ಚಲಿಸುತ್ತಿರುವ ರೈಲು ಹತ್ತಲು ಹೋಗಿ ಆಯತಪ್ಪಿ ಬಿದ್ದ, ರೈಲ್ವೇ ಪೊಲೀಸರ ಸಮಯ ಪ್ರಜ್ಞೆಯಿಂದ ಬದುಕುಳಿದ

ಚಲಿಸುತ್ತಿದ್ದ ರೈಲು ಹತ್ತಲು ಹೋದ ಹಿರಿಯ ಜೀವವೊಂದನ್ನು ರೈಲ್ವೆ ರಕ್ಷಣಾ ಪಡೆಯ ಪೇದೆ ತನ್ನ ಸಮಯ ಪ್ರಜ್ಞೆಯಿಂದ ಉಳಿಸಿದ್ದಾನೆ...
ಚಲಿಸುತ್ತಿರುವ ರೈಲು ಹತ್ತಲು ಹೋಗಿ ಅಪಾಯಕ್ಕೆ ಸಿಲುಕಿದ ರವೀಂದ್ರ ಪಾಂಡಾ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ಅಪಾಯಕ್ಕೆ ಸಿಲುಕಿದ ರವೀಂದ್ರ ಪಾಂಡಾ

ಮುಂಬೈ: ಚಲಿಸುತ್ತಿದ್ದ ರೈಲು ಹತ್ತಲು ಹೋದ ಹಿರಿಯ ಜೀವವೊಂದನ್ನು ರೈಲ್ವೆ ರಕ್ಷಣಾ ಪಡೆಯ ಪೇದೆ ತನ್ನ ಸಮಯ ಪ್ರಜ್ಞೆಯಿಂದ ಉಳಿಸಿದ್ದಾನೆ.

ಬಹುಶಃ ಚಂದ್ರಕಾಂತ್ ರುಪ್ಡೆ ಎಂಬ ಓರ್ವ ಪೇದೆ ಇಲ್ಲದೇ ಹೋಗಿದ್ದರೆ ನಿನ್ನೆ ರೈಲು ಅಪಘಾತಕ್ಕೆ ಮತ್ತೋಂದು ಬಲಿ ಸೇರ್ಪಡೆಯಾಗುತ್ತಿತ್ತು. ಆದರೆ ಪೊಲೀಸ್ ಪೇದೆಯ ಸಮಯ  ಪ್ರಜ್ಞೆಯಿಂದಾಗಿ ಒಂದು ಹಿರಿಯ ಜೀವ ಉಳಿದುಕೊಂಡಿದೆ. ಚಲಿಸುತ್ತಿದ್ದ ರೈಲು ಹತ್ತಲು ಹೋದ ಹಿರಿಯ ಜೀವವೊಂದು ಆಯತಪ್ಪಿ ರೈಲಿನ ಕೆಳಗೆ ಬಿದ್ದಿತ್ತು. ಆದರೆ ಅಲ್ಲಿಯೇ ಗಸ್ತು ತಿರುಗತ್ತಿದ್ದ  ರೈಲ್ವೇ ಪೊಲೀಸ್ ಪೇದೆಗಳ ಸಮಯ ಪ್ರಜ್ಞೆಯಿಂದ ಆ ಜೀವ ಉಳಿದುಕೊಂಡಿದೆ.

