ಅಸ್ಸಾಂನಲ್ಲೂ ತೊಗಾಡಿಯಾಗೆ ನಿಷೇಧ

ವಿಶ್ವ ಹಿಂದು ಪರಿಷತ್‌ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಅವರಿಗೆ ಅಸ್ಸಾಂನಲ್ಲೂ ನಿಷೇಧ ಹೇರಲಾಗಿದೆ..
ವಿಎಚ್ ಪಿ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ (ಸಂಗ್ರಹ ಚಿತ್ರ)
ವಿಎಚ್ ಪಿ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ (ಸಂಗ್ರಹ ಚಿತ್ರ)

ಗುವಾಹತಿ: ವಿಶ್ವ ಹಿಂದು ಪರಿಷತ್‌ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಅವರಿಗೆ ಅಸ್ಸಾಂನಲ್ಲೂ ನಿಷೇಧ ಹೇರಲಾಗಿದೆ.

ಅಸ್ಸಾಂನಲ್ಲಿ ವಿಶ್ವ ಹಿಂದೂಪರಿಷತ್ ಹಮ್ಮಿಕೊಂಡಿದ್ದ ಮೂರು ರ್ಯಾಲಿಗಳಲ್ಲಿ ತೊಗಾಡಿಯಾ ಪಾಲ್ಗೊಳ್ಳಲು ಗುವಾಹತಿಗೆ ತೆರಳುವವರಿದ್ದರು. ಆದರೆ ಗುವಾಹತಿ ಪ್ರವೇಶಿಸದಂತೆ ಅಸ್ಸಾಂ ಸರ್ಕಾರ ನಿಷೇಧ ಹೇರಿದ್ದು, ಅಸ್ಸಾಂ ಸರ್ಕಾರದ ವಿರುದ್ಧ ವಿಎಚ್ ಪಿ ಕಿಡಿಕಾರಿದೆ.

ಇನ್ನು ತಮ್ಮ ಪ್ರವೇಶಕ್ಕೆ ನಿರ್ಬಂಧ ಹೇರಿರುವ ಅಸ್ಸಾಂ ಸರ್ಕಾರದ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ತೋಗಾಡಿಯಾ ಅವರು, ಅಸ್ಸಾಂ ಸರ್ಕಾರದ ನಿರ್ಧಾರ ರಜಾಪ್ರಭುತ್ವಕ್ಕೆ ಧಕ್ಕೆ ತರುವ ವಿಷಯವಾಗಿದೆ ಎಂದು ಗುಡುಗಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ವಿಎಚ್ ಪಿ ಹಮ್ಮಿಕೊಂಡಿದ್ದ ವಿರಾಟ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ತೋಗಾಡಿಯಾ ಪಾಲ್ಗೊಳ್ಳಬೇಕಿತ್ತು. ಆದರೆ ಪ್ರಚೋದನಕಾರಿ ಭಾಷಣ ಮಾಡುವ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ತೋಗಾಡಿಯಾ ಬೆಂಗಳೂರು ಪ್ರವೇಶಕ್ಕೆ ನಿರ್ಬಂಧ ಹೇರಿತ್ತು.

ಇದೀಗ ಅಸ್ಸಾಂ ಸರ್ಕಾರ ಕೂಡ ಇಂತಹುದೇ ಕ್ರಮ ಕೈಗೊಂಡಿದೆ. ತೊಗಾಡಿಯಾಗೆ ಅಸ್ಸಾಂ ನಿಷೇಧ ಹೇರುತ್ತಿರುವುದು ಇದು ಮೊದಲೇನಲ್ಲ. 2003ರಲ್ಲೂ ಅಸ್ಸಾಂ ಸರ್ಕಾರ ತೋಗಾಡಿಯಾ ಅವರಿಗೆ ನಿಷೇಧ ಹೇರಿತ್ತು. ಇದೀಗ ಮುಖ್ಯಮಂತ್ರಿ ತರುಣ್ ಗೊಗೋಯ್ ಮತ್ತೇ ಇದೇ ಕ್ರಮ ತೆಗೆದುಕೊಂಡಿದ್ದಾರೆ. ಈ ಕುರಿತಂತೆ ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ತರುಣ್ ಗೊಗೋಯ್ ಅವರು, ತೊಗಾಡಿಯಾ ಅಸ್ಸಾಂಗೆ ಬಂದು ಧರ್ಮದ ವಿಷ ಬೀಜ ಬಿತ್ತುವ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com