

ನವದೆಹಲಿ: ದೇಶದ ಶೇ.50ಕ್ಕಿಂತ ಹೆಚ್ಚು ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ವ್ಯವಸ್ಥೆಯೇ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ.
ಒಂದು ವರ್ಷದಲ್ಲಿ ಸ್ವಚ್ಛಭಾರತ ಅಭಿಯಾನ ದಡಿ 20ಸಾವಿರ ಶೌಚಾಲಯ ನಿರ್ಮಿಸಲಾಗಿದ್ದು ದೇಶದ 12,74,834 ಅಂಗನವಾಡಿ ಕೇಂದ್ರಗಳ ಪೈಕಿ 6,29,541ರಲ್ಲಿ ಮಾತ್ರ ಶೌಚಾಲಯಗಳಿವೆಯೆಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ.
ದೆಹಲಿ, ಚಂಡಿಗಡ, ಲಕ್ಷ ದ್ವೀಪ, ಉತ್ತರಾ ಖಂಡ ಮತ್ತು ನಾಗಾಲ್ಯಾಂಡ್‍ನಲ್ಲಿ ಶೇ.100ರಷ್ಟು ಶೌಚಾಲಯ ನಿರ್ಮಾಣವಾಗಿದ್ದು, ಬಿಹಾರ (10.04%) ತೆಲಂಗಾಣ(21.41%), ರಾಜಸ್ಥಾನ
(26.33%) ರಾಜ್ಯಗಳಲ್ಲಿ ಅತಿ ಕಡಿಮೆ ಶೌಚಾಲಯ ಗಳು ನಿರ್ಮಾಣವಾಗಿವೆ. ಕರ್ನಾಟಕದಲ್ಲಿ ಈ ಸಂಖ್ಯೆ ಶೇ.46.28ರಷ್ಟಿದೆ. ಅಂಗನವಾಡಿ ಕಾರ್ಯ ಕರ್ತರ ಸಂಖ್ಯೆಯಲ್ಲಿಯೂ ಕೊರತೆ ಕಂಡುಬಂದಿದ್ದು, ಸುಮಾರು 2ಲಕ್ಷದಷ್ಟು ಹುದ್ದೆಗಳು ಭರ್ತಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.