ಪಾಕ್‌ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ, 10 ಬಿಎಸ್‌ಎಫ್ ಶಿಬಿರಗಳ ಮೇಲೆ ದಾಳಿ, ಒಬ್ಬ ಬಿ ಎಸ್ ಎಫ್ ಸೈನಿಕ ಸಾವು

ದೇಶದಲ್ಲಿ ಜ.26ರ ಗಣರಾಜ್ಯೋತ್ಸವ ಸಂಭ್ರಮವನ್ನು ...
ಪಾಕ್‌ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ, 10 ಬಿಎಸ್‌ಎಫ್ ಶಿಬಿರಗಳ ಮೇಲೆ ದಾಳಿ, ಒಬ್ಬ ಬಿ ಎಸ್ ಎಫ್ ಸೈನಿಕ ಸಾವು
Updated on

ಬೆಂಗಳೂರು: ದೇಶದಲ್ಲಿ ಜ.26ರ ಗಣರಾಜ್ಯೋತ್ಸವ ಸಂಭ್ರಮವನ್ನು ಹೇಗಾದರೂ ಮಾಡಿ ಹಾಳುಗೆಡವಲು ಪಣತೊಟ್ಟಿರುವ ಪಾಕ್ ಸೇನೆ ಸೋಮವಾರ  ಮತ್ತೆ ಕದನ ವಿರಾಮ ಉಲ್ಲಂಘಿಸಿ, ಅಪ್ರಚೋದಿತ ಗುಂಡಿನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ

ಪಾಕಿಸ್ತಾನ ಇಂದು ಗಡಿ ರಕ್ಷಣಾ ಪಡೆ(ಬಿಎಸ್‌ಎಫ್)ಯ ಔಟ್‌ಪೋಸ್ಟ್ ಗಳನ್ನು ಗುರಿಯಾಗಿಸಿಕೊಂಡು, ಬಿಎಸ್‌ಎಫ್ ನ 10 ಶಿಬಿರಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.

ಜಮ್ಮು ಮತ್ತು ಕಾಶ್ಮೀರದ ಕಥುವಾ ಮತ್ತು ಸಾಂಬಾ ಜಿಲ್ಲೆಯ 10 ಬಿಎಸ್‌ಎಫ್ ಔಟ್‌ಪೋಸ್ಟ್ ಗಳ ಮೇಲೆ ಪಾಕ್ ಸೇನಾ ಪಡೆಗಳು ನಿರಂತರ ಗುಂಡಿನ ದಾಳಿ ನಡೆಸುತ್ತಿವೆ ಎಂದು ಕತುವಾ ಉಪ ಪೋಲಿಸ್ ಆಯುಕ್ತ ಶಾಹಿದ್ ಇಖ್ಬಾಲ್ ಚೌಧರಿ ಅವರು ಹೇಳಿದ್ದಾರೆ.

ಈ ದಾಳಿಯಲ್ಲಿ ಒಬ್ಬ ಬಿ ಎಸ್ ಎಫ್ ಸೈನಿಕ ಮೃತ ಪಟ್ಟಿದ್ದಾನೆ ಎಂದು ಅವರು ತಿಳಿಸಿದ್ದಾರೆ. ಸಾಂಬಾ ಪ್ರದೇಶದಲ್ಲಿ ನಿಯೋಜಿತರಾಗಿದ್ದ ಇವರು ದೇವಿಂದರ್ ಕುಮಾರ್ ಎಂದು ಗುರುತಿಸಲಾಗಿದೆ. ಭಾರತ ಕೂಡ ಪ್ರತಿದಾಳಿಯನ್ನು ಮುಂದುವರೆಸಿದೆ ಎಂದು ತಿಳಿದು ಬಂದಿದೆ.

ಸಾಂಬಾ ಜಿಲ್ಲೆಯಲ್ಲೂ ಭಾರತೀಯ ಸೇನಾ ಶಿಬಿರಗಳ ಮೇಲೆ ಪಾಕ್ ಸೇನಾಪಡೆಗಳು ಎರಡು ಸುತ್ತಿನ ಗುಂಡಿನ ದಾಳಿ ನಡೆಸಿವೆ ಎಂದು ಸಾಂಬಾ ಎಸ್‌ಎಸ್‌ಪಿ ಅನಿಲ್ ಮಗೋತ್ರಾ ಅವರು ತಿಳಿಸಿದ್ದಾರೆ.

ಈ ಮಧ್ಯೆ, ಪದೆಪದೇ ಪಾಕಿಸ್ತಾನದ ಕದನ ವಿರಾಮ ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ಗಡಿ ಪ್ರದೇಶದ ಗ್ರಾಮಗಳ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳುವುದು ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com