ಕುಸಿಯುತ್ತಿದೆ ಎನ್‍ಡಿಎ ವರ್ಚಸ್ಸು, ಪಿಎಂ ಸ್ಥಾನಕ್ಕೆ ಮೋದಿಯೇ ನಂ.1

ವಿವಾದಗಳ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ಈಗಲೂ ದೇಶದ ಅಚ್ಚುಮೆಚ್ಚಿನ ಪ್ರಧಾನಿಯಾಗಿಯೇ ಉಳಿದಿದ್ದಾರೆ. ಆದರೆ, ಅವರ ನೇತೃತ್ವದ ಎನ್‍ಡಿಎ ಸರ್ಕಾರದ ಮೇಲಿನ ಪ್ರೀತಿ ಮಾತ್ರ ಜನಮಾನಸದಲ್ಲಿ ನಿಧಾನವಾಗಿ ಕಡಿಮೆಯಾಗುತ್ತಿದೆ...
ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ನವದೆಹಲಿ: ವಿವಾದಗಳ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ಈಗಲೂ ದೇಶದ ಅಚ್ಚುಮೆಚ್ಚಿನ ಪ್ರಧಾನಿಯಾಗಿಯೇ ಉಳಿದಿದ್ದಾರೆ. ಆದರೆ, ಅವರ ನೇತೃತ್ವದ ಎನ್‍ಡಿಎ ಸರ್ಕಾರದ ಮೇಲಿನ ಪ್ರೀತಿ ಮಾತ್ರ ಜನಮಾನಸದಲ್ಲಿ ನಿಧಾನವಾಗಿ ಕಡಿಮೆಯಾಗುತ್ತಿದೆ.

ಮೋದಿ ಈಗಲೂ ದೇಶದ ಪಾಲಿಗೆ ನೆಚ್ಚಿನ ಪ್ರಧಾನಿ. ಅವರ ವರ್ಚಸ್ಸಿನಲ್ಲಿ ಹೇಳಿಕೊಳ್ಳುವಂಥ ವ್ಯತ್ಯಾಸವೇನೂ ಆಗಿಲ್ಲ. ಆದರೆ, ಹಿರಿಯ ಬಿಜೆಪಿ ನಾಯಕರನ್ನು ಸುತ್ತಿಕೊಂಡಿರುವ ವಿವಾದಗಳು, ಅರ್ಥವ್ಯವಸ್ಥೆಯಲ್ಲಿ ಕಾಣದ ನಿರೀಕ್ಷಿತ ಪ್ರಗತಿ ಹಾಗೂ ಭೂಸ್ವಾಧೀನ ಕಾಯ್ದೆ ಎನ್‍ಡಿಎ ಸರ್ಕಾರ ಜನಪ್ರಿಯತೆಯನ್ನು ಕುಂದುಂಟು ಮಾಡುತ್ತಿದೆ. ಇಂಡಿಯಾ ಟುಡೇ ಗ್ರೂಪ್- ಸಿಸೆರೊ ನಡೆಸಿದ ಮೂಡ್‍ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಈ ವಿಚಾರ ಬಹಿರಂಗವಾಗಿದೆ ಎಂದು ``ಮೈಲ್ ಟುಡೇ'' ಶುಕ್ರವಾರ ವರದಿ ಮಾಡಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡ ಬಹುತೇಕರು ಮೋದಿ ಸಾಧನೆ ಕುರಿತು ತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಏಪ್ರಿಲ್ ತಿಂಗಳಲ್ಲಿ ನಡೆಸಿದ ಸಮೀಕ್ಷೆಗೆ ಹೋಲಿಸಿದರೆ ಮೋದಿ ಸಾಧನೆ ಕುರಿತ ಮೆಚ್ಚುಗೆ ಶೇ.3ರಷ್ಟು ಕಡಿಮೆಯಾಗಿದೆಯಷ್ಟೆ. ಆದರೆ, ಎನ್‍ಡಿಎ ಸರ್ಕಾರದ ಜನಪ್ರಿಯತೆ ಮಾತ್ರ ಕುಸಿಯುತ್ತಿದೆ. ಒಂದು ವೇಳೆ ತಕ್ಷಣಕ್ಕೆ ಚುನಾವಣೆ ನಡೆದರೆ ಬಿಜೆಪಿಯ ಸ್ಥಾನ 243ಕ್ಕೆ ಕುಸಿಯಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 282 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಬರೆದಿತ್ತು. ಆದರೆ, ಏಪ್ರಿಲ್‍ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ ಬಲ 255ಕ್ಕೆ ಕುಸಿಯುವ ನಿರೀಕ್ಷೆ ಇತ್ತು. ಎನ್‍ಡಿಎ ಸ್ಥಾನ ಹಾಲಿ 355ರಿಂದ 288ಕ್ಕೆ ಕುಸಿಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com