ನಿರ್ಭಯ ಆರೋಪಿಗೆ ಜೈಲಲ್ಲಿ ಹಲ್ಲೆ

ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ವಿನಯ ಶರ್ಮಾಗೆ ಥಳಿಸಲಾಗಿದೆ. ಪ್ರಕರಣದ ಇತರ...
ವಿನಯ ಶರ್ಮಾ
ವಿನಯ ಶರ್ಮಾ
Updated on

ನವದೆಹಲಿ: ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ವಿನಯ ಶರ್ಮಾಗೆ ಥಳಿಸಲಾಗಿದೆ. ಪ್ರಕರಣದ ಇತರ ಆರೋಪಿಗಳ ಜತೆಗೆ ದೆಹಲಿಯ ತಿಹಾರ್ ಜೈಲಲ್ಲಿದ್ದಾನೆ. ಜೈಲಿನ ಇತರ ಕೈದಿಗಳು ಆತನಿಗೆ ಥಳಿಸಿದ್ದಾರೆ ಎಂದು ದೆಹಲಿಯ ಸ್ಥಳೀಯ ಕೋರ್ಟ್ ಗೆ ಮಾಹಿತಿ ನೀಡಲಾಗಿದೆ. ಥಳಿತದಿಂದಾಗಿ ಎಡದ ಕೈ ಮುರಿದಿದೆ ಎಂದು ಆತನ ಪರ ನ್ಯಾಯವಾದಿ ಕೋರ್ಟ್‍ಗೆ ಮನವಿ ಮಾಡಿದ್ದಾರೆ. ಹೀಗಾಗಿ, ತನ್ನ ಕಕ್ಷಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಕೋರ್ಟ್ ಗೆ ಅರಿಕೆ ಮಾಡಲಾಗಿದೆ. ಗಮನಾರ್ಹ ಅಂಶವೆಂದರೆ ಆತನನ್ನು ಬಿಗಿ ಭದ್ರತೆಯ ಸೆಲ್‍ನಲ್ಲಿ ಇರಿಸಿದ್ದರ ಹೊರತಾಗಿಯೂ ಆತನ ಮೇಲೆ ಹಲ್ಲೆ ನಡೆಸಲಾಗಿದೆ. 2012ರ ದೆಹಲಿಯಲ್ಲಿ ನಡೆದ ವಿದ್ಯಾರ್ಥಿನಿಯಅತ್ಯಾಚಾರ ಪ್ರಕರದಲ್ಲಿ ಆತನನ್ನು ಬಂಧಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com