ರೈಲ್ವೇ ಪೊಲೀಸ್ ಪೇದೆಗಳಾದ ಚಂದ್ರಕಾಂತ್, ಅನಿತಾ ಯಾದವ್ ಮತ್ತು ಪ್ರಾಚಿ ಘುರಮ್



ಈ ಘಟನೆ ನಡೆದಿದ್ದ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ರೈಲ್ವೇ ನಿಲ್ದಾಣದಲ್ಲಿ. ನಿನ್ನೆ ಮಧ್ಯಾಹ್ನ ಸುಮಾರು 2 ಗಂಟೆಯ ಸಮಯದಲ್ಲಿ ರವೀಂದ್ರ ಪಾಂಡಾ ಎಂಬ ಹಿರಿಯ  ನಾಗರಿಕರೊಬ್ಬರು ರೈಲು ಸಂಖ್ಯೆ 16339ರಲ್ಲಿ ಪ್ರಯಾಣಿಸಬೇಕಿತ್ತು. ರೈಲಿಗೆ ಇಂಜಿನ್ ಅಳವಡಿಸುವ ನಿಟ್ಟಿನಲ್ಲಿ ರೈಲು ಹೊರಡುವ ಸಮಯವನ್ನು ನಾಲ್ಕು ನಿಮಿಷಗಳ ಮುಂದಕ್ಕೆ ಹಾಕಲಾಗಿತ್ತು.  ಆಗ ರೈಲಿನಿಂದ ಕೆಳಗಿಳಿದ ರವೀಂದ್ರ ಪಾಂಡಾ ಅವರು, ಅಲ್ಲಿಯೇ ಫ್ಲಾಟ್ ಫಾರ್ಮ್ ನಂ. 1ರಲ್ಲಿ ತಿಂಡಿ ಮಾರುತ್ತಿದ್ದ ವ್ಯಾಪಾರಿಯ ಬಳಿ ಹೋಗಿ ಏನನ್ನೋ ತೆಗೆದುಕೊಂಡರು. ಈ ವೇಳೆ ರೈಲು  ಸಂಚರಿಸಲ ಆರಂಭಿಸಿದ್ದು, ರವೀಂದ್ರ ಪಾಂಡಾ ಅವರು ಚಲಿಸುತ್ತಿದ್ದ ರೈಲನ್ನು ಹತ್ತಲು ಮುಂದಾದರು. ಆದರೆ ನೋಡನೋಡುತ್ತಿದ್ದಂತೆಯೇ ರವೀಂದ್ರ ಪಾಂಡಾ ಅವರು ಆಯತಪ್ಪಿದ್ದು, ತೀರ  ರೈಲಿನ ಕೆಳಗೆ ಸಿಲುಕಿಕೊಂಡರು. ಆದರೆ ರೈಲಿನ ಬಾಗಿಲನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಪಾಂಡಾ ಅವರು ರೈಲಿನ ಕೆಳಗೆ ಹೋಗಲಿಲ್ಲ.

ರೈಲು ಒಂದಷ್ಟು ದೂರ ಹೋಗುತ್ತಿದ್ದಂತೆಯೇ ಅಲ್ಲಿಯೇ ಗಸ್ತು ತಿರುಗುತ್ತಿದ್ದ ಆರ್ ಪಿಎಫ್ ನ ಆ್ಯಂಟಿ ರಾಬರಿ ಸ್ಕ್ಯಾಡ್ ನ ಪೇದೆ ಚಂದ್ರಕಾಂತ್ ರುಪ್ಡೆ ಮತ್ತು ಇಬ್ಬರು ಮಹಿಳಾ ಪೇದೆಗಳು ಇದನ್ನು  ಗಮನಿಸಿ ಕೂಡಲೇ ಅಪಾಯಕ್ಕೆ ಸಿಲುಕಿದ್ದ ರವೀಂದ್ರ ಅವರನ್ನು ಹೊರಗೆ ಎಳೆದಿದ್ದಾರೆ. ಪೇದೆ ಚಂದ್ರಕಾಂತ್ ರುಪ್ಡೆ ಅವರ ಸಮಯ ಪ್ರಜ್ಞೆಯಿಂದಾಗಿ ಇಂದು ಹಿರಿಯ ಜೀವವೊಂದು  ಬದುಕುಳಿದಿದೆ. ಇವಿಷ್ಟೂ ದೃಶ್ಯಾವಳಿಗಳು ನಿಲ್ದಾಣದಗಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com