ಬೆಲೆ ಇಳಿಕೆ ವಿರೋಧಿಸಿ ಜಲಂಧರ್ ರೈತರಿಂದ ಉಚಿತವಾಗಿ ಆಲೂಗಡ್ಡೆ ಹಂಚಿಕೆ

ಪಂಜಾಬ್ ನ ಜಲಂಧರ್ ನ ರೈತರು ತಾವು ಬೆಳೆದ ಬೆಳೆಯನ್ನು ಜನರಿಗೆ ಉಚಿತವಾಗಿ ಹಂಚುತ್ತಿದ್ದಾರೆ.
ಜಲಂಧರ್ ರೈತರಿಂದ ಉಚಿತ ಆಲೂಗಡ್ಡೆ ಹಂಚಿಕೆ
ಜಲಂಧರ್ ರೈತರಿಂದ ಉಚಿತ ಆಲೂಗಡ್ಡೆ ಹಂಚಿಕೆ

ಜಲಂಧರ್: ಬೆಳೆ ನಷ್ಟವಾಗಿ, ಸಾಲದ ಹೊರೆ ಎದುರಿಸುತ್ತಿರುವ ಕರ್ನಾಟಕದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ. ಪಂಜಾಬ್ ನ ಜಲಂಧರ್ ನ ರೈತರು ತಾವು ಬೆಳೆದ ಬೆಳೆಯನ್ನು ಜನರಿಗೆ ಉಚಿತವಾಗಿ ಹಂಚುತ್ತಿದ್ದಾರೆ. 

ಸೂಕ್ತ ಬೆಲೆ ಸಿಗದ ಕಾರಣ ಆಕ್ರೋಶಗೊಂಡಿರುವ ರೈತರು ತಾವು ಬೆಳೆದಿದ್ದ ಆಲೂಗಡ್ಡೆಯನ್ನು ಉಚಿತವಾಗಿ ಹಂಚುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಆಲೂಗಡ್ಡೆ ದರ ಕುಸಿತಕಂಡಿದ್ದು ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಇದ್ದರೆ ಮತ್ತಷ್ಟು ಉಗ್ರ ಪ್ರತಿಭಟನೆ ನಡೆಸುವುದಾಗಿ ಆಲೂಗಡ್ಡೆ ಬೆಳೆಗಾರರು ಎಚ್ಚರಿಕೆ ನೀಡಿದ್ದಾರೆ.

ಪ್ರತಿ ಎಕರೆಗೆ  ಉತ್ಪಾದನಾ ವೆಚ್ಚ 50, 000 - 60, 000 ರಷ್ಟಾಗುತ್ತದೆ, ಆದರೆ ನಮ್ಮ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆಯೇ ಇಲ್ಲದಂತಾಗಿದೆ ಎಂದು ಜಲಂಧರ್ ಆಲೂಗಡ್ಡೆ ಬೆಳೆಗಾರರ ಸಂಘದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಸರ್ಕಾರ ನಮ್ಮ ಬೆಳೆಯನ್ನು ರಫ್ತು ಮಾಡುವುದಕ್ಕೆ ಕ್ರಮ ಕೈಗೊಳ್ಳಬೇಕು, ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com