ಅಮೆರಿಕ ಪೊಲೀಸರಿಂದ ಗುಜರಾತ್ ವ್ಯಕ್ತಿ ಮೇಲೆ ಮಾರಾಣಾಂತಿಕ ಹಲ್ಲೆ

ಮನೆ ಮುಂದೆ ವಾಕಿಂಗ್ ಮಾಡುತ್ತಾ ಇದ್ದ ಭಾರತೀಯನಿಗೆ ಅಮೆರಿಕಾದ ಪೊಲೀಸರು ಸಾಯುವಂತೆ ಹೊಡೆದಿರುವ ಘಟನೆ ಬೆಳಕಿಗೆ ಬಂದಿದೆ...
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುರೇಶ್ ಬಾಯಿ ಪಟೇಲ್ (ಚಿತ್ರ ಕೃಪೆ: al.com)
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುರೇಶ್ ಬಾಯಿ ಪಟೇಲ್ (ಚಿತ್ರ ಕೃಪೆ: al.com)

ನ್ಯೂಯಾರ್ಕ್ : ಮನೆ ಮುಂದೆ ವಾಕಿಂಗ್ ಮಾಡುತ್ತಾ ಇದ್ದ ಭಾರತೀಯನಿಗೆ ಅಮೆರಿಕಾದ ಪೊಲೀಸರು ಸಾಯುವಂತೆ ಹೊಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಗುಜರಾತ್ ಮೂಲದ 57 ವರ್ಷದ ಸುರೇಶ್ ಬಾಯಿ ಪಟೇಲ್ ಎಂಬುವವರು ಮನೆ ಮುಂದೆ ವಾಕಿಂಗ್ ಮಾಡುತ್ತಾ ಇದ್ದರು. ಈ ವೇಳೆ ಅಲ್ಲಿಗೆ ಬಂದ ಪೊಲೀಸರು ಹಿಂದೆ ಮುಂದೆ ವಿಚಾರಿಸದೆಯೇ ಹಿಗ್ಗಾ ಮಗ್ಗಾ ಥಳಿಸಿದ್ದಾರೆ ಎಂದು ಮೂಲಗಳು ತಿಳಿಸಿದ್ದಾರೆ.

ಎರಡು ವಾರಗಳ ಹಿಂದಷ್ಟೇ ಗುಜರಾತಿನಿಂದ ಅಮೆರಿಕಾದಲ್ಲಿರುವ ತಮ್ಮ ಮಗನ ಮನೆಗೆ ಸುರೇಶ್ ತೆರಳಿದ್ದರು. ಅವರಿಗೆ ಇಂಗ್ಲೀಷ್ ಸರಿಯಾಗಿ ಬರುತ್ತಿರಲಿಲ್ಲ. ಪ್ರತಿ ದಿನ ಪಟೇಲ್ ತಮ್ಮ ಮಗನ ಮನೆ ಮುಂದೆ ವಾಕಿಂಗ್ ಮಾಡುತ್ತಿದ್ದರು. ಆದರೆ, ಅನುಮಾನಗೊಂಡ ಪಕ್ಕದ ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಸಿದೇ ಮನಬಂದಂತೆ ಥಳಿಸಿದ್ದಾರೆ.

ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಇಂಗ್ಲೀಷ್ ಸರಿಯಾಗಿ ಬರುವುದಿಲ್ಲ. ಇದೇ ಘಟನೆಗೆ ಕಾರಣ ಎಂದು ಮಗ ಹೇಳಿದ್ದಾನೆ. ತನಿಖೆ ನಂತರ ಹೊಡೆದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com