ಬಿಸಿ ಚರ್ಚೆಗೆ ಕಾರಣವಾದ 2011ರ ಜನಗಣತಿಯ ಧಾರ್ಮಿಕ ಲೆಕ್ಕಾಚಾರ

ನಾಲ್ಕು ವರ್ಷಗಳ ಹಿಂದೆ ನಡೆಸಲಾಗಿದ್ದ ಹದಿನೈದನೇ ಜನಗಣತಿಯಲ್ಲಿದ್ದ ಧಾರ್ಮಿಕ ಅಂಕಿಅಂಶಗಳನ್ನು ಈಗ ಜನಗಣತಿ ಆಯೋಗ ಬಿಡುಗಡೆ ಮಾಡಿದ್ದು...
ಜನಗಣತಿ
ಜನಗಣತಿ

ನಾಲ್ಕು ವರ್ಷಗಳ ಹಿಂದೆ ನಡೆಸಲಾಗಿದ್ದ ಹದಿನೈದನೇ ಜನಗಣತಿಯಲ್ಲಿದ್ದ ಧಾರ್ಮಿಕ ಅಂಕಿಅಂಶಗಳನ್ನು ಈಗ ಜನಗಣತಿ ಆಯೋಗ ಬಿಡುಗಡೆ ಮಾಡಿದ್ದು, ದೇಶದೆಲ್ಲೆಡೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. 121.09 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಬಹುಸಂಖ್ಯಾತರಾದ ಹಿಂದೂಗಳು ಶೇ. 79.8ರಷ್ಟಿದ್ದು, ಮುಸ್ಲಿಮರು ಎರಡನೇ ಅತಿ ದೊಡ್ಡ ಸಂಖ್ಯೆಯಲ್ಲಿದ್ದು, 17.2 ಕೋಟಿ ಜನರಿದ್ದಾರೆ.

ಹಿಂದಿನ ಗಣತಿಗಿಂತ ಈ ಬಾರಿ ಮುಸ್ಲಿಮರ ಜನಸಂಖ್ಯೆಯಲ್ಲಿ ಶೇ. 24.6ರಷ್ಟು ಪ್ರಗತಿ ಕಂಡಿರುವುದಾಗಿ ಈ ಅಂಕಿ ಅಂಶಗಳು ಹೇಳುತ್ತವೆ. ಮೇಲ್ನೋಟಕ್ಕೆ ಮುಸ್ಲಿಮರ ಸಂಖ್ಯೆಯಲ್ಲಿ ಹೆಚ್ಚಳದಂತೆ ಕಂಡರೂ ಕಳೆದ ಕೆಲವು ದಶಕಗಳ ಬೆಳವಣಿಗೆಯ ದರವನ್ನು ಗಮನಿಸಿದರೆ, ಏರಿಕೆಯ ದರದಲ್ಲಿ ಕುಸಿತವಾಗಿದೆ. ಹಿಂದೂ ಜನಸಂಖ್ಯೆ ಬೆಳವಣಿಗೆ ದರ ಶೇ. 16.8ರಷ್ಟಿದೆ. ಈ ಬೆಳವಣಿಗೆಯ ದರ 1981-1991ರ ಗಣತಿಗೆ ಹತ್ತಿರವಾಗಿದ್ದು, 1991-2001ರ ಗಣತಿಯ ಸುಮಾರು ಅರ್ಧದಷ್ಟಿವೆ. ಉದಾಹರಣೆಗೆ 1991-2001ರ ಗಣತಿಯಲ್ಲಿ `ಶೇ. 23ರಷ್ಟು ಪ್ರಗತಿ ಕಂಡಿದ್ದ ಹಿಂದೂ ಧರ್ಮ 2001-2011ರ ಗಣತಿಯಲ್ಲಿ ಶೇ. 16.8ರಷ್ಟು ಕಂಡಿದೆ. ಮುಸ್ಲಿಮ್ ಧರ್ಮೀಯರ ಸಂಖ್ಯೆ 1991-2001ರ ಗಣತಿಯಲ್ಲಿ ದಾಖಲಾ ದಂತೆ ಶೇ. 45ರಷ್ಟು ಹೆಚ್ಚಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಅದು ಶೇ. 24.6ಕ್ಕೆ ಕುಸಿದಿದೆ. ಕ್ರೈಸ್ತ ಧರ್ಮೀಯರ ಸಂಖ್ಯೆಯಲ್ಲೂ ಇಂಥ ವ್ಯತ್ಯಾಸ ಕಂಡು ಬರುತ್ತದೆ.  1991ರ ಗಣತಿಯಲ್ಲಿ ಶೇ. 25ರಷ್ಟು ಹೆಚ್ಚಳ ಕಂಡಿದ್ದ ಈ ಧರ್ಮ, ಪ್ರಸ್ತುತ ಗಣತಿಯಲ್ಲಿ ಶೇ. 15.5ರಷ್ಟು ಹೆಚ್ಚಳ ಕಂಡಿದೆ.
