ಗಡಿಯಲ್ಲಿ ಪಾಕ್ ಕದನ: ಪಾಕ್ ಹೈಕಮೀಷನರ್‌ ಬಸಿತ್‌ಗೆ ಸಮನ್ಸ್‌

ಜಮ್ಮುವಿನ ಗಡಿನಿಯಂತ್ರಣ ರೇಖೆಯುದ್ಧಕ್ಕೂ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನ ಕೃತ್ಯದ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿರುವ ಭಾರತ...
ಅಬ್ದುಲ್ ಬಸಿತ್
ಅಬ್ದುಲ್ ಬಸಿತ್
ನವದೆಹಲಿ: ಜಮ್ಮುವಿನ ಗಡಿನಿಯಂತ್ರಣ ರೇಖೆಯುದ್ಧಕ್ಕೂ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನ ಕೃತ್ಯದ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿರುವ ಭಾರತ ಪಾಕಿಸ್ತಾನದ ಹೈಕಮೀಷನರ್‌ ಅಬ್ದುಲ್ ಬಸಿತ್ ಗೆ ಸಮನ್ಸ್‌ ಜಾರಿಗೊಳಿಸಲಿದೆ.
ಗಡಿಯಲ್ಲಿ ನಾಗರಿಕ ಪ್ರದೇಶಗಳು ಹಾಗೂ ಸೇನಾ ಗಡಿ ಠಾಣೆಗಳ ಮೇಲೆ ಪಾಕ್‌ ಸೇನೆ ನಡೆಸಿದ ದಾಳಿಗೆ ಶನಿವಾರದಿಂದ ಈವರೆಗೂ ಮಹಿಳೆಯೊಬ್ಬರು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದು, ಈ ಸಂಬಂಧ ಬಸಿತ್‌ ಅವರಿಗೆ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸುವಂತೆ ಇಲಾಖೆ ಕಾರ್ಯದರ್ಶಿ ಅನಿಲ್ ವಾಧ್ವಾ ಅವರು ಸಮನ್ಸ್ ಜಾರಿಗೊಳಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಉಭಯ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆಗೆ ವೇದಿಕೆ ಸಜ್ಜುಗೊಂಡಿರುವ ಹೊರತಾಗಿಯೂ ಬಸಿತ್ ಅವರಿಗೆ ಸಮನ್ಸ್ ‌ನೀಡಲು ಭಾರತ ನಿರ್ಧರಿಸಿದೆ ಎನ್ನಲಾಗಿದೆ. ಆಗಸ್ಟ್ 23 ಹಾಗೂ 24ರಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಹಾಗೂ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋಬಾಲ್ ಅವರು ಸಭೆ ನಡೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com