ಸೆಕ್ಸ್ ಗೆ ನಿರಾಕರಿಸಿದ 19 ಬಾಲಕಿಯರ ಬರ್ಬರ ಹತ್ಯೆ

ಲೈಂಗಿಕ ಕ್ರಿಯೆಗೆ ನಿರಾಕರಿಸಿದ 19 ಬಾಲಕಿಯರನ್ನು ಇಸಿಸ್ ಉಗ್ರರು ಬರ್ಬರವಾಗಿ
Updated on: 

ಬಾಗ್ಧಾದ್: ಲೈಂಗಿಕ ಕ್ರಿಯೆಗೆ ನಿರಾಕರಿಸಿದ 19 ಬಾಲಕಿಯರನ್ನು ಇಸಿಸ್ ಉಗ್ರರು ಬರ್ಬರವಾಗಿ ಹತ್ಯೆಗೈದಿರುವ ಘಟನೆ ವರದಿಯಾಗಿದೆ.

2014ರಲ್ಲಿ ಇರಾಕ್ ನ ಮಸೂಲ್ ನಗರದಲ್ಲಿ ದಾಳಿ ನಡೆಸಿದ ವೇಳೆ ಮಹಿಳೆಯರನ್ನು ಒತ್ತೆಯಾಳಗಿಟ್ಟುಕೊಳ್ಳಲಾಗಿತ್ತು. ಇವರಲ್ಲಿದ್ದ 19 ಬಾಲಕಿಯರು ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಹಿನ್ನಲೆಯಲ್ಲಿ ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಸಿಸ್ ಉಗ್ರರು ಅಪಹರಣ ಮಾಡಿದ ಮಹಿಳೆಯರನ್ನು ತಮ್ಮಲ್ಲಿಯೇ ಮಾರಾಟ ಮಾಡಿಕೊಳ್ಳುವ ಪದ್ಧತಿಯನ್ನು ಶುರು ಮಾಡಿದ್ದಾರೆ. ಒಂದು ನಿಗದಿತ ದಿನದಲ್ಲಿ ಮಹಿಳೆಯರು ಹಾಗೂ ಬಾಲಕಿಯರನ್ನಾ ಇಸಿಸ್ ಉಗ್ರರು ಮಾರಾಟ ಮಾಡುತ್ತಾರೆ. ಈ ವೇಳೆ ಅತಿ ಹೆಚ್ಚು ಬೆಲೆಗೆ ಹೆಣ್ಣುಮಕ್ಕಳನ್ನು ಖರೀದಿಸುವವನಿಗೆ ಅವರನ್ನು ಕೊಡಲಾಗುತ್ತದೆ.

ಇತ್ತೀಚೆಗೆ ಇಸಿಸ್ ಉಗ್ರರು ಬಿಡುಗಡೆ ಮಾಡಿರುವಂತಹ ವಿಡಿಯೋ ಒಂದರಲ್ಲಿ ಹೆಣ್ಣು ಮಕ್ಕಳ ಕೊಂಡುಕೊಳ್ಳುವುದರ ಬಗ್ಗೆ ಉಗ್ರರು ಚರ್ಚೆ ಮಾಡುತ್ತಿರುವುದು ಬಯಲಾಗಿದೆ. ಇಂದು ಹೆಣ್ಣುಮಕ್ಕಳನ್ನಾ ಮಾರಾಟ ಮಾಡುವ ದಿನ. ನಮಗೆ ಬೇಕಾದ ಹುಡುಗಿಯರನ್ನಾ ಆಯ್ಕೆ ಮಾಡಿಕೊಳ್ಳಬಹುದು ಎಂದು ಉಗ್ರರು ಹೇಳುತ್ತಿರುವುದು ದೃಶ್ಯದಲ್ಲಿ ದಾಖಲಾಗಿದೆ. ಅಲ್ಲದೇ ನಾನು ಖರೀದಿಸುವ ಹುಡುಗಿಗೆ ಗಿಫ್ಟ್ ಕೊಡಲು ಬಂದೂಕನ್ನು ಖರೀದಿ ಮಾಡುವುದಾಗಿ ಮತ್ತೊಬ್ಬ ಉಗ್ರ ಹೇಳಿಕೊಂಡಿದ್ದಾನೆ.

ಇಸಿಸ್ ಉಗ್ರರು ದಾಳಿ ಮಾಡುವ ಕಡೆಯಲ್ಲಿ ಇರುವಂತಹ ಯಾಜಿದಿ ಮತ್ತು ಕ್ರಿಶ್ಚಿಯನ್ ಸಮುದಾಯದ ಹೆಣ್ಣುಮಕ್ಕಳನ್ನು ಅಪಹರಿಸಿ ಒತ್ತೆಯಾಳಗಿಟ್ಟುಕೊಂಡಿರುತ್ತಾರೆ. ತದ ನಂತರ ಅವರ ಮಾರಾಟ ಒಂದು ದಿನ ನಿಗದಿ ಮಾಡುತ್ತಾರೆ. ಆ ವೇಳೆ ವಯಸ್ಸು ಕಡಿಮೆ ಇರುವ ಹೆಣ್ಣುಮಕ್ಕಳಿಗೆ ಹೆಚ್ಚು ಬೆಲೆ, ವಯಸ್ಸು ಜಾಸ್ತಿಯಾಗಿರುವ ಮಹಿಳೆಗೆ ಕಡಿಮೆ ಬೆಲೆ ಕೊಟ್ಟು ಖರೀದಿಸುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com