷ್ಟು ಹಿರಿಯ ನಾಗರಿಕರು ಇರುತ್ತಾರೆ ಎಂದು ತಿಳಿದುಬಂದಿದೆ" ಎಂದು ಅವರು ಮಾಹಿತಿ ನೀಡಿದರು.

ಕಳೆದ ಒಂದು ದಶಕದಲ್ಲಿ ಭಾರತದಲ್ಲಿ ಹಿರಿಯ ನಾಗರಿಕರ ಸಂಖ್ಯೆ ಕ್ರಮೇಣ ಹೆಚ್ಚಾಗಿದ್ದು, 2001ರಿಂದ 2011ರ ಅವಧಿಯಲ್ಲಿ ಹಿರಿಯ ನಾಗರಿಕರ ಸಂಖ್ಯೆ 7.7 ಕೋಟಿಯಿಂದ 10.38ಕ್ಕೆ
ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

2020ರ ವೇಳೆಗೆ ಭಾರತದಲ್ಲಿ ಅತಿಹೆಚ್ಚು ಯುವಕರಿರುತ್ತಾರೆ. ಆ ಮೂಲಕ ಭಾರತ ದೇಶ ಇಡೀ ವಿಶ್ವದಲ್ಲೇ ಯುವ ರಾಷ್ಟ್ರವಾಗಿ ಗುರುತಿಸಿಕೊಳ್ಳಲಿದೆ ಎಂದು ಸಮೀಕ್ಷೆಯೊಂದು ಹೇಳಿತ್ತು. ಇದೀಗ ಹೊರಬಿದ್ದಿರುವ ಆರ್ ಜಿಐ ನ ಮಾಹಿತಿಯನ್ವಯ ಭಾರತದ ಭವಿಷ್ಯ ನಿರ್ಧರಿಸುವ ಯಂಗ್ ಇಂಡಿಯಾಗೆ ಮಾರ್ಗದರ್ಶನ ಮಾಡಲು ಸೀನಿಯರ್ ಇಂಡಿಯಾ ಕೂಡ ರೆಡಿಯಾಗುತ್ತಿದೆ ಅಂತಾಯ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com