16 ಒಪ್ಪಂದಗಳಿಗೆ ಭಾರತ-ರಷ್ಯಾ ಸಹಿ

ರಚನಾತ್ಮಕ ಸಹಭಾಗಿತ್ವದ ದೃಷ್ಟಿಯಿಂದ, ದ್ವಿಪಕ್ಷೀಯ ಸಂಬಂಧ ಸುಧಾರಣೆಯ ಭಾಗವಾಗಿ ಭಾರತ ಮತ್ತು ರಷ್ಯಾ...
16 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ ಭಾರತ-ರಷ್ಯಾ
16 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ ಭಾರತ-ರಷ್ಯಾ

ಮಾಸ್ಕೋ: ರಚನಾತ್ಮಕ ಸಹಭಾಗಿತ್ವದ ದೃಷ್ಟಿಯಿಂದ, ದ್ವಿಪಕ್ಷೀಯ ಸಂಬಂಧ ಸುಧಾರಣೆಯ ಭಾಗವಾಗಿ ಭಾರತ ಮತ್ತು ರಷ್ಯಾ 16 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದೆ. ಅವುಗಳಲ್ಲಿ ಮುಂದಿನ 20 ವರ್ಷಗಳಲ್ಲಿ ಭಾರತದಲ್ಲಿ 12 ಪರಮಾಣು ಸ್ಥಾವರಗಳ ಸ್ಥಾಪನೆ ಹಾಗೂ "ಮೇಕ್‌ ಇನ್‌ ಇಂಡಿಯಾ' ಕಾರ್ಯಕ್ರಮದಡಿ ಕಮೋವ್‌-226 ಎಂಬ ರಷ್ಯನ್‌ ಹೆಲಿಕಾಪ್ಟರ್‌ಗಳ ಉತ್ಪಾದನೆ ಸೇರಿದಂತೆ ಒಟ್ಟು 16 ಒಪ್ಪಂದಗಳಿಗೆ ಭಾರತ- ರಷ್ಯಾ ಸಹಿ ಹಾಕಿವೆ.

ಈ ಒಪ್ಪಂದ ಒಂದರ್ಥದಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸಲು ಭಾರತ ಪಾಕಿಸ್ತಾನಕ್ಕೆ ನೀಡಿರುವ ಮುನ್ನೆಚ್ಚರಿಕೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ. ವಿಶ್ವಸಂಸ್ಥೆಯ ಖಾಯಂ ಸದಸ್ಯ ಸ್ಥಾನಕ್ಕೆ ಭಾರತ ಇಟ್ಟಿರುವ ಬೇಡಿಕೆಗೆ ರಷ್ಯಾ ತನ್ನ ಬೆಂಬಲ ಸೂಚಿಸಿದೆ.  ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಮ್ಮುಖದಲ್ಲಿ ಒಪ್ಪಂದಗಳಿಗೆ ಸಹಿ ಬಿದ್ದಿವೆ.

ತಮಿಳುನಾಡಿನ ಕೂಡಂಕುಳಂನಲ್ಲಿ ರಷ್ಯಾ ಈಗಾಗಲೇ ಅಣುಸ್ಥಾವರ ನಿರ್ಮಿಸಿದೆ. ಅಲ್ಲೇ ಹೊಸದಾಗಿ ಇನ್ನೂ ಎರಡು ಸ್ಥಾವರ ಸ್ಥಾಪಿಸುವ ಜತೆಗೆ ಒಟ್ಟಾರೆ ಮುಂದಿನ 20 ವರ್ಷಗಳಲ್ಲಿ ಒಟ್ಟು 12 ಅಣು ಸ್ಥಾವರ ನಿರ್ಮಾಣಕ್ಕೆ ಎರಡೂ ದೇಶಗಳು ಒಪ್ಪಂದ ಮಾಡಿಕೊಂಡಿವೆ. ಮಿಕ್ಕಂತೆ ಸೌರ ವಿದ್ಯುತ್‌ ಘಟಕ, ರೈಲ್ವೆ ಕ್ಷೇತ್ರಕ್ಕೆ ಸಂಬಂಧಿಸಿದಂತೆಯೂ ಒಪ್ಪಂದ ಏರ್ಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com