ನವದೆಹಲಿ: ಇರಾಕ್ ಮತ್ತು ಸಿರಿಯಾದಲ್ಲಿ ವಿದ್ವಂಸಕ ಕೃತ್ಯಗಳನ್ನು ಎಸಗುವ ಮೂಲಕ ಕ್ರೌರ್ಯ ಮೆರೆಯುತ್ತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೇರಿದ್ದ 13 ಮಂದಿ ಭಾರತೀಯರ ಪೈಕಿ ಆರು ಮಂದಿ ಮೃತಪಟ್ಟಿದ್ದು, 7 ಮಂದಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ, ತೆಲಂಗಾಣ ಮತ್ತು ಮುಂಬೈ ಸೇರಿದಂತೆ ಹಲವು ರಾಜ್ಯಗಳ ಯುವಕರು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೇರಿದ್ದರು. ಈ ಪೈಕಿ ಆರು ಮಂದಿ ದಾಳಿ ವೇಳೆ ಮೃತಪಟ್ಟಿದ್ದು, ಇನ್ನು ಏಳು ಮಂದಿ ಇಸಿಸ್ ಸಂಘಟನೆಯಲ್ಲೇ ಇದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ಏಳು ಮಂದಿ ಪೈಕಿ ಓರ್ವ ಮಾತ್ರ ದಾಳಿಗಳಲ್ಲಿ ಭಾಗವಹಿಸುತ್ತಿದ್ದು, ಮತ್ತೆ ಆರು ಮಂದಿ ಅಡುಗೆ, ಸ್ವಚ್ಛತ ಸೇರಿದಂತೆ ಇನ್ನಿತರ ಕೆಲಸಗಳನ್ನು ಮಾಡಿಕೊಂಡಿದ್ದಾರೆ.
ಇತ್ತೀಚೆಗಷ್ಟೇ 17 ಮಂದಿ ಭಾರತೀಯ ಯುವಕರು ಇಸಿಸ್ ಉಗ್ರ ಸಂಘಟನೆ ಸೇರಲು ಸಿರಿಯಾಕ್ಕೆ ತೆರಳುವ ಸಂದರ್ಭದಲ್ಲಿ ಭಾರತ ಸರ್ಕಾರ ತಡೆದಿತ್ತು.