ಆಧುನಿಕ ಯುದ್ಧ ನೌಕೆಗೆ ಪ್ರಧಾನಿ ಮೋದಿ ಒಪ್ಪಿಗೆ

2012ರಿಂದಲೂ ಸಂಸತ್ತಿನ ಒಪ್ಪಿಗೆಗಾಗಿ ಕಾದಿದ್ದ `ಪ್ರಾಜೆಕ್ಟ್ 17ಎ'ಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಒಪ್ಪಿಗೆ ಸೂಚಿಸಿದೆ...
ಅತ್ಯಾಧುನಿಕ ಯುದ್ಧ ನೌಕೆ (ಸಂಗ್ರಹ ಚಿತ್ರ)
ಅತ್ಯಾಧುನಿಕ ಯುದ್ಧ ನೌಕೆ (ಸಂಗ್ರಹ ಚಿತ್ರ)

ನವದೆಹಲಿ: 2012ರಿಂದಲೂ ಸಂಸತ್ತಿನ ಒಪ್ಪಿಗೆಗಾಗಿ ಕಾದಿದ್ದ `ಪ್ರಾಜೆಕ್ಟ್ 17ಎ'ಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಈ ಹಿನ್ನೆಲೆಯಲ್ಲಿ ಅತ್ಯಾಧುನಿಕ 7 ಸಮರ ನೌಕೆ ನಿರ್ಮಾಣಕ್ಕೆ ರಹದಾರಿ ದೊರೆತಂತಾಗಿದೆ. ಯೋಜನೆಯಂತೆ ರು50 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೌಕೆಗಳು ದೇಶದ ನೌಕಾಪಡೆಯನ್ನು ಚೀನಾಗಿಂತಲೂ ಬಲಿಷ್ಠಗೊಳಿಸಲಿವೆ ಎಂದು ಮೂಲಗಳು ತಿಳಿಸಿವೆ. ಹೊಸ ನೌಕೆಗಳು ಮುಂಬೈ ಮತ್ತು ಕೊಲ್ಕತಾದಲ್ಲಿ ನಿರ್ಮಾಣಗೊಳ್ಳಲಿವೆ. ಇದರಿಂದ ರಕ್ಷಣಾ ಸಾಮಗ್ರಿಗಳ ಆಮದಿಗಾಗಿ ಅದರಲ್ಲೂ ಯುದ್ಧನೌಕೆಗಳಿಗಾಗಿ ವಿದೇಶದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಪರಿಣಾಮ, ಭಾರತ ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಮಾರುಕಟ್ಟೆಯಾಗಿ ರೂಪುಗೊಳ್ಳಲಿದೆ.

ಅರಬ್ಬೀ ಸಮುದ್ರದಲ್ಲಿ ಹೆಚ್ಚುತ್ತಿರುವ ಚೀನಾ ಸಬ್ ಮೆರಿನ್‍ಗಳ ಉಪಸ್ಥಿತಿ ಭಾರತಕ್ಕೆ ಕಳವಳ ಮೂಡಿಸಿದೆ. ಇದಕ್ಕಾಗಿಯೇ ಪ್ರಧಾನಿ ಮೋದಿ ಸೋಮವಾರವೇ ಸಚಿವ ಸಂಪುಟ ಸಮಿತಿ ಸಭೆ ಕರೆದಿದ್ದರು. ಏಳು ಅತ್ಯಾಧುನಿಕ ಯುದ್ಧ ನೌಕೆಗಳ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com