

ನವದೆಹಲಿ: ಭಿಕ್ಷೆ ಬೇಡುವುದು ಅವಮಾನಕರ ಎಂದು ಭಾವಿಸುತ್ತೇವೆ. ಆದರೆ, ಭಿಕ್ಷೆ ಎಂಬುದು ಕೋಟ್ಯಂತರ ರೂಪಾಯಿಯ ಕರಾಳದಂಧೆಯಾಗಿದೆ.
ಭಿಕ್ಷೆ ಬೇಡಿಯೇ ಕೋಟಿ ಕೋಟಿ ಹಣ ಬ್ಯಾಂಕ್ ಗಳಲ್ಲಿ ಇಟ್ಟಿರುವ ಸುದ್ದಿಗಳು ಮಾಧ್ಯಮಗಳಲ್ಲಿ ಬಿತ್ತರಗೊಂಡ ಉದಾಹರಣೆಗಳು ಕಣ್ ಮುಂದಿದೆ. ದೆಹಲಿಯ ವಿಶ್ವವಿದ್ಯಾಲಯದ ಪದವೀಧರನೊಬ್ಬ ಇದಕ್ಕೆ ಒಳ್ಳೆಯ ಪುರಾವೆ ಒದಗಿಸಿದ್ದಾನೆ. ಭಿಕ್ಷೆ ಎತ್ತಿ ಎಷ್ಟು ಸುಲಭವಾಗಿ ಹಣ ಸಂಪಾದಿಸಬಹುದು ಎಂಬುದನ್ನು ತಾನೇ ಮಾಡಿ ತೋರಿಸಿದ್ದಾನೆ.
ಭಿಕ್ಷುಕನಾಗಿ ವೇಷ ಹಾಕುವ ಈ ಯುವಕ ದಿಲ್ಲಿಯ ಬೀದಿಗಳಲ್ಲಿ ಭಿಕ್ಷೆ ಎತ್ತುತ್ತಾ ಎರಡೇ ಗಂಟೆಯಲ್ಲಿ 200 ರೂಪಾಯಿ ಸಂಪಾದಿಸುತ್ತಾನೆ. ದಿನವೂ ಹೀಗೇ ಮಾಡಿದರೆ ತಿಂಗಳಿಗೆ ಬರೋಬ್ಬರಿ 30 ಸಾವಿರ ರೂಪಾಯಿ ಸಂಗ್ರಹವಾಗುತ್ತದೆ ಎಂಬುದನ್ನು ಆತ ಬಹಳ ಮಾರ್ಮಿಕವಾಗಿ ತೋರಿಸಿದ್ದಾನೆ.
ನೀವು ದಯೆಯಿಂದ, ಕರುಣೆಯಿಂದ ನೀಡುವ ಭಿಕ್ಷೆ ಹಣದಿಂದ ಒಂದು ದೊಡ್ಡ ಮಾಫಿಯಾ ಸೃಷ್ಟಿಯಾಗುತ್ತದೆ ಎಂಬುದನ್ನ ಹೇಳುತ್ತಾ ಜನರಿಗೆ ಜಾಗೃತಿ ಮೂಡಿಸಲು ಒಂದು ಪುಟ್ಟ ವಿಡಿಯೋ ಮಾಡಿ ಯೂಟ್ಯೂಬ್'ಗೆ ಹಾಕಲಾಗಿದೆ. ಈ ವಿಡಿಯೋ ಒಂದೇ ದಿನದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.