ಅನೈತಿಕ ಸಂಬಂಧ ಹೊಂದಿರುವ ಪತ್ನಿಗೆ ಜೀವನಾಂಶ ಇಲ್ಲ: ಮದ್ರಾಸ್ ಹೈ ಕೋರ್ಟ್

ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಪತ್ನಿಗೆ ವಿಚ್ಛೋದಿತ ಪತಿ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ಮದ್ರಾಸ್ ಹೈ ಕೋರ್ಟ್ ಸೋಮವಾರ ಹೇಳಿದೆ...
ಮದ್ರಾಸ್ ಹೈ ಕೋರ್ಟ್ (ಸಂಗ್ರಹ ಚಿತ್ರ)
ಮದ್ರಾಸ್ ಹೈ ಕೋರ್ಟ್ (ಸಂಗ್ರಹ ಚಿತ್ರ)

ಮಧುರೈ: ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಪತ್ನಿಗೆ ವಿಚ್ಛೋದಿತ ಪತಿ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ಮದ್ರಾಸ್ ಹೈ ಕೋರ್ಟ್ ಸೋಮವಾರ ಹೇಳಿದೆ.

ತಮ್ಮ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಕಾರಣಕ್ಕೆ 2011 ರಲ್ಲಿ ಸರ್ಕಾರಿ ನೌಕರರೊಬ್ಬರು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಈ ಅರ್ಜಿಯನ್ನು ಪರಿಶೀಲಿಸಿದ ಸೆಷನ್ಸ್ ನ್ಯಾಯಾಲಯವು ವಿಚ್ಛೇದನಕ್ಕೆ ಅನುವು ಮಾಡಿಕೊಟ್ಟಿತ್ತಲ್ಲದೇ, ಪತ್ನಿಗೆ ಮಾಸಿಕ ಸಾವಿರ ರುಪಾಯಿ ನೀಡುವಂತೆ ಆದೇಶ ನೀಡಿತ್ತು. ಆದರೆ, ನ್ಯಾಯಾಲಯ ಈ ತೀರ್ಪಿಗೆ ಅಸಮಾಧಾನಗೊಂಡ ಸರ್ಕಾರಿ ನೌಕರ ಆದೇಶವನ್ನು ಪ್ರಶ್ನಿಸಿ ಹೈ ಕೋರ್ಟ್ ಮೆಟ್ಟಿಲು ಹತ್ತಿದ್ದ.
 
ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿದ ಮದ್ರಾಸ್ ಹೈ ಕೋರ್ಟ್ ನ ನ್ಯಾಯಮೂರ್ತಿ ಎಸ್. ನಾಗಮುತ್ತು ಅವರಿದ್ದ ಪೀಠ ಇಂದು ತೀರ್ಪು ನೀಡಿದ್ದು, ವಿವಾಹವಾದ ಮಹಿಳೆ ವಿಚ್ಛೇದನ ಪಡೆದಾಗ ಆಕೆ ಜೀವನ ನಡೆಸಲು ಯಾವುದೇ ಆಧಾರವಿಲ್ಲದೇ ಹೋದಾಗ ಜೀವನಾಂಶವನ್ನು ಪತಿಯಿಂದ ಕೊಡಿಸಲಾಗುತ್ತದೆ. ಜೀವನಾಂಶ ಕೇಳುವ ಮಹಿಳೆ ನೀತಿ ನಿಯಮಗಳನ್ನು ಪಾಲಿಸಬೇಕಿರುತ್ತದೆ.

ನಿಯಮಗಳನ್ನು ಪಾಲಿಸದೆ, ಲೈಂಗಿಕ ಜವಾಬ್ದಾರಿಯನ್ನು ಉಲ್ಲಂಘನೆ ಮಾಡಿ ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಮಹಿಳೆಗೆ ಮೊದಲ ಪತಿಯ ಬಳಿ ಜೀವನಾಂಶ ಕೇಳುವ ಹಕ್ಕನ್ನು ಕಳೆದುಕೊಂಡಿರುತ್ತಾಳೆ. ಪರ ಪುರುಷನೊಂದಿಗೆ ಸಂಬಂಧ ಹೊಂದಿರುವ ಮಹಿಳೆ ಆತನೊಂದಿಗೆ ಜೀವನಾಂಶ ಕೇಳಬೇಕೇ ಹೊರತು ಮಾಜಿ ಪತಿಯಿಂದ ಅಲ್ಲ. ಈ ತೀರ್ಪು ಕಾನೂನು ಮೂಲಕ ಈಗಾಗಲೇ ವಿಚ್ಛೇದನ ಪಡೆದಿರುವ ಮಹಿಳೆಯರಿಗೂ ಅನ್ವಯವಾಗುತ್ತದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com