
ನವದೆಹಲಿ: ಸೈಬರ್ ಸ್ಪೇಸ್ ನಲ್ಲಿ ಭಾರತ ಸರ್ಕಾರದ ಮೇಲೆ ಗೂಢಚಾರಿಕೆ ನಡೆಸಲು ಅಮೆರಿಕ ತನ್ನ ಅಂಗ ಸಂಸ್ಥೆಗಳಿಗೆ ಅಧಿಕಾರ ನೀಡಿರುವ ಬಗ್ಗೆ ಭಾರತ ಆತಂಕ ವ್ಯಕ್ತಪಡಿಸಿದೆ.
ಭಾರತ ಸರ್ಕಾರ ಸೈಬರ್ ದಾಳಿಗೆ ಪ್ರತಿರೋಧವೊಡ್ಡುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದು ವಿದೇಶಾಂಗ ಇಲಾಖೆ ರಾಜ್ಯ ಸಚಿವ ವಿಕೆ ಸಿಂಗ್ ರಾಜ್ಯಸಭೆಗೆ ತಿಳಿಸಿದ್ದಾರೆ. ಸೈಬರ್ ಸ್ಪೇಸ್ ನಲ್ಲಿ ಭಾರತ ಸರ್ಕಾರದ, ಭಾರತೀಯರ, ಭಾರತದ ಅಂಗಸಂಸ್ಥೆಗಳ ಸಂಪರ್ಕ ವ್ಯವಸ್ಥೆಯ ಮೇಲೆ ಗೂಢಚಾರಿಕೆ ನಡೆಸಲು ಅಮೆರಿಕ ತನ್ನ ಅಂಗ ಸಂಸ್ಥೆಗಳಿಗೆ ಅಧಿಕಾರ ನೀಡಿರುವ ಬಗ್ಗೆ ಅಮೆರಿಕ ಬಳಿ ಪ್ರಸ್ತಾಪಿಸಲಾಗಿದೆ.
ಗೂಢಚಾರಿಕೆ ನಡೆಸುವವರು ಗುರುತನ್ನು ಮರೆಮಾಚುವುದಕ್ಕಾಗಿ ಮಾಸ್ಕ್ ರೇಡಿಂಗ್ ತಂತ್ರ ಹಾಗೂ ಹಿಡನ್ ಸರ್ವರ್ ಗಳನ್ನು ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಸೈಬರ್ ದಾಳಿಗಳನ್ನು ಎದುರಿಸುವುದಕ್ಕಾಗಿ ಭಾರತ ಸರ್ಕಾರ ಯೋಜನೆಯೊಂದನ್ನು ರೂಪಿಸಿದ್ದು, ಇದನ್ನು ಕೇಂದ್ರ, ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗೂ ಅಳವಡಿಸಲಾಗುವುದು ಎಂದು ವಿಕೆ ಸಿಂಗ್ ಹೇಳಿದ್ದಾರೆ.
ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ, ಸೈಬರ್ ಅಪಾಯಗಳ ಬಗ್ಗೆ ನಿರಂತರವಾಗಿ ಎಚ್ಚರಿಕೆ ನೀಡುತ್ತಿರುತ್ತದೆ. ಸಿಇಆರ್ ಟಿ ಕಂಪ್ಯೂಟರ್ ವ್ಯವಸ್ಥೆ ನಿರ್ವಹಿಸುವವರಿಗೆ ನಿಯತವಾಗಿ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತದೆ ಎಂದು ವಿಕೆ ಸಿಂಗ್ ಮಾಹಿತಿ ನೀಡಿದ್ದಾರೆ.
Advertisement