ಒಂದು ಘಟನೆ ಹೇಳುತ್ತೇನೆ. ಒಂದು ದಿನ ನಾನು ಮಸೀದಿಯಿಂದ ಹೊರಗೆ ಬರುತ್ತಿದ್ದಾಗ ಒಬ್ಬ ವ್ಯಕ್ತಿ ಅಲ್ಲೇ ದಾರಿ ಮೂಲೆಯಲ್ಲಿ ಕುಳಿತಿದ್ದ. ಆತ ನನ್ನನ್ನು ನೋಡಿದ ಕೂಡಲೇ ನನ್ನನ್ನು ಅತ್ತ ಕರೆದ. ನೀನು ಹಿಂದೂ ಧರ್ಮದವನೇ? ಆತ ನನ್ನಲ್ಲಿ ಕೇಳಿದ. ನಾನು ಅಲ್ಲ ಅಂದೆ. ಆಮೇಲೆ ಆತ ನನ್ನೊಂದಿಗೆ ಬಾ ಎಂದ. ಹಾಗೆ ಅವನು ನನ್ನನ್ನು ಒಂದು ಪುಟ್ಟ ಕೊಠಡಿಗೆ ಕರೆದುಕೊಂಡು ಹೋದ. ಆಮೇಲೆ ಕೊಠಡಿ ಬಾಗಿಲು ಹಾಕಿ ಅವನು ಹೇಳಿದ..ನೋಡು...ನೀನೊಬ್ಬ ಹಿಂದೂ. ನೀವ್ಯಾಕೆ ಹೀಗೆ ಹೇಳ್ತಾ ಇದ್ದೀರಾ? ನಾನು ಅವರಲ್ಲಿ ಕೇಳಿದೆ. ನೋಡಿ ನಿಮ್ಮ ಕಿವಿ ಚುಚ್ಚುಲಾಗಿದೆ ಎಂದು ಅವ ಹೇಳಿದ. ನೋಡಪ್ಪಾ..ನಮ್ಮ ಊರಲ್ಲಿ ಒಂದು ಸಂಪ್ರದಾಯವಿದೆ. ಅಲ್ಲಿ ಎಲ್ಲರಿಗೂ ಕಿವಿ ಚುಚ್ಚಲಾಗುತ್ತದೆ. ನಾನು ಹುಟ್ಟುವಾಗ ಹಿಂದೂವಾಗಿ ಹುಟ್ಟಿದ್ದೆ. ಆಮೇಲೆ ಮತಾಂತರಗೊಂಡೆ ಎಂದು ಹೇಳಿದೆ. ಅದಕ್ಕೆ ಅವನು ನೀನು ಮತಾಂತರಗೊಳ್ಳಲೇ ಇಲ್ಲ ಎಂದು ಹೇಳಿದ. ಆಮೇಲೆ ಹೇಳಿದ, ನೋಡು ಕಿವಿ ಚುಚ್ಚಿದ್ದನ್ನು ಪ್ಲಾಸ್ಟಿಕ್ ಸರ್ಜರಿ ಮಾಡು. ಹೀಗೆ ಅಡ್ಡಾಡುವುದು ಸರಿಯಲ್ಲ.