ಠೇವಣಿ ಇಡಿ, ತೆರಿಗೆ ತಪ್ಪಿಸಿ

ಸರ್ಕಾರ ಬ್ಯಾಂಕ್ ಗಳ ಠೇವಣಿಗೆ ಉತ್ತೇಜನ ಕ್ರಮ ಕೈಗೊಳ್ಳಲು ಮುಂದಾಗಿದೆ. 5 ವರ್ಷಗಳ ಲಾಕ್ ಇನ್ ಅವಧಿಯನ್ನು 3 ವರ್ಷಕ್ಕೆ ಇಳಿಸುವ ಬಗ್ಗೆ ಚಿಂತನೆ ನಡೆದಿದೆ...
ವಿತ್ತ ಸಚಿವ ಅರುಣ್ ಜೆಟ್ಲಿ
ವಿತ್ತ ಸಚಿವ ಅರುಣ್ ಜೆಟ್ಲಿ

ನವದೆಹಲಿ: ಸರ್ಕಾರ ಬ್ಯಾಂಕ್ ಗಳ ಠೇವಣಿಗೆ ಉತ್ತೇಜನ ಕ್ರಮ ಕೈಗೊಳ್ಳಲು ಮುಂದಾಗಿದೆ. 5 ವರ್ಷಗಳ ಲಾಕ್ ಇನ್ ಅವಧಿಯನ್ನು 3 ವರ್ಷಕ್ಕೆ ಇಳಿಸುವ ಬಗ್ಗೆ ಚಿಂತನೆ ನಡೆದಿದೆ.

ಈ ಅವಧಿಗೆ ತೆರಿಗೆ ವಿನಾಯತಿಯನ್ನು ಘೋಷಿಸಲು ಯೋಜನೆ ರೂಪಿಸಲಾಗುತ್ತಿದೆ. ಈ ಕುರಿತಂತೆ ಬಜೆಟ್ ನಲ್ಲಿ ವಿತ್ತ ಸಚಿವ ಅರುಣ್ ಜೆಟ್ಲಿ ಘೋಷಿಸುವ ಸಾಧ್ಯತೆ ಇದೆ. ಜನಸಾಮಾನ್ಯರ ಚಿನ್ನ, ಬೆಳ್ಳಿ ಮೊದಲಾದ ಕಮಾಡಿಟಿಗಳ ಮೇಲಿನ ಹೂಡಿಕೆ ತಗ್ಗಿಸಲು ಉದ್ದೇಶಿಸಲಾಗಿದೆ. ಬ್ಯಾಂಕ್ ನಲ್ಲಿ ಠೇವಣಿ ಇಟ್ಟ ಹಣವನ್ನು ಸರ್ಕಾರದ ಅಭಿವೃದ್ಧಿಗೆ ಬಳಸಿಕೊಳ್ಳಲು ಚಿಂತನೆ ನಡೆಸಿದೆ.

ಸಾಮಾನ್ಯವಾಗಿ ಮ್ಯುಚುಯಲ್ ಫಂಡ್ ಗಳಲ್ಲಿ ಲಾಕ್ಇನ್ ಅವಧಿ ಮೂರು ವರ್ಷ ಇರುತ್ತದೆ. ಆದರೆ ಅಲ್ಲಿ ಹಣದ ವೃದ್ಧಿ ಶೇರು ಮಾರುಕಟ್ಟೆಯ ಏರಿಳಿತ ಅವಲಂಭಿಸಿರುತ್ತದೆ. ಆದರೆ ಬ್ಯಾಂಕ್ ನಲ್ಲಿ ಮೂರು ವರ್ಷ ಠೇವಣಿ ಇಟ್ಟಲ್ಲಿ, ಬಡ್ಡಿ ದೊರಕು ವುದಲ್ಲದೆ, ತೆರಿಗೆ ವಿನಾಯತಿಯೂ ದೊರಕು ವಂತೆ ಸೂಕ್ತ ತಂತ್ರ ರೂಪಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com