ಒಬ್ಬರನ್ನು ನಾಲ್ವರು ಅತ್ಯಾಚಾರ ಮಾಡಲು ಸಾಧ್ಯವಿಲ್ಲ; ಮುಲಾಯಂ

ಅತ್ಯಾಚಾರಿಗಳ ಪರ ತಮ್ಮ ವಾದವನ್ನು ಮುಂದುವರೆಸಿರುವ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಅವರು ಇದೀಗ ಒಬ್ಬರನ್ನು ನಾಲ್ವರು ಅತ್ಯಾಚಾರ ಮಾಡಲು ಸಾಧ್ಯವೇ ಇಲ್ಲ ಎಂದು ಬುಧವಾರ ಹೇಳುವ ಮೂಲಕ ಮತ್ತೆ ವಿವಾದವೊಂದಕ್ಕೆ ಸಿಲುಕಿದ್ದಾರೆ...
ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ (ಸಂಗ್ರಹ ಚಿತ್ರ)
ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ (ಸಂಗ್ರಹ ಚಿತ್ರ)
Updated on: 

ಲಖನೌ: ಅತ್ಯಾಚಾರಿಗಳ ಪರ ತಮ್ಮ ವಾದವನ್ನು ಮುಂದುವರೆಸಿರುವ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಅವರು ಇದೀಗ ಒಬ್ಬರನ್ನು ನಾಲ್ವರು ಅತ್ಯಾಚಾರ ಮಾಡಲು ಸಾಧ್ಯವೇ ಇಲ್ಲ ಎಂದು ಬುಧವಾರ ಹೇಳುವ ಮೂಲಕ ಮತ್ತೆ ವಿವಾದವೊಂದಕ್ಕೆ ಸಿಲುಕಿದ್ದಾರೆ.

ಈ ಕುರಿತಂತೆ ಉಚಿತ ಇ-ಆಟೋರಿಕ್ಷಾ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಅತ್ಯಾಚಾರ ಮಾಡಿದವನು ಒಬ್ಬನೇ ಆದರೂ ದೂರಿನಲ್ಲಿ ನಾಲ್ಕು ಮಂದಿಯ ಹೆಸರಿರುತ್ತದೆ. ನಾಲ್ಕು ಮಂದಿ ಒಬ್ಬ ಮಹಿಳೆಯನ್ನು ಅತ್ಯಾಚಾರ ಮಾಡಲು ಹೇಗೆ ಸಾಧ್ಯ. ಇದು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಅತ್ಯಾಚಾರ ಪ್ರಕರಣಗಳ ಸಂಖ್ಯೆ ದೆಹಲಿಯಲ್ಲಿ ಹೆಚ್ಚಾಗಿದ್ದು, ಮಧ್ಯಪ್ರದೇಶದಲ್ಲಿ ಶೇ.9, ರಾಜಸ್ಥಾನ ಶೇ.7, ಉತ್ತರಪ್ರದೇಶದಲ್ಲಿ ಕೇವಲ ಶೇ.2 ಇದೆ. ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಅತ್ಯಾಚಾರ ಪ್ರಕರಣಗಳು ಕಡಿಮೆ ಇರುವುದು ನಮ್ಮ ರಾಜ್ಯ ಉತ್ತರಪ್ರದೇಶದಲ್ಲಿ ಮಾತ್ರ. ರಾಜಕೀಯ ವೈಷಮ್ಯಕ್ಕೆ ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಟೀಕೆ ಮಾಡಲಾಗುತ್ತಿದೆ. ಅತ್ಯಾಚಾರವನ್ನು ಒಬ್ಬ ವ್ಯಕ್ತಿ ಮಾಡಿದರೆ. ಆತನ ಮನೆಯಲ್ಲಿರುವ ಪುರುಷರನ್ನೂ ಬಂಧನಕ್ಕೊಳಪಡಿಸಲಾಗುತ್ತದೆ.

ಇಂಥ ಅದೆಷ್ಟೋ ಘಟನೆಗಳು ನನಗೆ ತಿಳಿದಿದೆ. ಉದಾಹರಣೆಗೆ ತೆಗೆದುಕೊಳ್ಳುವುದಾದರೆ ಬದೌನ್ ಪ್ರಕರಣ ಏನಾಯಿತು. ಬದೌನ್ ಪ್ರಕರಣವನ್ನು ವಿನಾ ಕಾರಣ ದೊಡ್ಡದು ಮಾಡಲಾಯಿತು. ಬದೌನ್ ಪ್ರಕರಣ ಸಂಬಂಧ ದೊಡ್ಡ ಅಧಿಕಾರಿಗಳೇ ಸ್ಥಳಕ್ಕೆ ಭೇಟಿ ನೀಡಿದರು. ಪ್ರಕರಣದ ವಿಚಾರಣೆಯನ್ನು ಸಿಬಿಐ ತನಿಖೆ ವಹಿಸಲಾಯಿತು. ಆದರೆ, ಸಿಬಿಐ ಕೊನೆಯಲ್ಲಿ ಏನು ಹೇಳಿತು. ಹುಡುಗಿಯರ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂದು ಹೇಳಿತು. ಎಂದು ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದ್ದಾರೆ.

ಅತ್ಯಾಚಾರಿಗಳ ಕುರಿತಂತೆ ಮುಲಾಯಂ ಸಿಂಗ್ ಅವರ ವಾದ ಇದು ಮೊದಲೇನಲ್ಲ. ಈ ಹಿಂದೆಯೂ ಮುಲಾಯಂ ಸಿಂಗ್ ಅವರು ಇಂಥಹುದ್ದೇ ಹೇಳಿಕೆಯನ್ನು ನೀಡಿ ವಿವಾದದಲ್ಲಿ ಸಿಲುಕಿದ್ದರು. ಸಾಮೂಹಿಕ ಅತ್ಯಾಚಾರ ಪ್ರಕರಣವೊಂದರಲ್ಲಿ ಅತ್ಯಾಚಾರಿಗಳಿಗೆ ನ್ಯಾಯಾಲಯ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಮುಲಾಯಂ ವಿರೋಧಿಸಿದ್ದರು. ಅಲ್ಲದೇ, ಹುಡುಗರು ಯಾವತ್ತಿದ್ದರೂ ಹುಡುಗರೇ. ತಪ್ಪು ಮಾಡೇ ಮಾಡುತ್ತಾರೆ.

ಹುಡುಗ ಮತ್ತು ಹುಡುಗಿಯರು ಪ್ರೀತಿ ಮಾಡುವುದು ಸಹಜ. ಭಿನ್ನಾಭಿಪ್ರಾಯಗಳು ಮೂಡಿದಾಗ ಬಿಟ್ಟು ಹೋಗುವುದು ಸಹಜ. ಕೆಲವು ಹೆಣ್ಣು ಮಕ್ಕಳು ಹುಡುಗರ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸುತ್ತಾರೆ. ಇದು ಸರಿಯೇ? ಹುಡುಗಿಯರು ದೂರು ನೀಡಿದ ಮಾತ್ರಕ್ಕೆ ಹುಡಗರಿಗೆ ಗಲ್ಲು ಶಿಕ್ಷೆ ವಿಧಿಸುವುದು ಸರಿಯೇ ಎಂದು ಪ್ರಶ್ನಿಸಿದ್ದರು. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತಿರುವ ಕಾಯ್ದೆಯು ಸರಿಯಿಲ್ಲ. ಈ ಕುರಿತಂತೆ ಬದಲಾವಣೆ ಮಾಡುವ ಅಗತ್ಯವಿದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com