ಮುಲಾಯಂ ಸಿಂಗ್ ಯಾದವ್ ಗೆ ರೇಪ್ ಮಾಡಿದ ಅನುಭವ ಇದೆಯಾ? ಗಿರಿರಾಜ್ ಸಿಂಗ್ ಪ್ರಶ್ನೆ

ಮುಲಾಯಂ ಸಿಂಗ್ ಅವರಿಗೆ ಅತ್ಯಾಚಾರ ಮಾಡಿದ ಅನುಭವವೆನಾದರು ಇದೆಯಾ? ಎಂದು ಗಿರಿರಾಜ್ ಸಿಂಗ್ ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವ ಗಿರಿರಾಜ್ ಸಿಂಗ್
ಕೇಂದ್ರ ಸಚಿವ ಗಿರಿರಾಜ್ ಸಿಂಗ್
Updated on: 

ನವದೆಹಲಿ: ವಿವಾದಾತ್ಮಕ ಹೇಳಿಕೆಗಳಿಂದಲೇ ಗುರುತಿಸಿಕೊಂಡಿರುವ ಬಿಜೆಪಿ ನಾಯಕ, ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಗ್ಯಾಂಗ್ ರೇಪ್ ಬಗ್ಗೆ ಹೇಳಿಕೆ ನೀಡಿದ್ದ ಮುಲಾಯಂ ಸಿಂಗ್ ಯಾದವ್ ಅವರನ್ನು ವ್ಯಂಗ್ಯಧಾಟಿಯಲ್ಲಿ ಪ್ರಶ್ನಿಸಿದ್ದಾರೆ.  

ತಮ್ಮ ಲೋಕಸಭಾ ಕ್ಷೇತ್ರ ನವಾಡಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ, ಗಿರಿರಾಜ್ ಸಿಂಗ್, ನಾಲ್ಕು ಮಂದಿ ಒಬ್ಬ ಮಹಿಳೆಯನ್ನು ಗ್ಯಾಂಗ್ ರೇಪ್ ಮಾಡುವುದು ಸಾಧ್ಯವಿಲ್ಲ ಎಂದು ಮುಲಾಯಂ ಸಿಂಗ್ ಯಾದವ್ ಹೇಳಿದ್ದರು, ಅವರು ಹಿರಿಯ ವ್ಯಕ್ತಿ ಆದರೂ ಕೇಳುತ್ತೇನೆ,  ಅವರಿಗೆ ಅತ್ಯಾಚಾರ ಮಾಡಿದ ಅನುಭವವೆನಾದರು ಇದೆಯಾ? ಎಂದು ಗಿರಿರಾಜ್ ಸಿಂಗ್ ಪ್ರಶ್ನಿಸಿದ್ದಾರೆ.
ಒಬ್ಬ ವ್ಯಕ್ತಿ ಅತ್ಯಾಚಾರ ನಡೆಸಿದರೂ, ನಾಲ್ಕು ಜನರ ಮೇಲೆ ಎಫ್.ಐ.ಆರ್ ದಾಖಲಿಸುತ್ತಾರೆ. ಆದರೆ ನಾಲ್ಕು ಜನರಿಂದ(ಗ್ಯಾಂಗ್ ರೇಪ್) ಅತ್ಯಾಚಾರ ನಡೆಯಲು ಸಾಧ್ಯವಿಲ್ಲ ಎಂದು ಮುಲಾಯಂ ಸಿಂಗ್ ಯಾದವ್ ವಿವಾದಾತ್ಕಾಮ ಹೇಳಿಕೆ ನೀಡಿದ್ದರು. ಗ್ಯಾಂಗ್ ರೇಪ್ ನಡೆಯಲು ಸಾಧ್ಯವೇ ಇಲ್ಲ ಎಂದು ಮುಲಾಯಂ ಸಿಂಗ್ ಯಾದವ್ ಹೇಳಿರುವುದರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com