ಯುಪಿಎಸ್‍ಸಿ ಪರೀಕ್ಷೆಗೆ 4.65 ಲಕ್ಷ ಮಂದಿ

ದೇಶಾದ್ಯಂತ ಭಾನುವಾರ ಯುಪಿಎಸ್ಸಿ ಪ್ರಿಲಿಮಿನರಿ ಪರೀಕ್ಷೆ ನಡೆದಿದೆ. ಸುಮಾರು 4.65 ಲಕ್ಷ ಮಂದಿ ಅಭ್ಯರ್ಥಿಗಳು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶಾದ್ಯಂತ ಭಾನುವಾರ ಯುಪಿಎಸ್ಸಿ ಪ್ರಿಲಿಮಿನರಿ ಪರೀಕ್ಷೆ ನಡೆದಿದೆ. ಸುಮಾರು 4.65 ಲಕ್ಷ ಮಂದಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಎಲ್ಲೂ ಕೂಡ ಯಾವುದೇ ಅಹಿತಕರ ಘಟನೆ ನಡೆದ ವರದಿಯಾಗಿಲ್ಲ ಎಂದು ಯುಪಿಎಸ್ಸಿ ಕಾರ್ಯದರ್ಶಿ ಆಶೀಮï ಖುರಾನ ಹೇಳಿದ್ದಾರೆ.

ಕಳೆದ ವರ್ಷ 4,51,602 ಮಂದಿ ಪರೀಕ್ಷೆ ಬರೆದಿದ್ದರು. ಈ ವರ್ಷ 4,65,882 ಮಂದಿ ಆಕಾಂಕ್ಷಿಗಳು ಪರೀಕ್ಷೆ ಎದುರಿಸಿದ್ದಾರೆ. ಅಂದರೆ 14,280 ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ವಿಚಿತ್ರವೆಂದರೆ, ಪರೀಕ್ಷೆ ತೆಗೆದುಕೊಂಡವರ ಸಂಖ್ಯೆ 9,45,908. ಇದರಲ್ಲಿ ಇ ಅಡ್ಮಿಟ್ ಕಾರ್ಡ್ ಡೌನ್‍ಲೋಡ್ ಮಾಡಿ ಕೊಂಡವರು 6,81,549 ಮಂದಿ. ಇದರಲ್ಲಿ 4.65 ಲಕ್ಷ ಮಂದಿ ಪರೀಕ್ಷೆ ಎದುರಿಸಿದ್ದಾರೆ ಎಂದು ಖುರಾನ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com