ಸಾರಂಗ್ ತಂಡಕ್ಕೆ ಮಹಿಳಾ ಸೇರ್ಪಡೆ

ಯಾವ ಯುದ್ಧ ವಿಮಾನಗಳಿಗೂ ಕಡಿಮೆ ಇಲ್ಲದಂತೆ ವೈಮಾನಿಕ ಕಸರತ್ತು ನಡೆಸುವ ಮಿಲಿಟರಿ ಹೆಲಿಕಾಪ್ಟರ್ `ಸಾರಂಗ್' ತಂಡಕ್ಕೆ ಮಹಿಳಾ ಅಧಿಕಾರಿಗಳಾದ...
ಸಾರಂಗ್ ತಂಡ (ಸಂಗ್ರಹ ಚಿತ್ರ)
ಸಾರಂಗ್ ತಂಡ (ಸಂಗ್ರಹ ಚಿತ್ರ)

ಬೆಂಗಳೂರು: ಯಾವ ಯುದ್ಧ ವಿಮಾನಗಳಿಗೂ ಕಡಿಮೆ ಇಲ್ಲದಂತೆ ವೈಮಾನಿಕ ಕಸರತ್ತು ನಡೆಸುವ ಮಿಲಿಟರಿ ಹೆಲಿಕಾಪ್ಟರ್ `ಸಾರಂಗ್' ತಂಡಕ್ಕೆ ಮಹಿಳಾ ಅಧಿಕಾರಿಗಳಾದ ಸ್ಕಾಡ್ರನ್ ಲೀಡರ್ ದೀಪಿಕಾ ಮಿಶ್ರಾ ಹಾಗೂ ಫ್ಲೈಟ್ ಲೆಫ್ಟಿನೆಂಟ್ ಸಂದೀಪ್ ಸೇರ್ಪಡೆಗೊಂಡಿದ್ದಾರೆ.

2006ರಲ್ಲಿ ಭಾರತೀಯ ವಾಯುಸೇನೆ ಆಕಾಡೆಮಿಗೆ ಫ್ಲೈಟ್ ಕೆಡೆಟ್ ಆಗಿ ದೀಪಿಕಾ ಮಿಶ್ರಾ ಸೇರ್ಪಡೆಯಾಗಿದ್ದರು. ಆಗ, ವೈಮಾನಿಕ ಕಸರತ್ತು ನಡೆಸುವ ಏಕೈಕ ಏರೋಬ್ಯಾಟಿಕ್ ತಂಡ `ಸೂರ್ಯ ಕಿರಣ' ನಂತರ `ಸಾರಂಗ್' ತಂಡದ ಬಗ್ಗೆ ಆಸಕ್ತಿ ಹೊಂದಿದ್ದರು. ಆದರೆ, ಮಹಿಳಾ ಅಧಿಕಾರಿಗಳಿಗೆ ಸಿಂಗಲ್ ಎಂಜಿನ್ ಹೆಲಿಕಾಪ್ಟರ್ ಚಾಲನೆಗೆ ಮಾತ್ರ ಅವಕಾಶವಿತ್ತು. ಹೀಗಾಗಿ ಸಿಂಗಲ್ ಎಂಜಿನ್ ಹೆಲಿಕಾಪ್ಟರ್‍ಗಳಾದ ಚೇತಕ್, ಚಿತಾ ಘಟಕಕ್ಕೆ ಸೇರ್ಪಡೆಯಾದರು.

ಆದರೆ, 2010ರಲ್ಲಿ ಭಾರತೀಯ ವಾಯುಸೇನೆ ಕಾಯ್ದೆಯಲ್ಲಿ ತಿದ್ದುಪಡಿ ತಂದು ಎರಡು ಎಂಜಿನ್ ಹೆಲಿಕಾಪ್ಟರ್‍ಗೆ ಮಹಿಳಾ ಅಧಿಕಾರಿ ಸೇರ್ಪಡೆಯಾಗಬಹುದು ಎಂದು ನಿಯಮ ತಂದಿತ್ತು. ಹೀಗಾಗಿ, 1600 ತಾಸುಗಳ ಕಾಲ ಹಾರಾಟ ನಡೆಸಿದ್ದ ದೀಪಿಕಾ ಅವರು ಸಾರಂಗ್ ತಂಡಕ್ಕೆ ಸೇರಲು ಅನುಕೂಲವಾಯಿತು. ಸ್ವದೇಶಿ ನಿರ್ಮಿತ ಸುಧಾರಿತ ಲಘು ಹೆಲಿಕಾಪ್ಟರ್ ತಂಡಕ್ಕೆ ಸೇರ್ಪಡೆಯಾದ ಮೊದಲ ಪೈಲಟ್ ದೀಪಿಕಾ ಆಗಿದ್ದಾರೆ.

ಕಳೆದ ಜುಲೈ ತಿಂಗಳಲ್ಲಿ ದೀಪಿಕಾ ಸಾರಂಗ್ ತಂಡ ಸೇರಿದರು. ಇವರ ಪತಿ ಸೌರಭ್ ಕಕ್ಕರ್ ಕೂಡಾ ಏರೋನಾಟಿಕಲ್ ಎಂಜಿನಿಯರಿಂಗ್ ಆಫೀಸರ್ ಆಗಿ ಸಾರಂಗ ತಂಡಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೀಪಿಕಾ ಅವರೊಂದಿಗೆ ಮತ್ತೊಬ್ಬ ಮಹಿಳಾ ಅಧಿಕಾರಿ ಫ್ಲೈಟ್ ಲೆಫ್ಟಿನೆಂಟ್ ಸಂದೀಪ್ ಸಾರಂಗ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com