ಸಾಮಾಜಿಕ ಜಾಲತಾಣ ಸಂದೇಶ ನಿಯಂತ್ರಣಕ್ಕೆ ಬೇಕು ಕಾನೂನು

ಸಾಮಾಜಿಕ ಜಾಲ ತಾಣಗಳಲ್ಲಿ ಇನ್ನೊಬ್ಬರ ವಿರುದ್ಧ ಮಾನಹಾನಿಕಾರಕ, ದ್ವೇಷ ಬಿತ್ತುವ ಸಂದೇಶಗಳನ್ನು ಪರಿಸರಿಸಲು ಮುಕ್ತ ಅವಕಾಶ ಇರಬಾರದು. ಇಂಥ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ಸಾಮಾಜಿಕ ಜಾಲ ತಾಣಗಳಲ್ಲಿ ಇನ್ನೊಬ್ಬರ ವಿರುದ್ಧ  ಮಾನಹಾನಿಕಾರಕ, ದ್ವೇಷ ಬಿತ್ತುವ ಸಂದೇಶಗಳನ್ನು ಪರಿಸರಿಸಲು ಮುಕ್ತ ಅವಕಾಶ ಇರಬಾರದು. ಇಂಥ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಹೊಸ ಕಾನೂನೊಂದನ್ನು ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಸಾಮಾಜಿಕ, ಜಾಲತಾಣಗಳ ದುರುಪಯೋಗ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ನ್ಯಾ. ದೀಪಕ್ ಮಿಶ್ರಾಮತ್ತು ನ್ಯಾ. ಪ್ರಫುಲ್ಲಾ ಸಿ. ಪಂತ್ ಅವರಿದ್ದ ಪೀಠ, ಸಂಸತ್ತು ಈ ಸಂಬಂಧ ಹೊಸ ಕಾಯ್ದೆಯನ್ನು ರೂಪಿಸಬೇಕು ಎಂದು ಸಲಹೆ ನೀಡಿದೆ ಎಂದು ``ದ ಟೈಮ್ಸ್ ಆಫ್ ಇಂಡಿಯಾ'' ವರದಿ ಮಾಡಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಾದಾತ್ಮಕ ಕಲಂ 66ಎ ಅನ್ನು ರದ್ದು ಮಾಡಿತ್ತು. ಈ ಕಲಂ ಅಸ್ಪಸ್ಟವಾಗಿತ್ತು. ಜತೆಗೆ ಅದರ ರಚನೆಯೂ ಸರಿಯಾಗಿರಲಿಲ್ಲ. ಆದರೆ, ನಾವು ಸಾಮಾಜಿಕ ಜಾಲತಾಣಗಳ ದುರುಪಯೋಗ ತಡೆಯಲು ಹೊಸ ಕಾನೂನು ಜಾರಿಗೆ ತರುವಂತೆ ಮನವಿ ಮಾಡಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com