ಈ ಇಳಿಕೆ ಮತ್ತು ಅದರ ಹಿಂದಿನ ಕಾರಣಗಳು ಕುರಿತು ಚರ್ಚೆಗಳು ಆರಂಭವಾಗಿವೆ. ಆದರೆ ವರದಿ ಹೊರಬಿದ್ದ ಕೂಡಲೇ ಮುಸ್ಲಿಮರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂಬ ಚರ್ಚೆಗಳು ಆರಂಭವಾಗಿದ್ದವು. ಇದುವರೆಗಿನ ಗಣತಿ ಅಂಕಿ ಅಂಶಗಳ ಪೈಕಿ 2001-2011ರ ಗಣತಿಯಲ್ಲಿ ಕಾಣಿಸುವ ಪ್ರಗತಿಯ ದರ ಹಿಂದೆಂದಿಗಿಂತಲೂ ಕಡಿಮೆ ಎಂದು ಸೂಚಿಸುತ್ತದೆ. ಅಲ್ಪಸಂಖ್ಯಾತ ಸಮುದಾಯಗಳೆಂದು ಗುರುತಿಸಲಾಗುವ ಕ್ರೈಸ್ತ, ಸಿಖ್, ಬೌದ್ಧ ಮತ್ತು ಜೈನ ಧರ್ಮೀಯರ ಸಂಖ್ಯೆ ಶೇ. 5.1ರಷ್ಟಿದೆ. ಉಳಿದಂತೆ ಬೇರೆ ಧಾರ್ಮಿಕ ಪದ್ಧತಿಯನ್ನು ಅನುಸರಿಸುವವರೂ (79,37,734) ಮತ್ತು ಯಾವುದೇ ಧರ್ಮ  ದೊಂದಿಗೆ  ಗುರುತಿಸಿದವರೂ (28,67,303)ಇದ್ದಾರೆ. ಅಲ್ಪಸಂಖ್ಯಾತ ಧರ್ಮವಾದ ಕ್ರೈಸ್ತ ಧರ್ಮದಲ್ಲೂ ಕುಸಿತವಾಗಿದೆ. ಐದು ದಶಕಗಳ ಹಿಂದೆ ಶೇ. 2.44ರಷ್ಟಿದ್ದ, 70ರ ದಶಕದಲ್ಲಿ 2.60ಗೆ ತಲುಪಿ2011ರ ಗಣತಿಯಲ್ಲಿ 2.3ಕ್ಕೆ ಕುಸಿದಿರುವುದು ಕಂಡು  ಬಂದಿದೆ.
