

ಮಹೋಬಾ: ಅತ್ಯಾಚಾರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಮಾಜವಾಗಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ನ್ಯಾಯಾಲಯ ಸೆಪ್ಟಂಬರ್ 16 ರಂದು ಹಾಜರಾಗಬೇಕೆಂದು ನೊಟೀಸ್ ನೀಡಿದೆ.
ಮಹಿಳೆ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಹೇಳಿಕ ನೀಡಿದ್ದ ಮುಲಾಯಂ ಸಿಂಗ್ ಯಾದವ್ ಏಕ ಕಾಲದಲ್ಲಿ ನಾಲ್ವರು ಒಟ್ಟಿಗೆ ಅತ್ಯಾಚಾರ ನಡೆಸಲು ಹೇಗೆ ಸಾಧ್ಯ, ಒಬ್ಬ ಆರೋಪಿ ಅತ್ಯಾಚಾರ ನಡೆಸಿರುತ್ತಾನೆ. ಸಂತ್ರಸ್ತ ಮಹಿಳೆ ನಾಲ್ವರ ವಿರುದ್ದ ದೂರು ನೀಡಿರುತ್ತಾಳೆ ಎಂದು ಆಗಸ್ಟ್ 18 ರಂದು ಲಕ್ನೋದಲ್ಲಿ ಹೇಳಿಕೆ ನೀಡಿದ್ದರು.
ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಮಹಿಳೆ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಮುಲಾಯಂ ಸಿಂಗ್ ವಿರುದ್ಧ, ಐಪಿಸಿ ಸೆಕ್ಷನ್ 504, 505, 509 ಕಲಂಗಳ ಅನ್ವಯ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಸಮನ್ಸ್ ನೀಡಿದ್ದಾರೆ.