ಭಾರತದಲ್ಲಿ 7 ತಿಂಗಳಲ್ಲಿ 41 ಹುಲಿಗಳ ಸಾವು
ನವದೆಹಲಿ: ಹುಲಿ ಸಂರಕ್ಷಣೆಗಾಗಿ ಸರ್ಕಾರ ಏನೆಲ್ಲಾ ಪ್ರಯತ್ನ ಮಾಡುತ್ತಿದ್ದರೂ ಅವುಗಳ ಸಂತತಿ ಮಾತ್ರ ನಶಿಸುತ್ತಲೇ ಇದೆ. ಹುಲಿ ಸಂರಕ್ಷಣೆಗಾಗಿ ಬೃಹತ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಿದ್ದರೂ ಕಳೆದ 7 ತಿಂಗಳಲ್ಲಿ ದೇಶಾದ್ಯಂತ ಒಟ್ಟು 41 ಹುಲಿಗಳು ಸಾವನ್ನಪ್ಪಿವೆ ಎಂದು ವರದಿಯೊಂದು ಆಘಾತಕಾರಿ ಮಾಹಿತಿಯನ್ನು ಬಹಿರಂಗ ಪಡಿಸಿದೆ.
2015 ಜನವರಿ ಯಿಂದ ಆಗಸ್ಟ್ ವರೆಗೆ ದೇಶಾದ್ಯಂತ ಒಟ್ಟು 41 ಹುಲಿಗಳು ದಾರುಣ ಸಾವನ್ನಪ್ಪಿವೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣ ಪ್ರಾಧಿಕಾರ ತಿಳಿಸಿದೆ. ವರದಿ ಪ್ರಕಾರ 41 ಹುಲಿಗಳು ಸ್ವಾಭಾವಿಕವಾಗಿ ಸಾವನ್ನಪ್ಪಿಲ್ಲ, ಹುಲಿ ಮತ್ತು ಮಾನವರ ನಡುವಿನ ಸಂಘರ್ಷದಲ್ಲಿ ಬಂದೂಕಿನ ಗುಂಡಿಗೆ ಹೆಚ್ಚಿನ ಹುಲಿಗಳು ಬಲಿಯಾಗಿವೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಸಾವನ್ನಪ್ಪಿವೆ, ಕಳೆದ ವರ್ಷ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಹಲವು ಹುಲಿಗಳು ಸಾವನಪ್ಪಿದ್ದರೇ ಇನ್ನು ಕೆಲವು ಹುಲಿಗಳು ವಿಷಪ್ರಾಸನದಿಂದ ಮೃತಪಟ್ಟಿದ್ದವು. ಸ್ಥಳೀಯರು ಹುಲಿಗಳ ದೇಹದ ಹಲವು ಅಂಗಾಂಗಳಿಗಾಗಿ ಹುಲಿಗಳಿಗೆ ವಿಷವುಣಿಸಿ ಕೊಲೆ ಮಾಡಿದ್ದರು ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