ಕರ್ನಾಟಕದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚು: ರಾಷ್ಟ್ರಮಟ್ಟದ ಅಂಕಿ-ಸಂಖ್ಯೆಗಳನ್ನು ಹೋಲಿಸಿದಾಗ ಕರ್ನಾಟಕದಲ್ಲಿ ಹಿಂದೂಗಳ ಸಂಖ್ಯೆಯಲ್ಲಿ ಏರಿಕೆ ಪ್ರಮಾಣ ಕೊಂಚ ಹೆಚ್ಚಿರುವುದು ತಿಳಿಯುತ್ತದೆ. ಕಳೆದ ಜನಗಣತಿಯಲ್ಲಿ ಶೇ. 83.9ರಷ್ಟಿದ್ದ ಹಿಂದೂಗಳ ಸಂಖ್ಯೆ ಈ ಬಾರಿ 84ರಷ್ಟು ದಾಖಲಾಗಿದೆ. ಅಲ್ಲದೆ ರಾಜ್ಯದಲ್ಲಿ ಎಲ್ಲ ಧರ್ಮೀಯರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದನ್ನು ಈ ಗಣತಿಯ ಅಂಕಿ ಅಂಶಗಳು ತಿಳಿಸುತ್ತವೆ. 
ಈಗೇಕೆ ಬಿಡುಗಡೆ ಮಾಡಿದರು?:
ಗೃಹಸಚಿವಾಲಯ ಒಂದು ಪ್ರಕಟಣೆ ಹೊರಡಿಸುವವರೆಗೂ ಗಣತಿಯ ಅಂಕಿ-ಅಂಶಗಳನ್ನು ಹೊರ ಬಿದ್ದ ಅ„ಕೃತವಾದ ಹೇಳಿಕೆ ಬಂದಿರಲಿಲ್ಲ. ಇದ್ದಕ್ಕಿದ್ದಂತೆ ಪ್ರಕಟವಾದ ಈ ಗಣತಿಯ ಧಾರ್ಮಿಕ ಅನುಸರಿಸುವ ಅಂಕಿಗಳು ಹೊರಬಿದ್ದಿದ್ದು ಅನುಮಾನಗಳಿಗೆ ಕಾರಣವಾಗಿದೆ. ಬಿಹಾರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಇದರ ಬೆನ್ನಲ್ಲೇ ಪಶ್ಚಿಮ ಬಂಗಾಳ ಮತ್ತು ಅಸ್ಸಾಮ್ನಲ್ಲೂ ವಿಧಾನಸಭಾ ಚುನಾವಣೆ ನಡೆಯಲಿವೆ. ಈ ಮೂರೂ ರಾಜ್ಯಗಳಲ್ಲಿ ಮುಸ್ಲಿಮ್ ಮತದಾರರು ನಿರ್ಣಾಯಕ ಪಾತ್ರ ನಿರ್ವಹಿಸಲಿದ್ದಾರೆ. ಬಿಹಾರದಲ್ಲಿ ಕಳೆದ ಗಣತಿಗಿಂತ ಶೇ. 27.95ರಷ್ಟು ಮುಸ್ಲಿಮರ ಸಂಖ್ಯೆ ಹೆಚ್ಚಿದೆ. ಅಸ್ಸಾಮ್ನಲ್ಲಿ ಮುಸ್ಲಿಮರ ಸಂಖ್ಯೆ ಶೇ. 34.22ಕ್ಕೆ ತಲುಪಿದೆ. ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಗಣತಿಯ ಧಾರ್ಮಿಕ ಲೆಕ್ಕಾಚಾರವನ್ನು ಬಿಡುಗಡೆ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.
ಆರ್ಥಿಕ ಪ್ರಗತಿ, ಶೈಕ್ಷಣಿಕ ಪ್ರಗತಿ, ಆರೋಗ್ಯ ಸೇವೆಯ ಲಭ್ಯತೆ ಮುಂತಾದ ಅಂಶಗಳ ಹಿನ್ನೆಲೆಯಲ್ಲಿ ಯಾವುದೇ ಪ್ರಗತಿಯನ್ನು ಲೆಕ್ಕ ಹಾಕಲಾಗುತ್ತದೆ. ಆದರೆ ಇಂಥ ಯಾವುದೇ ಹಿನ್ನೆಲೆಯಿಲ್ಲದೆ ಗಣತಿ ಮಾಹಿತಿಹೊರಹಾಕಿದ್ದು ಚರ್ಚೆಗೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com