ಸಮ ಬೆಸ ಸಂಖ್ಯೆ ವಾಹನ ನಿಯಮ ಉಲ್ಲಂಘಿಸಿದ ವ್ಯಕ್ತಿಗೆ ರು. 2000 ದಂಡ

ದೆಹಲಿಯಲ್ಲಿ ಸಮ ಬೆಸ ವಾಹನ ಚಾಲನೆಯ ನಿಯಮ ಹೊಸ ವರುಷದಿಂದ ಜಾರಿಗೆ ಬಂದಿದೆ. ಆದರೆ ಈ ಓರ್ವ ವ್ಯಕ್ತಿ ಈ ನಿಯಮವನ್ನು ಉಲ್ಲಂಘಿಸಿ ದಂಡ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ದೆಹಲಿಯಲ್ಲಿ ಸಮ ಬೆಸ ವಾಹನ ಚಾಲನೆಯ ನಿಯಮ ಹೊಸ ವರುಷದಿಂದ ಜಾರಿಗೆ ಬಂದಿದೆ. ಆದರೆ ಈ ಓರ್ವ ವ್ಯಕ್ತಿ ಈ ನಿಯಮವನ್ನು ಉಲ್ಲಂಘಿಸಿ ದಂಡ ಕಟ್ಟಿದ್ದಾರೆ. ಇಲ್ಲಿನ ಐಟಿಒ ಜಂಕ್ಷನ್ ನಲ್ಲಿ ಬೆಳಗ್ಗೆ 8.33ಕ್ಕೆ ಸಮ ಸಂಖ್ಯೆಯ ಕಾರು ಚಲಾಯಿಸಿದ ವ್ಯಕ್ತಿಗೆ ಪೊಲೀಸರು ರು. 2000 ದಂಡ ವಿಧಿಸಿದ್ದಾರೆ.
ಪಿಟಿಐ ಸುದ್ದಿಮೂಲಗಳ ಪ್ರಕಾರ ಆ ವ್ಯಕ್ತಿ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ಮಧ್ಯೆ ಇರುವ ಪರಿಚೌಕಿ ನಿವಾಸಿಯಾಗಿದ್ದಾರೆ. ಈತ ಬೆಳಗ್ಗೆ ಕಚೇರಿಗೆ ತೆರಳುತ್ತಿದ್ದು, ಸಮ ಸಂಖ್ಯೆಯ ಕಾರು ಚಲಾಯಿಸಿದ್ದಾನೆ.
ದೆಹಲಿಯಲ್ಲಿ ಸಮ ಸಂಖ್ಯೆಯ ಕಾರುಗಳನ್ನು ಸಮಸಂಖ್ಯೆಯ ದಿನದಂದೂ, ಬೆಸ ಸಂಖ್ಯೆಯ ಕಾರುಗಳನ್ನು ಬೆಸ ಸಂಖ್ಯೆಯ ದಿನವೇ ಚಲಾಯಿಸಬೇಕೆಂಬುದು ಸರ್ಕಾರದ ನಿಯಮ.ಈ ನಿಯಮ ಜನವರಿ 1 ರಿಂದ ಜಾರಿಗೆ ಬಂದಿದೆ. 
ನಿಯಮ ಉಲ್ಲಂಘಿಸಿದ ವ್ಯಕ್ತಿಯಲ್ಲಿ ನಿಮಗೆ ಈ ದಿನ ಸಮ ಸಂಖ್ಯೆಯ ಕಾರು ಚಲಾಯಿಸಬಾರದೆಂದು ಗೊತ್ತಿರಲಿಲ್ಲವೆ? ಎಂದು ಕೇಳಿದಾಗ ಆತ, ಗೊತ್ತಿದೆ. ಆದರೆ ನನ್ನ ಮನೆಯಿಂದ ಬೇರೆ ಸಾರಿಗೆ ವ್ಯವಸ್ಥೆ ಇಲ್ಲ ಎಂದು ಉತ್ತರಿಸಿ ದಂಡ ಕಟ್ಟಿದ್ದಾರೆ ಎಂದು ಹಿರಿಯ ಟ್ರಾಫಿಕ್ ಪೊಲೀಸರೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com