ರೈಲ್ವೇ ಹಳಿ ಸ್ಫೋಟ ಸಂಚು ವಿಫಲ: ಕೆಎಲ್ಓ ಉಗ್ರನ ಹತ್ಯೆಗೈದ ಸೇನೆ

ರೈಲ್ವೆ ಹಳಿ ಸ್ಫೋಟಿಸುವ ಮೂಲಕ ಸ್ವಾತಂತ್ರೋತ್ಸವದ ಸಂಭ್ರಮದ ವೇಳೆ ಹಿಂಸಾಚಾರ ನಡೆಸಲು ಮುಂದಾಗಿದ್ದ ಕಮ್ಟಾಪುರ್ ಲಿಬರೇಶನ್...
ಭಾರತೀಯ ಸೇನೆ
ಭಾರತೀಯ ಸೇನೆ
Updated on: 
ಕೊಕ್ರಾಝಾರ(ಅಸ್ಸಾಂ): ರೈಲ್ವೆ ಹಳಿ ಸ್ಫೋಟಿಸುವ ಮೂಲಕ ಸ್ವಾತಂತ್ರೋತ್ಸವದ ಸಂಭ್ರಮದ ವೇಳೆ ಹಿಂಸಾಚಾರ ನಡೆಸಲು ಮುಂದಾಗಿದ್ದ ಕಮ್ಟಾಪುರ್ ಲಿಬರೇಶನ್ ಆರ್ಗೈಜೆಷನ್ (ಕೆಎಲ್ಓ) ಉಗ್ರನನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. 
ಶುಕ್ರವಾರ ಬೆಳಗ್ಗೆ ಕೊಕ್ರಾಝಾರದ ಸಮೀಪ ರೈಲ್ವೆ ಹಳಿಯಲ್ಲಿ ಎಲ್ಇಡಿ ಸ್ಪೋಟಕ ಅಳವಡಿಸಿ ರೈಲ್ವೆ ಹಳಿ ಸ್ಫೋಟಿಸುವ ಕೆಎಲ್ಓ ಉಗ್ರರ ಕಾರ್ಯವನ್ನು ಭಾರತೀಯ ಸೇನೆ ಮತ್ತು ಅಸ್ಸಾಂ ಪೊಲೀಸರು ವಿಫಲಗೊಳಿಸಿದ್ದು, ಐವರು ಉಗ್ರರ ಪೈಕಿ ಓರ್ವನನ್ನು ಹತ್ಯೆಗೈದಿದ್ದಾರೆ. 
ಉಗ್ರರು ಹಾಗೂ ಸೇನೆ ನಡುವೆ ಗುಂಡಿನ ಕಾಳಗದಲ್ಲಿ ಉಗ್ರನೊರ್ವ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ, ಉಳಿದವರು ಪರಾರಿಯಾಗಿದ್ದಾರೆ. ಮೃತ ಉಗ್ರನಿಂದ ಎ 7.65 ಎಂಎಂ ಪಿಸ್ತೂಲ್, ಪಿಸ್ತೂಲ್ ನಿಯತಕಾಲಿಕೆ, ಎರಡು ಹ್ಯಾಂಡ್ ಗ್ರೇನೆಡ್, 7 ಕೆಜಿ ಎಲ್ಇಡಿ ಸ್ಪೋಟಕ ಮತ್ತು ಹಲವು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ ಉಗ್ರರು ಸ್ವಾತಂತ್ರೋತ್ಸವದಂದು ಎಲ್ಇಡಿ ಸ್ಪೋಟಕವನ್ನು ಬಳಸಿಕೊಂಡು ರೈಲ್ವೆ ಹಳಿಯನ್ನು ಸ್ಪೋಟಿಸಲು ಯೋಜನೆ ರೂಪಿಸುತ್ತಿದ್ದರು ಎಂದು ಮತ್ತು ಅಸ್ಸಾಂ ಪೊಲೀಸ್ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com